ಕಲೆ, ಸಾಹಿತ್ಯ, ನೃತ್ಯ ಮನೋಲ್ಲಾಸದ ಚೈತನ್ಯ: ಎ.ವಿ. ಸೂರ್ಯನಾರಾಯಣಸ್ವಾಮಿ

KannadaprabhaNewsNetwork |  
Published : Dec 05, 2025, 01:30 AM IST
ತರೀಕೆರೆಯಲ್ಲಿ ಅಂಚೆ ವೆಂಕಟರಾಮಯಯ್ಯ ಶ್ರೀಮತಿ ಸೀತಮ್ಮ ಜನ್ಮಶತಕ ಸಮಾರಂಭ | Kannada Prabha

ಸಾರಾಂಶ

ತರೀಕೆರೆಪುರಾಣ ಇತಿಹಾಸ ಬಿಂಬಿಸುವ ಹರಿಕಥೆ, ರಂಗಗೀತೆ ಗಾಯನ ಮತ್ತು ನೃತ್ಯ ಇತ್ಯಾದಿಗಳು ಮನೋಲ್ಲಾಸ ಮೂಡಿಸುವ ಚೈತನ್ಯವಾಗಿದೆ ಎಂದು ಮೈಸೂರು ಶಾರದ ವಿಲಾಸ ಕಾಲೇಜು ವಿಶ್ರಾಂತ ಕನ್ನಡ ಉಪನ್ಯಾಸಕ ಎ.ವಿ. ಸೂರ್ಯ ನಾರಾಯಣಸ್ವಾಮಿ ಹೇಳಿದ್ದಾರೆ.

ತರೀಕೆರೆಯಲ್ಲಿ ಅಂಚೆ ವೆಂಕಟರಾಮಯಯ್ಯ ಶ್ರೀಮತಿ ಸೀತಮ್ಮ ಜನ್ಮಶತಕ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಪುರಾಣ ಇತಿಹಾಸ ಬಿಂಬಿಸುವ ಹರಿಕಥೆ, ರಂಗಗೀತೆ ಗಾಯನ ಮತ್ತು ನೃತ್ಯ ಇತ್ಯಾದಿಗಳು ಮನೋಲ್ಲಾಸ ಮೂಡಿಸುವ ಚೈತನ್ಯವಾಗಿದೆ ಎಂದು ಮೈಸೂರು ಶಾರದ ವಿಲಾಸ ಕಾಲೇಜು ವಿಶ್ರಾಂತ ಕನ್ನಡ ಉಪನ್ಯಾಸಕ ಎ.ವಿ. ಸೂರ್ಯ ನಾರಾಯಣಸ್ವಾಮಿ ಹೇಳಿದ್ದಾರೆ.

ಅಂಚೆ ಪ್ರತಿಷ್ಠಾನದಿಂದ ಅಂಚೆ ಪ್ರತಿಷ್ಠಾನ ಆವರಣದಲ್ಲಿ ಖ್ಯಾತ ಹಾರ್ಮೋನಿಯಂ ನಾದಕ ಕಲಾವಿದ, ಶ್ರೀ ರಾಮಭಜನಾ ಆರಾಧಕ ಶ್ರೀ ಅಂಚೆ ವೆಂಕಟರಾಮಯ್ಯ ಹಾಗೂ ಇವರ ಸಹಧರ್ಮಿಣಿ ಶ್ರೀಮತಿ ಸೀತಮ್ಮ ಜನ್ಮಶತಾಬ್ದಿ ಸ್ಮರಣೆ ಹಾಗೂ ದತ್ತಜಯಂತಿ ಪ್ರಯುಕ್ತ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದರು.

ಪುರಾಣ ಪುಣ್ಯಕಥೆ, ಭಜನೆ, ಸಂಕೀರ್ತನೆ ಹರಿಕಥೆ ರಂಗ ಗೀತೆಗಳ ಗಾಯನ ಆಯಾಸಗೊಂಡ ಮನಸ್ಸಿಗೆ ನವ ಚೈತನ್ಯ ವನ್ನು ನೀಡುವ ದಿವ್ಯೌಷಧ. ಸಂಗೀತ, ನೃತ್ಯ, ನಾಟಕ ಯಕ್ಷಗಾನ ರೂಪಕಗಳು ವಿಶೇಷವಾಗಿ ಪೌರಾಣಿಕ ಹಾಗೂ ಧಾರ್ಮಿಕ ಹಿನ್ನಲೆಯ ಇತಿಹಾಸದೊಂದಿಗೆ ಭಕ್ತಿ ಶ್ರದ್ದೆ ಮತ್ತು ಆಸಕ್ತಿಯನ್ನು ಮೂಡಿಸುವ

ದಿವ್ಯ ಮಾರ್ಗವಾಗಿದ್ದು ಕಲಾ ಪ್ರಕಾರಗಳಾದ ನಾಟಕ ರಂಗಕಲೆ ದೃಶ್ಯ ಮತ್ತು ಶ್ರವ್ಯ ಮಾಧ್ಯಮವಾಗಿದ್ದು ಇತಿಹಾಸ ಪುರಾಣವನ್ನು ನೆನಪಿಗೆ ತರುವಂತಹ ಸಾಹಿತ್ಯವನ್ನ ಪ್ರಾಚೀನ ಕಾಲದಿಂದಲೂ ರಂಗಸಜ್ಜಿಕೆಯೊಂದಿಗೆ, ವೇಷಭೂಷಣ, ಸಂಗೀತದ ಸಮ್ಮಿಲನದೊಂದಿಗೆ ನಮ್ಮ ಕಣ್ಣಮುುಂದೆಯೇ ದೃಷ್ಟಾಂತಗಳು ನಡೆಯುತ್ತಿದೆ ಎಂದು ಭಾಸವಾಗುವ ಹಾಗೆ ಅನೇಕ ರಂಗತಜ್ಞರು ಅಚ್ಚುಕಟ್ಟಾಗಿ ರೂಪಿಸಿ ರಂಗಭೂಮಿ ಶ್ರೀಮಂತಗೊಳಿಸಿ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಈ ಹಿಂದೆ ಪಟ್ಟಣದಲ್ಲಿ ವಿವಿಧ ಕಲಾ ಪ್ರದರ್ಶನ ನಡೆದಿದ್ದು ನಾಡಿನ ಹೆಸರಾಂತ ರಂಗಭೂಮಿ ನಾಟಕ ಕಂಪನಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳು ಜನಮೆಚ್ಚುಗೆ ಪಡೆಯುತ್ತಿದ್ದು ನಾಡಿನ ಅನೇಕ ಹಿರಿಯ ರಂಗಭೂಮಿ ಕಲಾವಿದರು ತಮ್ಮ ಕಲಾಪ್ರೌಢಿಮೆ ಪ್ರದರ್ಶಿಸುವ ಉತ್ತಮ ವೇದಿಕೆಯಾಗಿತ್ತು ಹಾಗೂ ಅನೇಕ ಕಿರಿಯ ಕಲಾವಿದರಿಗೆ ಅನುಭವ ಹಾಗೂ ಮಾರ್ಗದರ್ಶನ ನೀಡುವ ವೇದಿಕೆಯಾಗಿತ್ತು ಎಂದು ಹೇಳಿದರು

ಬೆಂಗಳೂರು ರಂಗರತ್ನಾಕರ ಸಂಸ್ಥೆ ಅಧ್ಯಕ್ಷ ಎಚ್.ಎನ್.ಗೋವಿಂದೇಗೌಡ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಈ ಸಾಂಸ್ಕೃತಿಕ ಕಾರ್ಯಕ್ರಮ ಕಲಾವಿದರಿಗೆ, ರಂಗಗೀತೆ ಗಾಯಕರಿಗೆ ವೇದಿಕೆ ಕಲ್ಲಿಸಿಕೊಟ್ಟ, ಸಾಹಿತಿ ಎ.ವಿ. ಸೂರ್ಯನರಾಯಣ ಸ್ವಾಮಿ ಮತ್ತು ಅಂಚೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ್ ಅವರಿಗೆ ಧನ್ಯವಾದನ್ನು ಅರ್ಪಿಸಿದರು.ಕಲಾವಿದ ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಹರಿಕಥೆ ಮತ್ತು ರಂಗಭೂಮಿ ನಾಡಿನ ಭವ್ಯತೆ, ಇತಿಹಾಸ, ಪರಂಪರೆ ಹಾಗೂ ಒಳಿತು-ಕೆಡಕನ್ನು ಅರಿತು ಸನ್ಮಾರ್ಗದಲ್ಲಿ ನಡೆಯುವಲ್ಲಿ ಜನತೆಗೆ ಉತ್ತಮ ಮಾರ್ಗದರ್ಶನ ಸಾರುವ ಹಾಗೂ ನೋವು ಮರೆಸುವ ಶಕ್ತಿ ಈ ಕಲೆಗಳಲ್ಲಿ ಅಡಕವಾಗಿದೆ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು ಅರ್ಥಪೂರ್ಣ ವಾಗಿದೆ ಎಂದು ಹೇಳಿದರು.ನಾಡಿನ ಹೆಸರಾಂತ ಹರಿಕಥಾ ವಿದ್ವಾಂಸ ಎನ್.ಕೆ.ಮೋಹನ್ ಕುಮಾರ್ ಭಕ್ತ ಸುಧನ್ಯ ಎಂಬ ಹರಿಕಥೆಯನ್ನು ಪ್ರಸ್ತುತ ಪಡಿಸಿದರು. ಕಿರಗಸೂರು ರಾಜಪ್ಪ ಮತ್ತು ತಂಡದವರು ರಂಗಗೀತೆಗಳನ್ನು ಹಾಡಿದರು.

ಅಂಚೆ ಪ್ರತಿಷ್ಠಾನದಿಂದ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಯಿತು.ಅಂಚೆ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ್, ಖಚಾಂಚಿ ಎಚ್.ವಿ.ಸತ್ಯನಾರಾಯಣ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ, ಅಜ್ಜಂಪುರ ರೇವಣ್ಣ, ಹಿರಿಯ ಪತ್ರಕರ್ತೆ ಪವಿತ್ರಾ ಎನ್.ವೆಂಕಟೇಶ್, ಡಾ. ಎಚ್.ಎಂ. ಮರುಳಸಿದ್ದಯ್ಯ ಪಟೇಲ್, ಪುರಸಭೆ ಸದಸ್ಯ ಟಿ.ಜಿ.ಅಶೋಕ ಕುಮಾರ್, ಶಾರದ ಎನ್.ಮಂಜುನಾಥ್, ಸುನಿತಾ ಕಿರಣ್, ಲತಾಗೋಪಾಲಕೃಷ್ಣ, ವಿಜಯಪ್ರಕಾಶ್ ಅಂಚೆ ಮನೆತನದ ಸದಸ್ಯರು ಭಾಗವಹಿಸಿದ್ದರು.-

4ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅದ್ಯಕ್ಷ ಎ.ವಿ.ನಾಗಭೂಷಣ್ ಅವರು ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು. ಸಾಹಿತಿ ಎ.ವಿ.ಸೂರ್ಯನಾರಾಯಣಸ್ವಾಮಿ, ಕಲಾವಿದರಾದ ಕನ್ನಡಶ್ರೀ ಬಿ,.ಎಸ್.ಭಗವಾನ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತದ ವಿರುದ್ಧ ಅಂಗವಿಕಲರ ಆಕ್ರೋಶ
ಮಾದಕ ದ್ರವ್ಯ ಸೇವನೆ ಬದುಕಿನ ವಿನಾಶಕ್ಕೆ ದಾರಿ; ಮೋಹನ್ ರಾಜಣ್ಣ