ಮಹಿಳಾ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಆರಂಭಕ್ಕೆ ಚಿಂತನೆ: ಚಂದ್ರಶೇಖರ ಕಟಗೇರಿ

KannadaprabhaNewsNetwork |  
Published : Oct 26, 2026, 04:00 AM IST
25ಬೀಳಗಿ1 | Kannada Prabha

ಸಾರಾಂಶ

ಬೀಳಗಿ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೮ನೇ ವಾರ್ಷಿಕೋತ್ಸವ ಹಾಗೂ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೫ನೇ ಸರ್ವ ಸಾಧಾರಣ ಸಭೆಯ ಸಂಘದ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ನೌಕರರ ಹಾಜರಾತಿ, ಸಾಲ ವಸೂಲಾತಿ, ಉಳಿತಾಯ, ಪ್ರಾಮಾಣಿಕತೆ ಇದ್ದಲ್ಲಿ ಸಂಘದ ಅಭಿವೃದ್ಧಿ ಆಗಲು ಸಾಧ್ಯ. ೨೦೧೮ರಲ್ಲಿ ಸ್ಥಾಪನೆಯಾದ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘ ಬರುವ ದಿನಗಳಲ್ಲಿ ಬೀಳಗಿ ಮಹಿಳಾ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಆರಂಭ ಮಾಡುವ ಗುರಿ ಹೊಂದಿದೆ ಸದ್ಯ ₹೨೨.೧೨ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ₹೧.೯೦ ಲಕ್ಷ ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಹೇಳಿದರು.

ಇಲ್ಲಿನ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೮ನೇ ವಾರ್ಷಿಕೋತ್ಸವ ಹಾಗೂ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೫ನೇ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆ ಉದ್ಘಾಟಿಸಿದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ವಿ.ಕೆ. ಗುರವ ಮಾತನಾಡಿ, ಸಹಕಾರ ಎನ್ನುವುದು ಜೀವರಾಶಿಗಳ ಉದಯದೊಂದಿಗೆ ಆರಂಭಗೊಂಡಿದೆ. ಆರ್ಥಿಕಾಭಿವೃದ್ಧಿಯಲ್ಲಿ ಸಹಕಾರ ಬಹಳ ಮುಖ್ಯ. ರಾಜ್ಯದಲ್ಲಿ ೮.೪೮ ಲಕ್ಷ ಸಹಕಾರ ಸಂಘಗಳಿದ್ದು, ಅದರಲ್ಲಿ ೬.೨೧ ಲಕ್ಷ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೂಡಿ ನಿರ್ದಿಷ್ಟ ಗುರಿಯೊಂದಿಗೆ ಕೆಲಸ ಮಾಡುವುದೇ ಸಹಕಾರ, ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಗಾಗಿ, ಪ್ರತಿಯೊಬ್ಬರಿಗಾಗಿ ಎಲ್ಲರೂ ಎನ್ನುವ ಧ್ಯೇಯವೇ ಸಹಕಾರ ಎಂದು ಅಭಿಪ್ರಾಯಪಟ್ಟರು.

ಸಂಘ ಕಳೆದ 8 ವರ್ಷಗಳಲ್ಲಿ ವಿಶ್ವ ಪರಿಸರ ದಿನಾಚರಣೆ, ಮಹಿಳಾ ದಿನಾಚರಣೆ, ವ್ರದ್ಧಾಶ್ರಮ ಭೇಟಿ ನೀಡಿ ಸಹಾಯ ಮಾಡುವುದು, ರಕ್ತದಾನ ಶಿಬಿರ ಹೀಗೆ ವಿವಿಧ ಕಾರ್ಯಕ್ರಮ ಆಯೋಜಿಸಿದ್ದಾರೆ. ಸ್ನೇಹದಿಂದ ಸಹಕಾರ ಸಂಘ ನೆಡೆದರೆ ಬೆಳವಣಿಗೆ ಸಾಧ್ಯ. ಸ್ವಾರ್ಥವಿಲ್ಲದ ಪ್ರೀತಿಯಿಂದ ಜೀವನ ಸಮೃದ್ಧಿ ಜೊತೆಗೆ ಜಾತಿ ಧರ್ಮ, ರಾಜಕಾರಣ ಯಾವುದು ಇಲ್ಲದೆ ಎಲ್ಲರಲ್ಲೂ ಏಕತೆ ಕಾಣುವ ಗೆಳೆಯರು ಬಳಗವೇ ನಿಜವಾದ ಸಹಕಾರ ಎಂದರು.

ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲರಾದ ಎಚ್.ಬಿ. ಧರ್ಮಣ್ಣವರ, ವಚನ ಪಿತಾಮಹ ಫ.ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ತಾಲೂಕು ಅಧ್ಯಕ್ಷೆ ಪ್ರಮೀಳಾ ಘೋರ್ಪಡೆ, ರೇಣುಕಾ ನಾಗನಗೌಡರ, ಶಂಕರ ಬಡಿಗೇರ, ವಕೀಲ ರವೀಂದ್ರ ಜೈನಾಪುರ, ಮುದ್ದು ಡಂಗಿ, ಶಿಕ್ಷಕರಾದ ಶ್ರೀಶೈಲ ದೊಡಮನಿ, ಯಾಸೀನ್ ದರ್ಗಾ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಿರಲಿ
ಕಲೆ ಮನುಷ್ಯನ ಅಸ್ಮಿತೆಯ ಸೂಚಕ