ಕನ್ನಡಪ್ರಭ ವಾರ್ತೆ ವಿಜಯಪುರ ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ವಿರುದ್ಧ ಶಡ್ಯಂತ್ರ ನಡೆದಿದೆ ಎಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಏ.4ರಂದು ದಾಖಲಿಸಿದ ದೂರಿನನ್ವಯ ದೂರಿನಲ್ಲಿರುವ ಆರೋಪಿಗಳಿಗಾಗಿ ವಿಜಯಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಹಿಳೆಯೊಬ್ಬಳು ಸೇರಿ ಒಟ್ಟು ನಾಲ್ವರು ಹನಿಟ್ರ್ಯಾಪ್ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸ್ವಾಮೀಜಿ ಎಫ್‌ಐಆರ್‌ ನಲ್ಲಿ ದಾಖಲಿಸಿದ್ದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ವಿರುದ್ಧ ಶಡ್ಯಂತ್ರ ನಡೆದಿದೆ ಎಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಏ.4ರಂದು ದಾಖಲಿಸಿದ ದೂರಿನನ್ವಯ ದೂರಿನಲ್ಲಿರುವ ಆರೋಪಿಗಳಿಗಾಗಿ ವಿಜಯಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಹಿಳೆಯೊಬ್ಬಳು ಸೇರಿ ಒಟ್ಟು ನಾಲ್ವರು ಹನಿಟ್ರ್ಯಾಪ್ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸ್ವಾಮೀಜಿ ಎಫ್‌ಐಆರ್‌ ನಲ್ಲಿ ದಾಖಲಿಸಿದ್ದರು. ಆದ್ದರಿಂದ ಆ ಮಹಿಳೆ ಹಾಗೂ ಖಾಸಗಿ ಚಾನಲ್ ಎಂಡಿ ಸೇರಿದಂತೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ಧಾರೆ. ಬೆಂಗಳೂರು, ಮಂಡ್ಯ, ವಿಜಯಪುರ ಸೇರಿದಂತೆ ಪಕ್ಕದ ರಾಜ್ಯಗಳಲ್ಲೂ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.