ಕನ್ನಡಪ್ರಭ ವಾರ್ತೆ ಬೇಲೂರು
ದಲಿತ ಮುಖಂಡ ಅಡಗೂರು ರಂಗಪ್ಪ ಮಾತನಾಡಿ, ದಲಿತರ, ಶೋಷಿತರ, ತಳ ಸಮುದಾಯಗಳ ಏಳಿಗೆಗಾಗಿ ಜೀವನವನ್ನೆ ಮುಡಿಪಾಗಿಟ್ಟ ಡಾ.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ಅವಮಾನಿಸಿ ಮಾತಾಡಿರುವುದು ಸರಿಯಲ್ಲ. ಜತೆಗೆ ಸಂವಿಧಾನದಡಿ ಚುನಾವಣೆಯಲ್ಲಿ ಆಯ್ಕೆಯಾಗಿ ಜವಬ್ದಾರಿಯುತ ಸಚಿವರಾಗಿ ಮನಸ್ಸಿಗೆ ಬಂದಂತೆ ಮಾತನಾಡುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಮೀತ್ ಶಾ ಅವರನ್ನು ಪ್ರಧಾನಿಗಳು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದಸಂಸ(ಅಂಬೇಡ್ಕರ್ ವಾದ)ಮುಖಂಡ ಬೇಲೂರು ಲಕ್ಷ್ಮಣ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾತನಾಡುವ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರವರನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ. ಪದೇ ಪದೇ ಅವಮಾನಿಸುವುದನ್ನು ಸಹಿಸುವುದಿಲ್ಲ. ಮತ್ತು ಅಂಬೇಡ್ಕರ್‌ರವರನ್ನು ಅವಮಾನಿಸಿದ ಸಚಿವರನ್ನು ಸಂಪುಟದಿಂದ ಪ್ರದಾನಿಗಳು ವಜಾಗೊಳಿಸಬೇಕು. ಮತ್ತು ಅಮೀತ್ ಶಾ ರವರು ತಕ್ಷಣವೇ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದರು.ಕೆಇಬಿ ನಿವೃತ್ತ ಸಹಾಯಕ ಇಂಜಿನಿಯರ್ ಲಕ್ಷ್ಮಯ್ಯ, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ದಾಸಪ್ಪ, ಮತಿಘಟ್ಟ ಗ್ರಾಪಂ ಸದಸ್ಯ ಮಹೇಶ್, ದಸಂಸ ಮುಖಂಡರಾದ ಸತೀಶ್, ಕೃಷ್ಣಯ್ಯ, ಆಟೋ ಲಕ್ಷ್ಮಣ್, ಮಂಜುನಾಥ್, ಸುರೇಶ್ ಮುದಿಗೆರೆ, ಉಮೇಶ್, ರುದ್ರೇಶ್, ಜಗಧೀಶ್, ಕೃಷ್ಣಮೂರ್ತಿ, ತೀರ್ಥ, ಸುರೇಶ್ ಕೂಡ್ಲೂರು ಸೇರಿದಂತೆ ಇತರರಿದ್ದರು.