ಗದಗ: ಪ್ರಾಚೀನ, ಅರ್ವಾಚೀನ ಸಾಹಿತ್ಯ, ಇತಿಹಾಸ ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿದ ಕನ್ನಡ ಸಾಹಿತ್ಯ ವಿವಿಧ ಕಾಲಘಟ್ಟದ ಸಾಹಿತ್ಯ, ಇತಿಹಾಸವನ್ನು ಅಧ್ಯಯನ ಮಾಡಲು ಲೇಖನ ರೂಪದ ಸಾಹಿತ್ಯ ಮುನ್ನುಡಿಯಾಗಿದೆ ಎಂದು ನರಗುಂದದ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಡಾ. ಎಸ್.ವಿ. ಮನಗುಂಡಿ ತಿಳಿಸಿದರು.
ಕೃತಿ ಪರಿಚಯ ಮಾಡಿದ ಎಸ್.ಯು. ಸಜ್ಜನಶೆಟ್ಟರ ಮಾತನಾಡಿ, ಕೃತಿಯಲ್ಲಿ ಅನುಭಾವಪೂರ್ಣ ಹನ್ನೆರಡು ಲೇಖನಗಳಿವೆ. ಮುಖ್ಯವಾಗಿ ವಚನ ಸಾಹಿತ್ಯ, ದಾಸಸಾಹಿತ್ಯದ ಅನುಭಾವಿ ಕವಿಗಳ ಜೀವನದರ್ಶನ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ರಾಜಶೇಖರ ದಾನರಡ್ಡಿ ಅವರು ಸಾಹಿತ್ಯ ಸಂಸ್ಕೃತಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯ, ವ್ಯಕ್ತಿ ಹಾಗೂ ಸ್ಥಳದ ಮಹತ್ವವನ್ನು ಕುರಿತಾಗಿ ಆಯಾ ಸಂದರ್ಭಕ್ಕೆ ಬರೆದ ಲೇಖನಗಳನ್ನು ಒಟ್ಟುಗೂಡಿಸಿ ಉತ್ತಮ ಕೃತಿಯನ್ನು ಹೊರತಂದಿದ್ದಾರೆ ಎಂದರು.ಡಾ. ರಾಜಶೇಖರ ದಾನರಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎನ್‌ಸಿಸಿ ವಿಭಾಗದಲ್ಲಿ ಮೇಜರಿ ಆಗಿ ಪದೋನ್ನತಿ ಹೊಂದಿದ ವಿಡಿಎಸ್ ಕಾಲೇಜಿನ ಪ್ರಾಚಾರ್ಯ ಬಿ.ಎಸ್. ರಾಠೋಡ ಅವರನ್ನು ಸನ್ಮಾನಿಸಲಾಯಿತು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಸಿ.ಕೆ.ಎಚ್. ಶಾಸ್ತ್ರೀ, ಅರ್ಜುನ ಗೊಳಸಂಗಿ, ಅಂದಾನೆಪ್ಪ ವಿಭೂತಿ, ಶಿವಪ್ಪ ಕುರಿ, ಆರ್.ಎಚ್. ಕಬಾಡಿ, ಟಿ.ಎಂ. ದಂಡಗಿ, ಮಲ್ಲಿಕಾರ್ಜುನ ನಿಂಗೋಜಿ, ಬಿ.ಬಿ. ಹೊಳಗುಂದಿ, ಎಚ್.ಡಿ. ಕುರಿ, ಜೆ.ಎ. ಪಾಟೀಲ, ಚಂದ್ರಪ್ಪ ಬಾರಂಗಿ, ಎ.ಎಂ. ಅಂಗಡಿ, ರತ್ನಕ್ಕ ಪಾಟೀಲ, ಎಸ್.ಆರ್. ಹನುಮಗೌಡ್ರ, ಎಂ.ಎನ್. ಹೊಂಬಾಳಿ, ಖುಷಿ ಮಾಳೇಕೊಪ್ಪ, ಎಸ್.ಎಸ್. ಗಾಳಿ, ತುಷಾರ ದಾನರಡ್ಡಿ, ಸಿ.ಎಂ. ಮಾರನಬಸರಿ, ಕೆ.ಎಸ್. ಪಲ್ಲೇದ, ನಿರ್ಮಲಾ ಪಾಟೀಲ, ನಿರ್ಮಲಾ ತರವಾಡೆ, ಸುಶಾಂತೆ ನೀಲಗುಂದ, ಉಮಾ ಕಣವಿ, ನೀಲಮ್ಮ ಅಂಗಡಿ, ಶಿಲ್ಪಾ ಮ್ಯಾಗೇರಿ, ರಾಜಶೇಖರ ಕರಡಿ, ವಿ.ಕೆ. ದ್ಯಾಮನಗೌಡ್ರ, ಉಮೇಶ ಅರಹುಣಸಿ, ಸಿ.ಎಂ. ಪತ್ತಾರ, ಎಂ.ಎಫ್. ಡೋಣಿ, ಎಸ್.ಎಂ. ಗುಳಗುಳಿ, ಎಸ್.ಡಿ. ಗಾಂಜಿ, ಶಾಂತಲಾ ಹಂಚಿನಾಳ, ಕೆ.ಜಿ. ವ್ಯಾಪಾರಿ, ಪ್ರಭು ಗಂಜಿಹಾಳ, ಅಶೋಕ ಸತ್ಯರಡ್ಡಿ, ಅಶೋಕ ಅಕ್ಕಿ, ಸುಭಾಸಚಂದ್ರ ಸಂಕನೂರ ಮೊದಲಾದವರು ಉಪಸ್ಥಿತರಿದ್ದರು.