ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕಲ್ಯಾಣಮಂಟಪದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಹಾನಗಲ ಶ್ರೀಕುಮಾರೇಶ್ವರ ನಾಟ್ಯ ಸಂಘದ ಕುಮಾರಶ್ರೀ ಪ್ರಶಸ್ತಿ ಭಾಜನರಾದ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಇಂದಿಗೂ ರಂಗಭೂಮಿ ಕಲೆ ತನ್ನದೇ ಆದ ವೈಶಿಷ್ಟತೆ ಹೊಂದಿಕೊಂಡು ಬರುತ್ತಿದೆ. ರಂಗಭೂಮಿಯಿಂದಲೇ ಅನೇಕರು ಸಿನಿಮಾ ನಟ ನಟಿಗಳಾಗಿದ್ದಾರೆ. ನಮ್ಮ ತಾಲೂಕವು ಅತಿ ಹಿಂದುಳಿದರು ಸಹಾ ಹಾರಕೂಡ ಚೆನ್ನಬಸವೆಶ್ವರ ನಾಟ್ಯ ಸಂಘ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ಅಕಾಡೆಮಿ ಮತ್ತು ಕುಮಾರಶ್ರೀ ಪ್ರಶಸ್ತಿ ಪಡೆದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಂಕರಜೀ ಹಿಪ್ಪರಗಿ ಮಾತನಾಡಿ ತಮ್ಮ ಕಲಾ ಅನುಭವವನ್ನು ವಿವರಿಸಿದರು.ಚಿಂಚೋಳಿ ತಾಲೂಕಿನ ನಾಟಕ ಕಲಾವಿದರಾದ ಹಾನಗಲ್ ಕುಮಾರೇಶ್ವರ ನಾಟ್ಯಸಂಘದಿಂದ ಕುಮಾರಶ್ರೀ ಪ್ರಶಸ್ತಿ ಪಡೆದ ಮಲ್ಲಿಕಾರ್ಜುನರೆಡ್ಡಿ ನರನಾಳ, ಗೋಪಾಲರೆಡ್ಡಿ, ಚಂದ್ರಶೇಖರ ಲಗಶೆಟ್ಟಿ, ಶಾಮರಾವ ಕೊರವಿ, ಲಕ್ಷ್ಮಣ ಅವಂಟಿ, ಬಸವರಾಜ ದೇಶಮುಖ, ರಾವ ಪಾಟೀಲ ಮೋಘಾ, ಶಿವಯೋಗಿ ರುಸ್ತಂಪೂರ, ಗೈಬಣ್ಣ ವಾಲಿಕಾರ, ಸಂತೋಷ ಕಣ್ಣ, ಬಾಬುರಾವ ಉಪ್ಪಿನ, ಗೋಪಾಲ ಬಾಜೆಪಳ್ಳಿ, ಇತರರನ್ನು ಸನ್ಮಾನಿಸಲಾಯಿತು.ಪ್ರಶಾಂತ ಕಟ್ಟಿ ಸ್ವಾಗತಿಸಿ, ಶ್ರೀಧರ ವಗ್ಗಿ ವಂದಿಸಿದರು.