ಕನ್ನಡಪ್ರಭವಾರ್ತೆ ಚಿತ್ರದುರ್ಗ ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹೇಳಿದರು. ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಶನಿವಾರ ಆರೋಗ್ಯ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಸಲುವಾಗಿ ಮೃಗಾಲಯದ ಸಿಬ್ಬಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮೃಗಾಯಲದ ಸಿಬ್ಬಂದಿಗಳು ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ತಂಬಾಕು ಜಗಿಯುವುದು, ಧೂಮಪಾನ, ಮದ್ಯಪಾನ ಮಾಡುವ ಹವ್ಯಾಸವನ್ನು ಬಿಡಬೇಕು. ಕ್ಷಯರೋಗ ಇತರೆ ಶ್ವಾಸಕೋಶದ ಸೋಂಕಿಗೆ ತುತ್ತಾಗದಂತೆ ಸ್ವಚ್ಛ ನಡವಳಿಕೆಗಳನ್ನು ಕಾಪಾಡಿಕೊಳ್ಳಬೇಕು. ದೈಹಿಕ ಮಾನಸಿಕ ಆರೋಗ್ಯ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ 28 ಜನ ಸಿಬ್ಬಂದಿ ಅಧಿಕಾರಿಗಳಿಗೆ ರೇಬೀಸ್ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಲಸಿಕೆ ನೀಡಿ, ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.ಕ್ಷೇತ್ರ ಆರೋಗ ಶಿಕ್ಷಣಾಧಿಕಾರಿ ಬಿ. ಮೈಗಪ್ಪ, ಜಾನಕಿ, ಸಂಚಾರಿ ಆರೋಗ್ಯ ಘಟಕದ ಡಾ. ಮಂಜರಿ, ತ್ರಿವೇಣಿ, ಲಕ್ಷ್ಮೀದೇವಿ, ಸಲ್ಮನ್ ಖಾನ್, ಶಂಕರಮೂರ್ತಿ, ಶ್ರೀನಿವಾಸ, ಕ್ಷಯರೋಗ ವಿಭಾಗದ ಮಾರುತಿ, ನಾಗರಾಜ್ ಎಚ್.ಐ.ವಿ. ವಿಭಾಗದ ರವೀಂದ್ರ, ನಾಗರಾಜ್ ಉಪ ವಲಯ ಆರಣ್ಯಾಧಿಕಾರಿ ವೆಂಕಟೇಶ ನಾಯ್ಕ್ ಇತರರು ಉಪಸ್ಥಿತರಿದ್ದರು.