ಕನ್ನಡಪ್ರಭ ವಾರ್ತೆ ಹಲಗೂರು
ಡಿ.ಹಲಸಹಳ್ಳಿಯ ಗವಿಮಠದಲ್ಲಿ ಕೃಷ್ಣ ರಾಯಚೂರ್ ರಚಿಸಿರುವ ಹಳಗನ್ನಡ ಕಾವ್ಯ ಕಮ್ಮಟ ಲಾಂಛನ ಬಿಡುಗಡೆ, ಷಡಕ್ಷರ ಪೀಠ ಧನಗೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಸ ಥಿಯೇಟರ್ ಬೆಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಷಡಕ್ಷರ ಕವಿ -ಕಾವ್ಯ-ಪರಿಚಯ ಕುರಿತ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜ್ಞಾನವನ್ನು ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತ ಮಾಡಿದ್ದೇವೆ. ಅವರಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಆವಾಹನೆ ಮಾಡುವ ಪ್ರಯತ್ನಬೇಕು. ಇದರ ಜೊತೆಗೆ ನಮ್ಮ ನಾಡಿನ ನುಡಿ ಆದ ಹಳಗನ್ನಡಕ್ಕೆ ಹಾಗೂ ಸಂಸ್ಕೃತಿಗೆ ಆದ್ಯತೆ ನೀಡಿ ಬೆಳೆಸಬೇಕು ಎಂದರು.ಗವಿಮಠದಲ್ಲಿ ಷಡಕ್ಷರ ದೇವ ಬರೆದಿರುವ ಶಬರ ಶಂಕರ ವಿಳಾಸಂ, ರಾಜಶೇಖರ ವಿಳಾಸಂ, ವೃಷಭೇಂದ್ರ ವಿಜಯಂ ಮುಂತಾದ ಕೃತಿಗಳನ್ನು ವಿದ್ಯಾರ್ಥಿಗಳು ಓದಿ ತಿಳಿದುಕೊಂಡು ಜಿಲ್ಲೆಯ ಹಿರಿಮೆ ಎತ್ತಿ ಹಿಡಿದು ಅವುಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಸಾಹಿತ್ಯ ಕೃತಿಗಳನ್ನು ರಚಿಸಿದ ವ್ಯಕ್ತಿಗಳ ಬಗ್ಗೆ ಪರಿಚಯ ಮಾಡಲು ಸೂಕ್ತ ವೇದಿಕೆ ಸಿಗುವುದಿಲ್ಲ. ಅದೇ ಒಂದು ರಾಜಕೀಯ ಸಭೆ ಸಮಾರಂಭಕ್ಕೆ ಸಾಕಷ್ಟು ಜನರು ಸೇರುತ್ತಾರೆ. ಕವಿಗೋಷ್ಠಿ, ಸಾಹಿತ್ಯ ವಿಮರ್ಶೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಜನರು ಸೇರುವುದಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಧನಗೂರು ಮಠದ ಮುಮ್ಮಡಿ ಷಡಕ್ಷರ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧನಗೂರು ಒಂದು ಪವಿತ್ರ ಹಾಗೂ ಪುಣ್ಯಕ್ಷೇತ್ರ. ಗವಿಮಠದಲ್ಲಿ ಷಡಕ್ಷರ ದೇವಾ ಹಲವು ಕೃತಿಗಳನ್ನು ರಚಿಸಿರುವುದರಿಂದ ಧನಗೂರು ಹಾಗೂ ಗವಿಮಠ ಹೆಗ್ಗಳಕೆಗೆ ಪಾತ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷ್ಣ ರಾಯಚೂರು ಬರೆದಿರುವ ಅಳಗನ್ನಡ ಕಾವ್ಯ ಕಮ್ಮಟ ಲಾಂಛನವನ್ನು ವಿದ್ಯಾರ್ಥಿಗಳ ಮೂಲಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿ.ಹಲಸಹಳ್ಳಿ ಗವಿಮಠದ ಷಡಕ್ಷರ ಸ್ವಾಮೀಜಿ, ಧನಗೂರು ಮಠದ ಮುಮ್ಮಡಿ ಷಡಕ್ಷರ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲೂರು ವೆಂಕಟಪ್ಪ, ನಿವೃತ್ತ ಶಿಕ್ಷಕ ಡಿ. ರಾಮು, ಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶೈಲಜಾ, ಬೆಂಗಳೂರು ಸಂಸ ಥಿಯೇಟರ್‌ನ ಸಂಸ್ಥಾಪಕ ಗೌರವಾಧ್ಯಕ್ಷ ಎಂ.ಜಯರಾಮ, ಸುರೇಶ್ , ದಡಮಳ್ಳಿ ಉಮೇಶ, ಸೇರಿದಂತೆ ಇತರರು ಇದ್ದರು.