ಸೋಮಣ್ಣ ಸುಬ್ರಹ್ಮಣ್ಯ ಇದ್ದಂಗೆ- ಮಾಧುಸ್ವಾಮಿ

KannadaprabhaNewsNetwork |  
Published : Mar 05, 2024, 01:35 AM IST
ಸೋಮಣ್ಣ ಸುಬ್ರಹ್ಮಣ್ಯ ಇದ್ದಂಗೆ- ಮಾಧುಸ್ವಾಮಿ | Kannada Prabha

ಸಾರಾಂಶ

ನಾನು ವಿಘ್ನೇಶ್ವರ ಇದ್ದಂತೆ, ಸೋಮಣ್ಣ ಸುಬ್ರಹ್ಮಣ್ಯ ಇದ್ದಾಂಗೆ. ಪ್ರಪಂಚ ಪರ್ಯಟನೆ ಮಾಡಿಕೊಂಡು ಬಾ ಅಂತಾದರೆ ಗಣೇಶ ಅವರ ಅಪ್ಪ, ಅಮ್ಮನಾ ಸುತ್ತಿ ನಿಂತುಕೊಳ್ಳುತ್ತಾನೆ. ಸುಬ್ರಹ್ಮಣ್ಯ ಹೋದವನು ಬರಲೇ ಇಲ್ಲ ಎನ್ನುವ ಮೂಲಕ ಸೋಮಣ್ಣ ಮತ್ತು ಯಡಿಯೂರಪ್ಪ ಭೇಟಿ ಬಗ್ಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ನಾನು ವಿಘ್ನೇಶ್ವರ ಇದ್ದಂತೆ, ಸೋಮಣ್ಣ ಸುಬ್ರಹ್ಮಣ್ಯ ಇದ್ದಾಂಗೆ. ಪ್ರಪಂಚ ಪರ್ಯಟನೆ ಮಾಡಿಕೊಂಡು ಬಾ ಅಂತಾದರೆ ಗಣೇಶ ಅವರ ಅಪ್ಪ, ಅಮ್ಮನಾ ಸುತ್ತಿ ನಿಂತುಕೊಳ್ಳುತ್ತಾನೆ. ಸುಬ್ರಹ್ಮಣ್ಯ ಹೋದವನು ಬರಲೇ ಇಲ್ಲ ಎನ್ನುವ ಮೂಲಕ ಸೋಮಣ್ಣ ಮತ್ತು ಯಡಿಯೂರಪ್ಪ ಭೇಟಿ ಬಗ್ಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಯಾವ ಗುಂಪಿನಲ್ಲಿದ್ದರೂ ಅಲ್ಲಿರುವ ಲೀಡರ್ ಗಳನ್ನು ನಂಬಿಕೊಂಡು ರಾಜಕೀಯ ಮಾಡಿರುವ ಮನುಷ್ಯ ಎಂದರು. ಹೆಗಡೆಯವರು, ಪಟೇಲರು ಇದ್ದಾಗ ಅವರನ್ನು ನಂಬಿದ್ದೆ. ಈಗ ಯಡಿಯೂರಪ್ಪ ಜೊತೆ ಇದ್ದೇವೆ. ಅವರನ್ನು ನಂಬಿದ್ದೇವೆ. ಕೊಟ್ಟರೆ ಅವರ ದೊಡ್ಡತನ, ಕೊಡದೆ ಇದ್ದರೇ ನಮ್ಮ ಹಣೆ ಬರಹ ಅಂದುಕೊಂಡಿದ್ದೇವೆ. ಇನ್ನೊಬ್ಬರ ಹತ್ತಿರ ಹೋಗಿ ನಾನು ಕೈ ಚಾಚುವುದಿಚಲ್ಲ ಎಂದರು.ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಟಿಕೆಟ್ ಘೋಷಣೆಯಾಗುವವರೆಗೂ ಉತ್ತರ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಸೋಲನ್ನು ನಾನು ಒಪ್ಪಿಕೊಂಡಿರುವವನು. ಇನ್ನೊಬ್ಬರನ್ನು ನಾನು ಬೈದಿಲ್ಲ. ಅವರು ಸೋಲಿದರು, ಇವರು ಸೋಲಿಸಿದರು, ಪಿತೂರಿ ಮಾಡಿದ್ದರು ಅಂತಾ ನಾಯಕತ್ವ ಪ್ರಶ್ನೆ ಮಾಡಿಲ್ಲ. ಸಾಮರ್ಥ್ಯ ಇಲ್ಲ ಸೋತಿದ್ದೇನೆ‌ ಇನ್ನೊಬ್ಬರನ್ನು ಯಾಕೆ ಬೈಯೋಣ ಎಂದರು.ಯಡಿಯೂರಪ್ಪ ಅವರನ್ನು ಬೈಯೋದು, ಮಗನನ್ನು ಬೈಯೋದು ಮತ್ತೆ ರಾಜೀ ಆಗೋದು ಇದೆಲ್ಲಾ ನನಗೆ ಗೊತ್ತೇ ಇಲ್ಲ. ಒಂದು ಬಾರಿ‌ ಬೇಜಾರ್ ಆದರೆ ಮತ್ತೊಮ್ಮೆ ನಾನು ಅವರ ಬಳಿ ಹೋಗುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸೋಮಣ್ಣ ಅವರಿಗೆ ಟಾಂಗ್ ನೀಡಿದರು. ಸೋಮಣ್ಣ ರಾಜಕೀಯ ಶುರು ಮಾಡಿದ ದಿನದಿಂದಲೂ ಮಠಗಳ ಪ್ರದಕ್ಷಿಣೆ ಹೊಡೆದಿರೋದೆ, ಹೊಡೆಯಲಿ ಬಿಡಿ. ಮನುಷ್ಯನಿಗೆ ಅವಕಾಶ, ವಯಸ್ಸು ಎರಡು ಗಣನೆಗೆ ಬರುತ್ತದೆ ಎಂದರು.ತುಮಕೂರು ಜಿಲ್ಲೆಗೆ ಬೇರೆಯವರನ್ನು ತರುವುದನ್ನು ನಿಲ್ಲಿಸಿ ಎಂದ ಅವರು, ಮೊದಲಿಂದಲೂ ಈ‌ ಕ್ರಿಯೆ ಮಾಡಿಕೊಂಡು ಬಂದು ನಮ್ಮ‌ ಜಿಲ್ಲೆಗೆ ಅವಮಾನ ಮಾಡಿದ್ದಾರೆ. ಇಲ್ಲಿ ಎಂ.ಪಿ. ಗೆ ನಿಂತು ಹೋದವರು ಯಾರಾದರೂ ನಮ್ಮ ಹೋರಾಟಕ್ಕೆ ಬರುತ್ತಿದ್ದಾರಾ. ಸೋಲುತ್ತೇವೋ ಗೆಲ್ಲುತ್ತೇವೋ ಸ್ಥಳಿಯವಾಗಿ ನಾವು ನಾಯಕತ್ವ ಬೆಳೆಸಿಕೊಂಡರೇ ಕಷ್ಟಕ್ಕೆ ಸುಖಕ್ಕೆ ಆಗುತ್ತಾರೆ ಎಂದರು.

ಸೋಮಣ್ಣ ಅಂತಾ ಹೇಳ್ತಿಲ್ಲ. ಈ ಹಿಂದೆ ದೇವೆಗೌಡರು ಬಂದಾಗಲೂ ಪೋನ್ ಮಾಡಿ ಹೇಳಿದ್ದೆ. ಯಾಕೆ ಸರ್ ಬರುತ್ತಿರಾ ಇದಕ್ಕೆ ಕೈ ಹಾಕ್ತಿರಾ ಅಂತಾ. ಚುನಾವಣೆಗೆ ನಿಂತಾಗ ಅವರು ಮಾತಾಡ್ತಾರೆ ನಾವು ಮಾತಾಡ್ತೇವೆ. ವೈಯಕ್ತಿಕವಾಗಿ ನಮಗೆ ದ್ವೇಷ ಇಲ್ಲಾ. ಕೃಷ್ಣಪ್ಪ, ಕೋದಂಡ ರಾಮಯ್ಯ, ದೇವೆಗೌಡರು ನಿಂತಾಗ ನಾವು ಬೆಂಬಲ ನೀಡಿಲ್ಲ. ಜಿಲ್ಲೆಯ ಜನರು ಕೈ ಹಿಡಿದಿಲ್ಲ. ಈಗ ನಮ್ಮ ಪಕ್ಷದವರು ನಮ್ಮ ಜಾತಿಯವರು ಬರುತ್ತಾರೆ ಅಂತಾ ಮಾತಾಡಿದ್ರೆ ಯಾರಾದರೂ ಸಹಿಸುತ್ತಾರಾ ಎಂದರು.ನಿನ್ನೆ‌‌ ಮೊನ್ನೆ ವಾದ ಏನಾಗುತ್ತೆ. ಅದನ್ನ ಅವರು ಅರ್ಥ ಮಾಡಿಕೊಳ್ಳಬೇಕು, ಎಲ್ಲಾ ಜಿಲ್ಲೆಗೆ ಹೋಗೋದು ಕೈ ಹಾಕೋದು ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ ಅವರನ್ನು ನಂಬಿಕೊಂಡು ಎರಡು ಕ್ಷೇತ್ರದಲ್ಲಿ ನಂಬಿ ಕೆಲಸ ಮಾಡಿದ ಕಾರ್ಯಕರ್ತರ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ಬರೀ ಚುನಾವಣೆ ಅಲ್ಲ ನಮ್ಮನ್ನು ನಂಬಿಕೊಂಡವರನ್ನು ರಕ್ಷಣೆ ಕೊಟ್ಟಿಕೊಂಡು ಹೋಗಬೇಕಾಗುತ್ತದೆ. ಇದೆಲ್ಲಾ ಯೋಚನೆ ಮಾಡಬೇಕು. ಮೈತ್ರಿ ಆಗಿದ ಕಾರಣ ಮೇಲಿನ ತೀರ್ಮಾನ ‌ನಾವು ವಿರೋಧ ಮಾಡುವುದಿಲ್ಲ ಎಂದ ಅವರು, ಹೊರಗಡೆಯವರು ಬರಬಾರದು ಅನ್ನೊದು ನನ್ನ ವೈಯಕ್ತಿಕ ಅಭಿಪ್ರಾಯ. ಸೋಮಣ್ಣರಿಗೂ ಅನ್ವಯಿಸುತ್ತೆ ಮತ್ತೊಬ್ಬರಿಗೂ ಅನ್ವಯವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ