- ಅನುಭವ ಹಂಚಿಕೊಂಡ ಕಲಾವಿದರು, ವ್ಯಂಗ್ಯಚಿತ್ರಕಾರರು ಇನ್ನಿತರ ಹಳೇ ವಿದ್ಯಾರ್ಥಿಗಳು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ದೃಶ್ಯಕಲಾ ಶಾಲೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಕಲಾಭಿಮಾನಿಗಳು, ಕಲಾ ಕುತೂಹಲಿಗಳ ಭರ್ತಿ ಜಮಾವಣೆಯಿಂದ ಗಿಜಿಗುಡುತ್ತಿತ್ತು. ಇಲ್ಲಿ ಕಲಿತು ಕಲಾವಿದರು, ವ್ಯಂಗ್ಯಚಿತ್ರಕಾರರು, ಎನಿಮೇಟರ್‌ಗಳಾದ ಅನೇಕರು ತಮ್ಮ ತಮ್ಮ ಪರಿಣತಿಯನ್ನು ಸಾರ್ವಜನಿಕರ ಎದುರು ಮುಕ್ತವಾಗಿ, ಸ್ವಸಂತೋಷದಿಂದ ಅಭಿವ್ಯಕ್ತಿಸಿದ್ದು ವಿಶೇಷವೆನಿಸಿತು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಡಾ.ಬಾಬುರಾವ್ ನಡೋಣಿ ಅವರಿಂದ ಕ್ಯಾನವಾಸ್ ಮೇಲೆ ತೈಲವರ್ಣದಿಂದ ಭಾವಚಿತ್ರ ರಚನೆ, ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ, ರವಿ ಎಲ್. ಪೂಜಾರಿ ಅವರಿಂದ ಕ್ಯಾರಿಕೇಚರ್ ಪ್ರಾತ್ಯಕ್ಷಿಕೆ, ಶಿಲ್ಪಿ ಹರೀಶ್ ಮಾಳಪ್ಪನವರ್ ಅವರಿಂದ ಮಣ್ಣಿನ ಭಾವಶಿಲ್ಪ ಪ್ರಾತ್ಯಕ್ಷಿಕೆ, ಬಸವರಾಜ ಅಲಗೂರು ಅವರಿಂದ ಬಗೆಬಗೆಯ ನಮೂನೆಗಳಲ್ಲಿ ಕನ್ನಡ ಅಕ್ಷರ ಬರಹ ಪ್ರಾತ್ಯಕ್ಷಿಕೆ, ಕೆ.ಎಂ. ಶೇಷಗಿರಿ ಅವರಿಂದ ಡಿಜಿಟಲ್ ಕಲಾ ಪ್ರಸ್ತುತಿ ಮತ್ತು ಸಂವಾದ ಇವೆಲ್ಲ ಚಟುವಟಿಕೆಗಳು ನಡೆದವು.60 ವರ್ಷಗಳನ್ನು ಈ ಕಲಾ ಶಿಕ್ಷಣ ದೇಗುಲ ಪೂರ್ಣಗೊಳಿಸಿದ ನಿಮಿತ್ತ ಇಲ್ಲಿ ಕಲಿತುಹೋದ 60 ಬ್ಯಾಚುಗಳ ವಿದ್ಯಾರ್ಥಿಗಳು ಕಲಾ ಕಾಲೇಜಿನ ಆವರಣದಲ್ಲಿ 60 ಸಸಿಗಳನ್ನು ನೆಟ್ಟಿದ್ದು ವಿಶೇಷತೆಗಳಲ್ಲಿ ಒಂದಾಗಿತ್ತು.
ಈ ಸಂದರ್ಭ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ರಾಷ್ಟ್ರೀಯ ಖ್ಯಾತಿ ಗಳಿಸಿರುವ ದೃಶ್ಯ ಕಲಾವಿದ ಶ್ಯಾಮಸುಂದರ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿ.ಸು.ಕೃಷ್ಣ ಶೆಟ್ಟಿ, ಕಾಲೇಜಿನ ಪ್ರಾಚಾರ್ಯರು, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.- - - -22ಕೆಡಿವಿಜಿ35, 36ಃ:
ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ವಜ್ರಮಹೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿ ಕಲಾವಿದರು ತಮ್ಮ ಕಲಾಕೃತಿಗೆ ಅಂತಿಮ ಸ್ಪರ್ಶ ನೀಡಿದರು. -22ಕೆಡಿವಿಜಿಃ37ಃ:ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ವಜ್ರಮಹೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿ ಕಲಾವಿದರು ಭಾವಚಿತ್ರ ರಚಿಸುವಲ್ಲಿ ತಲ್ಲೀನರಾಗಿದ್ದು ಹೀಗೆ.