ಆರ್ಯವೈಶ್ಯರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದಾರೆ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Sep 02, 2024, 02:01 AM IST
31   ಕೆೆಡಯು1 | Kannada Prabha

ಸಾರಾಂಶ

ಕಡೂರು, ನಿಷ್ಟೆ ಮತ್ತು ಸಮಾಜದ ಕೊಡುಗೆಗೆ ಹೆಸರಾದ ಆರ್ಯವೈಶ್ಯ ಸಮಾಜದವರು ಎಲ್ಲರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ ದೊಂದಿಗೆ ವ್ಯವಹಾರ ನಡೆಸಿ ಪಟ್ಟಣದಲ್ಲಿ ಉತ್ತಮವಾಗಿ ಜೀವಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಆರ್ಯವೈಶ್ಯ ಸಮಾಜದ ಅಭಿನಂದನೆ

ಕನ್ನಡಪ್ರಭ ವಾರ್ತೆ ಕಡೂರು

ನಿಷ್ಟೆ ಮತ್ತು ಸಮಾಜದ ಕೊಡುಗೆಗೆ ಹೆಸರಾದ ಆರ್ಯವೈಶ್ಯ ಸಮಾಜದವರು ಎಲ್ಲರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ ದೊಂದಿಗೆ ವ್ಯವಹಾರ ನಡೆಸಿ ಪಟ್ಟಣದಲ್ಲಿ ಉತ್ತಮವಾಗಿ ಜೀವಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಆರ್ಯವೈಶ್ಯ ಸಮಾಜದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಆರ್ಯವೈಶ್ಯ ಸಮಾಜ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ. ನನ್ನ 28 ವರ್ಷಗಳ ಸಕ್ರಿಯ ರಾಜ ಕಾರಣದಲ್ಲಿ ನಿರಂತರ ಸೇವೆಗೆ ಪಟ್ಟಣದ ಜನರ ಪ್ರೀತಿ ವಿಶ್ವಾಸದಿಂದ 4ನೇ ಬಾರಿಗೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿ ಮತ್ತೆ ನಿಮ್ಮೆದೆರು ಬಂದಿದ್ದೇನೆ ಎಂದರು.ಈ ಹಿಂದೆ ಆರ್ಯವೈಶ್ಯ ಸಮಾಜದ ಅನೇಕರು ಪುರಸಭೆಗೆ ಆಯ್ಕೆಯಾಗಿ ಜನ ಸೇವೆ ಮಾಡಿದ್ದಾರೆ. ಈ ಸಮಾಜದ ಯುವಕರು ಕೆಲಸಕ್ಕೆ ದೂರದ ದೇಶಗಳಿಗೆ ಹೋಗುತ್ತಿದ್ದು, ಸಮಾಜದ ಯುವಕರು ರಾಜಕೀಯ ಪ್ರವೇಶಿಸುವುದಾದರೆ ತುಂಬು ಹೃದಯದಿಂದ ಸ್ವಾಗತಿಸಿ ಸಹಕಾರ ನೀಡುವೆ. ಸಮಾಜದ ಯಾವುದೇ ಕೆಲಸ ವಿದ್ದರೂ ಮಾಡಿ ಕೊಡುವ ಭರವಸೆ ನೀಡಿದರು. ಆರ್ಯ ವೈಶ್ಯ ಸಂಘದ ಅಧ್ಯಕ್ಷ ನಾಗೇಂದ್ರ ಗುಪ್ತ ಮಾತನಾಡಿ, ಸಮಾಜದ ಎಲ್ಲ ಉತ್ತಮ ಕಾರ್ಯಗಳಿಗೆ ಭಂಡಾರಿ ಶ್ರೀನಿವಾಸ್ ನಮ್ಮ ಪರ ನಿಲ್ಲುವರು ಎಂಬ ಭರವಸೆಯಿದೆ. ಸಮಾಜದ ಯುವಕರು ರಾಜಕೀಯವಾಗಿ ತೊಡಗಿಸಿ ಕೊಂಡು ಸಮಾಜದ ಅಭಿವೃದ್ಧಿ ಜತೆಗೆ ಸಾರ್ವಜನಿಕರ ಏಳಿಗೆಗೂ ಶ್ರಮಿಸಬೇಕು. ವೈಶ್ಯ ಸಮುದಾಯ ನಿಷ್ಟೆಗೆ ಹೆಸರುವಾಸಿ. ರಾಜಕೀಯವಾಗಿ ಮುಂದೆ ಬಂದರೆ ಯಾವುದೇ ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿ ಕಾರ್ಯ ಮಾಡುತ್ತಾರೆ ಎಂದರು. ಮುಖಂಡ ಡಿ.ಪ್ರಶಾಂತ್ ಮಾತನಾಡಿ, ಕಡೂರಿನ ಆರ್ಯ ವೈಶ್ಯ ಸಮಾಜದ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೂ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ ಜೀವನ ನಡೆಸಿದ್ದರು. ನೇರ ನುಡಿಯ ಭಂಡಾರಿ ಶ್ರೀನಿವಾಸ್‌ ಪಟ್ಟಣದ ಯಾವುದಾದರೂ ಬಡಾವಣೆಗೆ ಅಥವಾ ರಸ್ತೆಗಳಿಗೆ ಅವರ ಹೆಸರು ಇಡುವ ಮೂಲಕ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದರು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಸನ್ಮಾನ ಸ್ವೀಕರಿಸಿ, ಈ ಗೌರವ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಅದಕ್ಕೆತಕ್ಕಂತೆ ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಅದ್ಯಕ್ಷರೊಡಗೂಡಿ ಕೆಲಸ ಮಾಡಿಕೊಡುತ್ತೇನೆ. ಸಮಾಜದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಆರ್ಯ ವೈಶ್ಯ ಸಮಾಜದ ತ್ಯಾಗರಾಜ್, ಮಹಿಳಾ ಸಂಘದ ಅಧ್ಯಕ್ಷೆ ಶಶಿ ಸಂತೋಷ್, ಸಮಾಜದ ಮುಖಂಡ ಭಂಡಿ ರಂಗನಾಥ್, ಶಾಂತಕುಮಾರ್, ಡಿ.ಪ್ರಶಾಂತ್, ಗಿರೀಶ್, ರಮೇಶ್, ಮಂಜುನಾಥ್ ಬಾಬಣ್ಣ ಇದ್ದರು. -- ಬಾಕ್ಸ್ ಸುದ್ದಿಗೆ--

ನನ್ನನ್ನು ಕ್ಷಮಿಸಿ ನನ್ನ ಸಾರ್ವಜನಿಕ ಮತ್ತು ಸುಧೀರ್ಘ ರಾಜಕಾರಣದಲ್ಲಿ ಯಾರಿಗಾದರೂ ನನ್ನಿಂದ ತಿಳಿದೊ- ತಿಳಿಯದೆಯೋ ನನ್ನಿಂದ ತಪ್ಪು, ನೋವು ಮತ್ತು ತೊಂದರೆ ಆಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಭಂಡಾರಿ ಶ್ರೀನಿವಾಸ್ ಕೈಮುಗಿದು ಭಾವುಕರಾಗಿ ಕೋರಿದರು. 1996 ರಲ್ಲಿ ಕಡೂರು ಪುರಸಭಾ ಸದಸ್ಯನಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಸಾರ್ವಜನಿಕ ಸೇವೆಗೆ ಬಂದೆ. ಎಲ್ಲರ ಸಹಕಾರದಿಂದ ಸದಸ್ಯನಾಗಿ, ಇದೀಗ 4ನೇ ಭಾರಿಗೆ ಅಧ್ಯಕ್ಷನಾಗಿದ್ದೇನೆ ಎಂದರು.31ಕೆಕೆಡಿಯು1.

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ರೀಮತಿ ಎ.ಪಿ.ಆಶಾ ದಂಪತಿಯನ್ನು ಆರ್ಯವೈಶ್ಯ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು..

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ