ಕನ್ನಡಪ್ರಭ ವಾರ್ತೆ ಮೈಸೂರು
ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿ ಸಿದ್ದರಾಮಯ್ಯ ಅಭಿಮಾನಿಗಳು ನ್ಯಾಯಾಲಯದ ಬಳಿಯ ಗಾಂಧಿ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟಿಸಿ, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಮುಖಂಡರಾದ ಕೆ.ಎಸ್. ಶಿವರಾಮು, ಲೋಕೇಶ್ ಕುಮಾರ್, ವೆಂಕಟೇಶ್, ಬಸವಣ್ಣ, ಬಸವರಾಜು, ಕವಿತಾ ಮೊದಲಾದವರು ಇದ್ದರು.ಜಿಪಂ ಮುಂಭಾಗದಲ್ಲಿ ಪ್ರತಿಭಟನೆ
ಇನ್ನೂ ಜಿಪಂ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಲೊಕೇಶ್ ಪಿಯಾ ಮಾತನಾಡಿ, ಸಿಎಂ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಯ ಯಾವುದೇ ನಾಯಕರಿಗಿಲ್ಲ. ಸಿಎಂ ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಮುಂದೆಯೂ ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಅವರಿಗೆ ಗೆಲುವು ಸಿಗಲಿದೆ ಎಂದರು. ಮುಖಂಡರಾದ ಕೃಷ್ಣನಾಯಕ, ಶೇಖರ್, ಮಹದೇವ, ಶಿವು, ಗಿರೀಶ್, ಕುಮಾರ, ಮಲ್ಲುಸ್ವಾಮಿ ಮೊದಲಾದವರು ಇದ್ದರು.