ಜೂನ್ 4 ಹತ್ತಿರವಾದಂತೆ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

KannadaprabhaNewsNetwork | Published : May 24, 2024 12:49 AM

ಸಾರಾಂಶ

ಈ ಬಾರಿ ಮಹಿಳಾ ಮತದಾರರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ತಮ್ಮ ಮತವನ್ನು ಯಾರಿಗೆ ನೀಡಿದ್ದಾರೆ ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ, ಮಹಿಳಾ ಮತದಾರರ ಮತಗಳನ್ನು ಪಡೆದ ಆಭ್ಯರ್ಥಿಗೆ ಲೀಡ್ ಬರುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಲೋಕಸಭಾ ಚುನಾವಣೆಯ ನಡೆದ26 ದಿನಗಳಾಗಿದೆ ಎರಡೂ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಮತ ಎಣಿಕೆ ನಡೆಯುವ ಜೂನ್‌ 4 ರ ಸುದಿನಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಎರಡೂ ಪಕ್ಷಗಳ ಬೆಂಬಲಿಗರು ತಮ್ಮ ಅಭ್ಯರ್ಥಿಯೇ ಗೆಲ್ಲುವುದೆಂದು ಬೆಟ್ಟಿಂಗ್ ಸಹ ಜೋರಾಗಿ ನಡೆಯುತ್ತದೆ.ಕೋಲಾರ ಜಿಲ್ಲೆಯ ಆರು , ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಕೋಲಾರ ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 19 ಜನ ಹುರಿಯಾಳುಗಳು ಕಣದಲ್ಲಿದ್ದಾರೆ. ಇದರಲ್ಲಿ ಪ್ರಮುಖ ಪಕ್ಷಗಳಾದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಕೆ. ವಿ ಗೌತಮ್ ಇವರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ಜೋರಾಗಿದೆ.

ಮಹಿಳೆಯರ ಮತಗಳೇ ನಿರ್ಣಾಯಕ

ಇನ್ನೊಂದೆಡೆ ಈ ಬಾರಿ ಮಹಿಳಾ ಮತದಾರರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ತಮ್ಮ ಮತವನ್ನು ಯಾರಿಗೆ ನೀಡಿದ್ದಾರೆ ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ, ಮಹಿಳಾ ಮತದಾರರ ಮತಗಳನ್ನು ಪಡೆದ ಆಭ್ಯರ್ಥಿಗೆ ಲೀಡ್ ಬರುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.

ಮತ ಎಣಿಕೆ ದಿನಾಂಕಕ್ಕೆ ಇನ್ನೂ ಸಮಯವಿರುವ ಕಾರಣ ಸೋಲು ಗೆಲುವಿನ ಲೆಕ್ಕಾಚಾರ, ವಿಧಾನಸಭಾ ಕ್ಷೇತ್ರವಾರು ಲೀಡ್‌ ಪಡೆಯುವ ’ಗಣಿತ’ದ ಚರ್ಚೆಗಳು ಜೋರಾಗಿವೆ. ಆಯಾ ಪಕ್ಷಗಳ ಕಾರ್ಯ ಕರ್ತರು ರಾಜಕೀಯ ತಜ್ಞರು, ಬೂತ್‌ ಮಟ್ಟದಿಂದ ಕೆಲಸ ಮಾಡಿರುವ ಮುಖಂಡರು ತಮ್ಮಯೆಯಾದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಈ ಕಾಯುವಿಕೆ ಸಮಯ ಅಭ್ಯರ್ಥಿಗಳಿಗೆ ಬಿಸಿಲಿನ ತಾಪದಂತೆ ಕಾಡುತ್ತಿದೆ. ಕೋಟ್ 1: ಪ್ರಧಾನಿ ಮೋದಿಯವರ ಅಭಿವೃದ್ಧಿಯ ಕಾರ್ಯಗಳಿಂದ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯತೆಯಿಂದ ಆಭ್ಯರ್ಥಿಯ ಗೆಲುವಿಗೆ ಶ್ರಮಿಸಿರುವ ಕಾರಣ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳಾದ ಆಭ್ಯರ್ಥಿಯಾದ ಮಲ್ಲೇಶ ಬಾಬು ರವರೆಗೆ ಇಪ್ಪತ್ತು ಸಾವಿರ ಲೀಡ್ ಬಂದೇ ಬರುತ್ತದೆ.ಬಿ.ವಿ ಮಹೇಶ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

Share this article