ಕಲಾವಿದ ರಾಜು ತಾಳಿಕೋಟಿ ನಿಧನ ರಂಗಭೂಮಿಗೆ ತುಂಬಲಾರದ ನಷ್ಟ-ಭಾಸ್ಕರ್

KannadaprabhaNewsNetwork |  
Published : Oct 19, 2025, 01:02 AM IST
ಪೊಟೋ ಪೈಲ್ ನೇಮ್ ೧೭ಎಸ್‌ಜಿವಿ೧ ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ  ಶುಕ್ರವಾರ ಆಯೋಜಿಸಲಾದ ರಂಗಭೂಮಿ ಕಲಾವಿದ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಡಾ.ರಾಜು ತಾಳಿಕೋಟಿ ಅವರ ನಿಧನದ ನಿಮಿತ್ಯ ಸಂತಾಪ ಸೂಚಕದಲ್ಲಿ ಪ್ರೊ.ಸಿ ಟಿ ಗುರುಪ್ರಸಾದ್   ಮಾತನಾಡಿದರು. | Kannada Prabha

ಸಾರಾಂಶ

ಬಡತನದಲ್ಲಿ ಅರಳಿದ ಕುಸುಮ, ಪ್ರತಿಭಾವಂತ ಕಲಾವಿದ ಡಾ. ರಾಜು ತಾಳಿಕೋಟಿ ಅವರ ನಿಧನ ವೃತ್ತಿ ರಂಗಭೂಮಿಗೆ, ಜನಪದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.

ಶಿಗ್ಗಾಂವಿ: ಬಡತನದಲ್ಲಿ ಅರಳಿದ ಕುಸುಮ, ಪ್ರತಿಭಾವಂತ ಕಲಾವಿದ ಡಾ. ರಾಜು ತಾಳಿಕೋಟಿ ಅವರ ನಿಧನ ವೃತ್ತಿ ರಂಗಭೂಮಿಗೆ, ಜನಪದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ರಂಗಭೂಮಿ ಕಲಾವಿದ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಡಾ. ರಾಜು ತಾಳಿಕೋಟಿ ಅವರ ನಿಧನದ ನಿಮಿತ್ತ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅವರಿಂದ ಕಲಿಯಬೇಕಾದುದು ಬಹಳ ಇದೆ ಅಂತಃಕರಣ ಇರುವ ಯಾವುದೇ ಪಾತ್ರ ಕೊಟ್ಟರು ಅದನ್ನು ಸರಿಯಾಗಿ ನಿಭಾಯಿಸುವ ಕಲಾವಿದ ಇದ್ದ ಎನ್ನುವುದು ನಮ್ಮ ಕನ್ನಡ ರಂಗಭೂಮಿಯ ಹೆಮ್ಮೆ ಅವರನ್ನು ಕಳೆದುಕೊಂಡಿದ್ದು ಬೇಸರವಾಗಿದೆ ಎಂದರು. ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವೃತ್ತಿ ರಂಗಭೂಮಿ ಕಲಾವಿದ ಡಾ. ರಾಜು ತಾಳಿಕೋಟಿ ಅವರ ಅಕಾಲಿಕ ನಿಧನ ಬೇಸರ ತಂದಿದೆ. ಕನ್ನಡದ ಪ್ರಸಿದ್ಧ ಕಲಾವಿದರನ್ನು ಕಳೆದುಕೊಂಡ ರಂಗಭೂಮಿ ಕ್ಷೇತ್ರ ಬಡವಾಗಿದೆ ಎಂದರು.ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಅವರು ಮಾತನಾಡಿ, ಕೋಮು ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ರಂಗ ಕಲಾವಿದ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಡಾ.ರಾಜು ತಾಳಿಕೋಟಿ ನಿಧನ ಅತ್ಯಂತ ದುಃಖದ ಸಂಗತಿಯಾಗಿದೆ ಎಂದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ಅವರು ಮಾತನಾಡಿ, ಒಡನಾಟದಲ್ಲಿದ್ದ ಸೃಜನಶೀಲ ಕಲಾವಿದ ಡಾ. ರಾಜು ತಾಳಿಕೋಟಿ ಅವರ ಅಗಲಿಕೆ ರಂಗಭೂಮಿ ಆಸಕ್ತರಿಗೆ ಬೇಸರ ತಂದಿದೆ ಎಂದರು.ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ