ರಾಮನಗರ: ಕಲೆ , ಸಾಹಿತ್ಯ ಮತ್ತು ಸಂಸ್ಕೃತಿ ದೇಶದ ಸಂಪತ್ತು. ಅದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಕಲೆ ಜೀವನದ ಅವಿಭಾಜ್ಯ ಅಂಗ, ಅದು ಪ್ರತಿಯೊಬ್ಬರಲ್ಲೂ ವಿವಿಧ ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯ. ಕಲೆ ಇಲ್ಲದ ದೇಶವಿಲ್ಲ, ಸಾಹಿತ್ಯವಿಲ್ಲದ ಭಾಷೆ ಇಲ್ಲ. ಅನಾದಿ ಕಾಲದಿಂದಲೂ ಜನ ಜೀವನದೊಂದಿಗೆ ಕಲೆ ಬೆರೆತಿದೆ. ಒಂದೊಂದು ಪ್ರದೇಶದಲ್ಲೂ ಒಂದೊಂದು ಭಾಷೆ, ಕಲೆ, ಸಂಸ್ಕೃತಿ ರೂಪಗೊಂಡು ಸಮಾಜದೊಂದಿಗೆ ಅನನ್ಯವಾಗಿ ಬೆರೆತಿವೆ. ಮಕ್ಕಳಿಗೆ ಬಾಲ್ಯದಿಂದಲೇ ಅವುಗಳ ಬಗ್ಗೆ ತಿಳಿಸಬೇಕು ಎಂದು ಹೇಳಿದರು.
ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಅರಿತುಕೊಳ್ಳಲು ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಪೋಷಕರು ಮಕ್ಕಳನ್ನು ಕೇವಲ ಪಠ್ಯಗಳಿಗೆ ಮಾತ್ರ ಸೀಮಿತಗೊಳಿಸದೆ, ಕಲೆ ಸಾಹಿತ್ಯದಲ್ಲೂ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಇಕ್ಬಾಲ್ ಹುಸೇನ್ ಹೇಳಿದರು.ರಾಜ್ಯ ವೈಜ್ಞಾನಿಕ ಸಂಶೋಧನಾ ಮಂಡಳಿ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕಲೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಕಲೆ ನಮ್ಮ ಬದುಕನ್ನು ರೂಪಿಸುವ ಜೊತೆಗೆ ಮನಸ್ಸನ್ನು ನೆಮ್ಮದಿಗೊಳಿಸುತ್ತದೆ. ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ನಮ್ಮ ಬದುಕಿನ ಕೌಶಲ್ಯ, ರೀತಿ ರಿವಾಜು, ಸಂಸ್ಕೃತಿಯನ್ನು ಕಲಿಸುವ ಜೊತೆಗೆ ಪುರಾತನ ಘಟನೆಗಳನ್ನು ಮರುಕಳಿಸವಂತೆ ಮಾಡುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಇಂದು ಅನೇಕ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅವರನ್ನು ಕಲೆಯಲ್ಲಿ ತೊಡಗಿಸಿದರೆ ಬದಲಾವಣೆ ಕಾಣಬಹುದು. ಕಲೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿರುವ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ಕಾರ್ಯವನ್ನು ಶ್ಲಾಘಿಸಿದರು.
ಕೋಟ್ ...............
- ಹುಲಿಕಲ್ ನಟರಾಜು
ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿ ಪ್ರದಾನ
ಬಾಕ್ಸ್ ...........
ಪತ್ರಕರ್ತರಾದ ಸು.ತಾ.ರಾಮೇಗೌಡ, ಚೆಲುವರಾಜು, ರುದ್ರೇಶ್ , ಕೆ.ಅರುಣ್ , ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕನ್ನಡಪರ ಹೋರಾಟಗಾರ ಗೋವಿಂದರಾಜು, ಆರ್ ಬಿಎಲ್ ಮಾಲೀಕ ಲೋಕೇಶ್ , ಭರತನಾಟ್ಯ ಕಲಾವಿದೆ ಕಾವ್ಯಶ್ರೀ, ಗಾಯಕ ರಘುನಂದನ್ , ರೇಣುಕಾ ಟಿಫಾನಿಸ್ ಮಾಲೀಕ ನಾಗರಾಜ್ ಅವರಿಗೆ ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
16ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕರುನಾಡ ಜಾನಪದ ಕಲಾ ಮಹೋತ್ಸವ ಸಮಾರಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು.
2.ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕರುನಾಡ ಜಾನಪದ ಕಲಾ ಮಹೋತ್ಸವ ಸಮಾರಂಭದಲ್ಲಿಸಾಧಕರಿಗೆ ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.