ಕಲೆ ಮನುಷ್ಯನ ಅಸ್ಮಿತೆಯ ಸೂಚಕ

KannadaprabhaNewsNetwork |  
Published : Oct 26, 2026, 04:00 AM IST
ಲಲಿತಕಲಾ ಅಕಾಡೆಮಿಯಿಂದ ಕಲಾಕುಸುಮ ಕಾರ್ಯಕ್ರಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಲೆಯೂ ಮನುಷ್ಯನ ಅಸ್ಮಿತೆಯನ್ನು ಸೂಚಿಸುತ್ತದೆ, ಕಲೆಗೆ ಅಪಾರವಾದ ಶಕ್ತಿ ಇದ್ದು, ಕಲೆಯು ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಚಿತ್ರಕಲೆ ಸಂಗೀತ ನೃತ್ಯ ಯಾವುದೇ ಕಲೆಯಾದರೂ ಸರಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಅದು ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ ಎಂದು ಹಿರಿಯ ಕಲಾವಿದ ಪಿ.ಎಸ್‌.ಕಡೆಮನಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಲೆಯೂ ಮನುಷ್ಯನ ಅಸ್ಮಿತೆಯನ್ನು ಸೂಚಿಸುತ್ತದೆ, ಕಲೆಗೆ ಅಪಾರವಾದ ಶಕ್ತಿ ಇದ್ದು, ಕಲೆಯು ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಚಿತ್ರಕಲೆ ಸಂಗೀತ ನೃತ್ಯ ಯಾವುದೇ ಕಲೆಯಾದರೂ ಸರಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಅದು ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ ಎಂದು ಹಿರಿಯ ಕಲಾವಿದ ಪಿ.ಎಸ್‌.ಕಡೆಮನಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಜರುಗಿದ ಕಲಾ ಕುಸುಮ ಶೀರ್ಷಿಕೆಯಡಿಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಚಿತ್ರಕಲಾ ನೈಪುಣ್ಯ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಮಯದಲ್ಲಿ ಕಾರ್ಯಕ್ರಮದ ಸದಸ್ಯೆ ಸಂಚಾಲಕಿ ರಾಜೇಶ್ವರಿ ಮೋಪಗಾರ ಮಾತನಾಡಿ, ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅರಳಿಸುವ ಸಲುವಾಗಿ ಕಲಾಕುಸುಮ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರಕಲಾ ನೈಪುಣ್ಯ ತರಬೇತಿ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿದೆ. ಯುವಜನತೆ ಮೊಬೈಲ್ ಮತ್ತು ಕಂಪ್ಯೂಟರ್‌ ಬಳಕೆ ಹೆಚ್ಚಿಸಿದ್ದು, ಮನುಷ್ಯನ ಜೀವನವು ದಿನದಿಂದ ದಿನಕ್ಕೆ ಯಾಂತ್ರಿಕವಾಗಿ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಹೀಗೆ ಮುಂದೆ ಸಾಗಿದರೆ ಕಲಾವಿದರ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದು ಮುಂದೆ ಸಮಾಜಕ್ಕೆ ಮಾರಕವಾಗಬಹುದು ಎಂಬ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಲಲಿತಕಲಾ ಅಕಾಡೆಮಿಯು ಈ ಮಹತ್ತರ ಯೋಜನೆಯನ್ನು ಕೈಗೊಂಡಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ತಮ್ಮ ಬಾಲ್ಯದ ದಿನಗಳಲ್ಲಿ ಚಿತ್ರ ಬಿಡಿಸಿದ ಅನುಭವವನ್ನು ಹಂಚಿಕೊಂಡರು. ಅಲ್ಲದೇ, ಅಕಾಡೆಮಿಯವರು ಕಲಾಕುಸುಮ ಎಂಬ ಕಾರ್ಯಕ್ರಮ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಮಾತನಾಡಿ, ಪರಿಶಿಷ್ಟ ಪಂಗಡದ ಐವತ್ತಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಲಿದ್ದಾರೆ. ಗಡಿ ಜಿಲ್ಲೆಯ ಮಕ್ಕಳಿಗೆ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅಕಾಡೆಮಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ವಿದ್ಯಾಧರ ಸಾಲಿ ಮಾತನಾಡಿ, ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಚಿತ್ರಕಲಾ ಶಾಲೆಯನ್ನು ತೆರೆಯಬೇಕು. ಆಗ ಈ ಕಲೆ ಜೀವಂತವಾಗಿ ಉಳಿಯಲಿದೆ ಎಂದರು.

ಶಿಕ್ಷಕ ಮಹಾದೇವಪ್ಪ ಮೋಪಗಾರ ನಿರೂಪಿಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಶಶಿಕಲಾ ನಾಯ್ಕೋಡಿ, ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ನಾಟಿಕಾರ, ಪ್ರಭು ಮುದ್ದೇಬಿಹಾಳ, ಚಿತ್ರ ಕಲಾವಿದರಾದ ಡಾ.ಶಶಿಕಲಾ ಹೂಗಾರ, ಶಿವಾನಂದ ಅಥಣಿ, ಕಮಲೇಶ ಭಜಂತ್ರಿ, ಹುಸೇನಿ ವಾಲಿಕಾರ, ಶಿವಕುಮಾರ, ಪಾರ್ವತಿ, ಸಾವಿತ್ರಿ ಬಿರಾದಾರ ಹಾಗೂ ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಿರಲಿ
ಮಹಿಳಾ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಆರಂಭಕ್ಕೆ ಚಿಂತನೆ: ಚಂದ್ರಶೇಖರ ಕಟಗೇರಿ