ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಲಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Sep 25, 2024, 12:50 AM IST
23ಕೆಎಂಎನ್ ಡಿ15 | Kannada Prabha

ಸಾರಾಂಶ

ಡೇರಿಯಲ್ಲಿ ಈ ವರ್ಷ ರೈತರಿಂದ 2.65 ಕೋಟಿ ಹಣದ ಹಾಲು ಖರೀದಿಸಿದ್ದು, 2.14 ಕೋಟಿ ಹಣ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ 23.99 ಲಕ್ಷ ರು. ಲಾಭ ಬಂದಿದೆ. ಸಂಘದ ಬ್ಯಾಂಕ್ ಖಾತೆಯಲ್ಲಿ 16.96 ಲಕ್ಷ ರು. ಹಣ ಇದೆ. ಮನ್ಮುಲ್ ಒಕ್ಕೂಟದಿಂದ 14.92 ಲಕ್ಷ ರು. ಹಾಲಿನ ಪೇಮೆಂಟ್ ಬರಬೇಕಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು ಕೃಷಿ ಜೊತೆಗೆ ಆರ್ಥಿಕವಾಗಿ ಸಹಕಾರಿಯಾಗಿರುವ ಹೈನುಗಾರಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಡೇರಿಗಳು ರೈತ ಕುಟುಂಬಗಳ ಆರ್ಥಿಕ ನಿರ್ವಹಣೆಯಲ್ಲಿ ಸಹಕಾರಿಯಾಗುತ್ತಿವೆ. ರೈತರು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಸಬಲೀಕರಣಗೊಳ್ಳಬೇಕು ಎಂದರು.

ರೈತರು ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಸಬೇಕು. ಡೇರಿ ಅಧಿಕಾರಿಗಳು ಸಹ ರೈತರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಚಿನಕುರಳಿ ಡೇರಿ ಆಡಳಿತ ಮಂಡಳಿ ಲಾಭದತ್ತ ಮುನ್ನಡೆಯುತ್ತಿರುವುದಕ್ಕೆ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಮಾತನಾಡಿ, ಚಿನಕುರಳಿ ಡೇರಿಗೆ ಈ ಸಾಲಿನಲ್ಲಿ 14 ಲಕ್ಷ ರು. ನಿವ್ವಳ ಲಾಭ ಬಂದಿದೆ. 5.95 ಲಕ್ಷ ಹಣವನ್ನು ರೈತರಿಗೆ ಬೋನಸ್ ರೂಪದಲ್ಲಿ ನೀಡಲಾಗುವುದು ಎಂದರು.

ಡೇರಿಯಲ್ಲಿ ಈ ವರ್ಷ ರೈತರಿಂದ 2.65 ಕೋಟಿ ಹಣದ ಹಾಲು ಖರೀದಿಸಿದ್ದು, 2.14 ಕೋಟಿ ಹಣ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ 23.99 ಲಕ್ಷ ರು. ಲಾಭ ಬಂದಿದೆ. ಸಂಘದ ಬ್ಯಾಂಕ್ ಖಾತೆಯಲ್ಲಿ 16.96 ಲಕ್ಷ ರು. ಹಣ ಇದೆ. ಮನ್ಮುಲ್ ಒಕ್ಕೂಟದಿಂದ 14.92 ಲಕ್ಷ ರು. ಹಾಲಿನ ಪೇಮೆಂಟ್ ಬರಬೇಕಾಗಿದೆ ಎಂದರು.

ಡೇರಿಯ ಷೇರುದಾರರು ಮೃತಪಟ್ಟರೆ ಆ ಕುಟುಂಬಕ್ಕೆ ಸಂಘದಿಂದ 5 ಸಾವಿರ ಪರಿಹಾರ ನೀಡುತ್ತಿದ್ದವು. ಈ ಸಾಲಿನಿಂದ ಅದನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಷೇರುದಾರರ ಹೆಣ್ಣುಮಕ್ಕಳ ಮದುವೆ ನೀಡುತ್ತಿದ್ದ 40 ಲೀಟರ್ ಉಚಿತ ಹಾಲನ್ನು 60 ಲೀಟರ್‌ಗೆ ಏರಿಕೆ ಮಾಡಲಾಗಿದೆ ಎಂದರು.

ಷೇರುದಾರರ ತಿಥಿ ಕಾರ್‍ಯಕ್ಕೆ 25 ಲೀಟರ್‌ನಿಂದ 40 ಲೀಟರ್‌ಗೆ ಏರಿಕೆ ಮಾಡಲಾಗಿದೆ. ಸಂಘದ ಎಲ್ಲಾ ಉತ್ಪಾದಕ ಷೇರುದಾರರಿಗೆ ಸಂಘದಿಂದಲೇ ಉಚಿತವಾಗಿ ಗುಂಪು ವಿಮೆ ಯೋಜನೆ ಮಾಡಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ತಾಪಂ ಮಾಜಿ ಸದಸ್ಯರಾದ ಸಿ.ಎಸ್.ಗೋಪಾಲಗೌಡ, ಗಂಗಾಧರ್, ಗ್ರಾಪಂ ಅಧ್ಯಕ್ಷೆ ಗಾಯಿತ್ರಿಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿ.ಪ್ರಕಾಶ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಕಾಳೇಗೌಡ, ಸದಸ್ಯ ಸಿ.ಎ.ಲೋಕೇಶ್, ಪಶುವೈದ್ಯ ಡಾ.ಸಂತೋಷ್, ಮಾರ್ಗವಿಸ್ತರ್ಣಾಧಿಕಾರಿ ನಾಗೇಂದ್ರಕುಮಾರ್, ಮುಖಂಡ ಸಿ.ಡಿ.ಮಹದೇವು, ಡೇರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಆರ್.ವರದರಾಜು, ಸಿ.ಎಂ.ರಮೇಶ್, ಸಿ.ಎಸ್.ಲೋಕೇಶ್, ಸಿ.ಎ.ಮಂಜುನಾಥ್, ಸಿ.ಎಸ್.ಕೆಂಪೇಗೌಡ, ಸಿ.ಬಿ.ನಾರಾಯಣಚಾರಿ, ಯೋಗೇಂದ್ರ, ವರಲಕ್ಷ್ಮೀ, ಯಶೋಧಮ್ಮ, ಹೇಮಾಪುಟ್ಟಯ್ಯ, ಕಾರ್‍ಯದರ್ಶಿ ಸಿ.ಕೆ.ಲೋಕೇಶ್, ಪರೀಕ್ಷಕ ಸಿ.ಆರ್.ಯೋಗೇಶ್, ಸಿ.ಪಿ.ಜಗದೀಶ್, ಯಶ್ವಂತ್, ಸಂಜು ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ