ಕನ್ನಡಪ್ರಭ ವಾರ್ತೆ ವಿಜಯಪುರ
ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಮ್ಮದೇ. ಈ ಉಪ ಚುನಾವಣೆಗಳ ಬಳಿಕ ವಿಜಯೇಂದ್ರನನ್ನು ಪಕ್ಷದಿಂದ ತೆಗೆದು ಹಾಕುತ್ತಾರೆ. ವಿಜಯೇಂದ್ರ ಮನೆಗೆ ಹೋಗೋದು ನಿಶ್ಚಿತ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮಹಿಳೆಯರು ಮತ ಹಾಕಿದರೆ ಸಾಕು ನಾವು ಗೆಲ್ಲುತ್ತೇವೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ತಲಪಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರನಿಗೆ ಬೇಕಾದರೆ ಗ್ಯಾರಂಟಿ ಕೊಡುತ್ತೇವೆಂದು ಟಾಂಗ್ ನೀಡಿದರು. ಎಐ ತಂತ್ರಜ್ಞಾನ ಬಳಸಿಕೊಂಡು ಚುನಾವಣೆಗಾಗಿ ಹಣ ಹಂಚಿಕೆ ಆರೋಪದ ಕುರಿತಾಗಿ ಮಾತನಾಡಿದ ಸಚಿವ ಪಾಟೀಲ, ಅದು ವಿಜಯೇಂದ್ರಗೆ ರೂಢಿಯಿದೆ, ಯಡಿಯೂರಪ್ಪ ಇದ್ದಾಗ ವಿಜಯೇಂದ್ರ ಮಾಡೋ ಕೆಲಸ ಅದೇ ಇತ್ತು. ಕಲಕ್ಷನ್ ಹಾಗೂ ಡಿಸ್ಟ್ರಿಬ್ಯೂಶನ್ ಎಂದು ಟಾಂಗ್ ನೀಡಿದರು. ಯಡಿಯೂರಪ್ಪರ ಸಹಿಯನ್ನು ವಿಜಯೇಂದ್ರ ನಕಲಿ ಮಾಡುತ್ತಾರೆಂದು ಯತ್ನಾಳ ಆರೋಪ ಮಾಡಿದ್ದರು. ಮಾರಿಷಸ್ ಹಾಗೂ ಸಿಂಗಾಪೂರದಲ್ಲಿ 10 ಸಾವಿರ ಕೋಟಿ ಇಟ್ಟಿದ್ದಾರೆಂದು ಯತ್ನಾಳ ಆರೋಪಿದ್ದರು. ಈಗ ಯತ್ನಾಳ ಕರೆದುಕೊಂಡು ಪ್ರಚಾರಕ್ಕೆ ಹೋಗುವಂತಾಯಿತು. ವಿಜಯೇಂದ್ರ ಪವರ್‌ಫುಲ್ ಇದ್ದರೆ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಯಾಕೆ ಬೇಕಿತ್ತು?. ಬಾಗಲಕೋಟೆ ಪ್ರಚಾರಕ್ಕೆ ಉಚ್ಛಾಟಿತ ಯತ್ನಾಳ ಕರೆದುಕೊಂಡು ಹೋಗುವಂತಾಯ್ತು, ಯತ್ನಾಳ ಪ್ರಚಾರ ಮಾಡಿದರೂ ಸಹ ಬಾಗಲಕೋಟೆಯನ್ನು ಇವರು ಗೆಲ್ಲುವುದಿಲ್ಲ. ಉಪ ಚುನಾವಣೆಗಳ ಬಳಿಕ ವಿಜಯೇಂದ್ರ ಹಾಗೂ ಯತ್ನಾಳ ಇಬ್ಬರೂ ಮನೆಗೆ ಹೊಗೋದೆ ಎಂದರು.
ಕೋಟ್..*ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿಷಸರ್ಪ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಖರ್ಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ? ಗೊತ್ತಿಲ್ಲ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಇರುತ್ತವೆ. ಬೆಂಕಿ ಪೊಟ್ಟಣ ಇಟ್ಟುಕೊಂಡು ಬಿಜೆಪಿಯವರು ಓಡಾಡುತ್ತಾರೆ, ಬೆಂಕಿ ಹಚ್ಚೋ ಕೆಲಸ ಮಾಡುತ್ತಾರೆ. ಬಿಜೆಪಿಯವರು ದೇಶಕ್ಕಾಗಿ ಹೋರಾಡಿಲ್ಲ, ರಾಷ್ಟ್ರೀಯತೆ ಎಂದು ಹೇಳುತ್ತಾರೆ, ಇಂಡಿಯಾ ಗೇಟ್ ನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರುಗಳಿವೆ. ಅದರಲ್ಲಿ ನೂರಾರು ಮುಸ್ಲಿಮರ ಹೆಸರುಗಳಿವೆ, ಬಿಜೆಪಿಯವರ ಒಂದೇ ಒಂದು ಹೆಸರಿಲ್ಲ. ಬಿಜೆಪಿಗರು ಬ್ರಿಟಿಷರ ಏಜೆಂಟರಾಗಿದ್ದವರು, ಈಗ ರಾಷ್ಟ್ರೀಯತೆ ದೇಶಾಭಿಮಾನ ಎನ್ನುತ್ತಾರೆ. ವಿಷಕಾರಿ ಎಂಬರ್ಥದಲ್ಲಿ ಖರ್ಗೆ ಮಾತನಾಡಿದ್ದಾರೆ. ವಿಷಕಾರಿ ನಿರ್ಮೂಲನೆ ಮಾಡಿ ಎಂಬರ್ಥದಲ್ಲಿ ಖರ್ಗೆಯವರು ಮಾತನಾಡಿದ್ದಾರೆ. ಇವರನ್ನು ಹೊಡೆದು ಕೊಲ್ಲಿ ಎಂದಿಲ್ಲ.
।ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ
-----------
8bij01: ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಗಳ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು.