ವಿನಯವಿಲ್ಲದ ವಿದ್ಯೆ ರಾಕ್ಷಸ ತನಕ್ಕೆ ಆಹ್ವಾನವಿತ್ತಂತೆ

KannadaprabhaNewsNetwork |  
Published : Sep 25, 2024, 12:50 AM IST
ಹೊಸದುರ್ಗದಲ್ಲಿ ಉಪ್ಪಾರ ಸಮಾಜದಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಗಾಟಿಸಿದರು. | Kannada Prabha

ಸಾರಾಂಶ

As if the demon of learning without humility invited him

-ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಪುರುಷೋತ್ತಮಾನಂದ ಶ್ರೀ

--------

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿನಯವಿಲ್ಲದ ವಿದ್ಯೆ ರಾಕ್ಷಸ ಪ್ರವೃತ್ತಿಗೆ ಆಹ್ವಾನವಿತ್ತಂತೆ. ವಿದ್ಯೆ ಜತೆಗೆ ಸಂಸ್ಕಾರ, ನೈತಿಕತೆ, ವಿನಯ ಸಹ ಕಲಿಯಬೇಕು ಎಂದು ಬ್ರಹ್ಮವಿದ್ಯಾ ನಗರದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಗೀರಥ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಉಪ್ಪಾರ ಸಂಘದಿಂದ ಶ್ರೀದೇವಿ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಸಭಾಭವನ ನಿರ್ಮಿಸಲು ಸ್ಥಳಾವಕಾಶದ ಕೊರತೆಯಿದೆ. ಸರ್ಕಾರದ ಅನುದಾನ ಬಳಸಿಕೊಂಡು ಶ್ರೀಮಠದ ಆವರಣದಲ್ಲಿಯೇ ಸಭಾಭವನ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ನಡೆಸಬಹುದು. ಭಗೀರಥ ಏಕಶಿಲಾ ಮೂರ್ತಿ ಸೇರಿದಂತೆ ವಿವಿಧ ಆಕರ್ಷಕ ತಾಣಗಳಿದ್ದು, ಮುಂದಿನ ದಿನಗಳಲ್ಲಿ ಇದೊಂದು ಪ್ರವಾಸಿ ತಾಣ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಶಾಸಕ ಬಿಜಿ. ಗೋವಿಂದಪ್ಪ, ಉಪ್ಪಾರರ ಸಮುದಾಯ ಭವನ ನಿರ್ಮಾಣ ಹಾಗೂ ಲೇಪಾಕ್ಷಿ ವೃತ್ತ ನಿರ್ಮಾಣದ ಕಾರ್ಯವನ್ನು ಮಾಡುತ್ತೇವೆ. ಸಮಯ ನಿಗದಿ ಬೇಡ, ಸ್ವಲ್ಪ ತಡವಾಗಿಯಾದರೂ ಈ ಕೆಲಸಗಳನ್ನು ಮಾಡುತ್ತೇನೆ. ಸಮಾಜದ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಪುಣ್ಯದ ಕಾರ್ಯ. ಇದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಿ. ಸಮಾಜದ ಅಧ್ಯಕ್ಷ ಮತ್ತು ನೌಕರರ ಸಂಘದ ಅಧ್ಯಕ್ಷರು ಜತೆ ಜತೆಯಾಗಿ ಸಾಗಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ಶಿಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ. ಕಳ್ಳನು ಅಪಹರಿಸಲಾಗದಂತಹ, ಹೆಚ್ಚಾದರೂ ಹೊರೆಯೆನಿಸದಂತಹ ವಸ್ತುವೆಂದರೆ ಅದು ಶಿಕ್ಷಣ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಮತ್ತು ನೈತಿಕ ಆರೋಗ್ಯವೂ ಮುಖ್ಯವಾಗಿದೆ. ನಿವೃತ್ತರು ತಮ್ಮ ಜೀವನವನ್ನು ಸಂತಸದಿಂದ ಕಳೆಯಿರಿ ಎಂದರು.

ಗುಬ್ಬಿ ಬಿ.ಇ.ಒ ಎಂ.ಎಸ್. ನಟರಾಜ್ ಉಪನ್ಯಾಸ ನೀಡಿದರು. ಭಗೀರಥ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ಲಕ್ಷ್ಮಯ್ಯ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಕೆ.ಪರಪ್ಪ, ಕೆಪಿಸಿಸಿ ಸದಸ್ಯ ಎಂ.ಪಿ. ಶಂಕರ್, ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬ. ಮೈಲಾರಪ್ಪ, ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಪ್ಪ, ವಕೀಲ ಮಂಜುನಾಥ್, ಅಧೀಕ್ಷಕ ಎಂಜಿನಿಯರ್ ಜಯಣ್ಣ, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ವಲಯ ಅರಣ್ಯಾಧಿಕಾರಿ ದಯಾನಂದ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಜಿ.ಉ. ಸಂಘದ ಕಾರ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿ, ಭಗೀರಥ ವಾಣಿ ಪತ್ರಿಕೆ ಸಂಪಾದಕ ಎ.ವಿ. ಲೋಕೇಶ್, ಇದ್ದರು.

--------

22ಎಚ್‌ಎಸ್‌ಡಿ5: ಹೊಸದುರ್ಗದಲ್ಲಿ ಉಪ್ಪಾರ ಸಮಾಜದಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!