ಎಐಟಿ ಕಾಲೇಜಿನಲ್ಲಿ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಮೆಷಿನ್ ಇನ್ಪಾರ್ಮ್ಯಾಟಿಕ್ಸ್ ಉದಯೋನ್ಮುಖ ಸಂಶೋಧನೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ
ಆಧುನಿಕ ಜೀವನ ಪದ್ಧತಿಯಲ್ಲಿ ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿ ಪರಿಣಾಮಿಸುತ್ತಿದ್ದು ಪ್ರಸ್ತುತ ಕೃತಕಬುದ್ದಿ ಮತ್ತೆ ಬೇಡವಾದರೂ ಜನಿಸಿದ ನಂತರ ಅನುಸರಿಸಿಕೊಂಡು ಸೂಕ್ತವಾಗಿ ಉಪಯೋಗಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಮೆಷಿನ್ ಇನ್ಪಾರ್ಮ್ಯಾಟಿಕ್ಸ್ ಉದಯೋನ್ಮುಖ ಸಂಶೋಧನೆ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿಇಂದಿನ ದಿನಮಾನದಲ್ಲಿ ತಂತ್ರಜ್ಞಾನ ವರ್ಣಿಸುವುದು ಬಹಳ ಕಷ್ಟಸಾಧ್ಯ. ಪ್ರತಿಯೊಂದು ರಂಗದಲ್ಲೂ ತಂತ್ರಜ್ಞಾನ ಅವಶ್ಯಕ. ಈ ತಂತ್ರಜ್ಞಾನ ವ್ಯವಸ್ಥೆಗೆ ಅಂಟಿಕೊಂಡಿರುವ ಮನುಜ, ಬಿಟ್ಟಿರಲಾಗದ ಸ್ಥಿತಿಗೆ ತಲುಪಿದ್ದಾನೆ. ಇದೀಗ ಎಐ ತಂತ್ರಜ್ಞಾನ ಎಲ್ಲರಿಗೂ ಸಮಸ್ಯೆಯಾಗಿದ್ದು ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯ ಮಾಡಬೇಕಿದೆ ಎಂದರು.
ಬ್ರಹ್ಮಂಡ ಒಂದು ವಿಸ್ಮಯಕಾರಿ ಲೋಕ. ಈ ಲೋಕದ ರಹಸ್ಯ ಅರಿಯಲು ನೂರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ಮನಸ್ಸಿನ ಧ್ಯಾನದಿಂದಲೇ ಬ್ರಹ್ಮಂಡದ ಗ್ರಹಗಳ ಚಲನ-ವಲನ, ಕೆಲಸ- ಕಾರ್ಯ ಮತ್ತು ಪೃಥ್ವಿಯ ಪಂಚ ಭೂತಗಳ ಧ್ಯಾನ ದಿಂದ ಗ್ರಹಿಸುತ್ತಿದ್ದರು. ಈ ಪೂರ್ವಿಕರು ಉಳಿಸಿದ ಸಂಸ್ಕೃತಿ ಇಂದು ನಾವು ಬಳಸುತ್ತಿದ್ದೇವೆ ಎಂದರು.
ಶಿಕ್ಷಕರು ಶಿಕ್ಷಣದಲ್ಲಿನ ಮೌಲ್ಯ, ಸರಪಳಿ ಪ್ರತಿಯೊಂದು ಅಂಶ ಅರ್ಥಮಾಡಿಕೊಳ್ಳಬೇಕು. ಅತ್ಯಂತ ನವೀನ, ಸಮಕಾಲಿನ ಮತ್ತು ಉದ್ಯಮ ಆಧಾರಿತ ಪಠ್ಯಕ್ರಮದ ಮೂಲಕ ಹೇಗೆ ಶೈಕ್ಷಣಿಕ ವಿತರಣಾ ಪ್ರಕ್ರಿಯೆ ಮತ್ತು ಮೌಲ್ಯಮಾಪನ ತಂತ್ರಗಳ ಮೂಲಕ ಗುಣಮಟ್ಟದ ವಿದ್ಯಾರ್ಥಿಗಳನ್ನು ಹೊರ ತಂದು ಜಗತ್ತಿಗೆ ಅರ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಐಇಇಇ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ.ಚೆಂಗಪ್ಪ ಮಂಜಂದೀರಾ, ಸಿಐಎಸ್ ಡಾ.ಸುಮನಾ ಮರಡಿತ್ತಾಯ, ಇಸಿಎಂಐ ಪ್ರಕಟಣೆ ಅಧ್ಯಕ್ಷ ಡಾ.ಅನಿಲ್‌ಕುಮಾರ್, ಆದಿಚುಂಚನಗಿರಿ ವಿಶ್ವವಿ ದ್ಯಾಲಯದ ರಿಜಿಸ್ಟರ್ ಡಾ. ಸಿ.ಕೆ.ಸುಬ್ಬರಾಯ, ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಸಂಗಾರೆಡ್ಡಿ ಉಪಸ್ಥಿತರಿದ್ದರು.