ಕನ್ನಡಪ್ರಭ ವಾರ್ತೆ ಬೆಳಗಾವಿ
ಇಲ್ಲಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಜ್ಞಾನ ಸಂಗಮ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಭಾರತದ ಮುಂದಿನ ಶ್ರೇಷ್ಠ ಕೃತಕ ಬುದ್ಧಿಮತ್ತೆ(ಎಐ) ಕಂಪನಿಯನ್ನು ಕಟ್ಟುವವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವವರು, ಕೃಷಿ ರಂಗವನ್ನು ಪರಿವರ್ತಿಸುವವರು, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ವ್ಯಕ್ತಿ ಬಹುಶಃ ಇಂದು ಪದವಿ ಪಡೆಯುತ್ತಿರುವರರಲ್ಲಿ ಒಬ್ಬರಾಗಿರಬಹುದು. ಯಾರ ಶಕ್ತಿ ಮತ್ತು ಸಾಮರ್ಥ್ಯವನ್ನು ನಾವು ಪ್ರಶ್ನೆ ಮಾಡುವಂತಿಲ್ಲ ಎಂದರು.
ಪದವಿ ಪೂರ್ಣಗೊಳಿಸಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ನೀವು ಪದವಿ ಪಡೆಯಲು ಹಗಲು- ರಾತ್ರಿ ಪ್ರಯೋಗಾಲಯಗಳಲ್ಲಿ ಕಳೆದಿದ್ದೀರಿ. ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದೀರಿ, ನಿಮ್ಮ ಯಶಸ್ಸಿಗೆ ಕಾರಣರಾದ ಶಿಕ್ಷಕರು, ಪಾಲಕರು ಮತ್ತು ಸ್ನೇಹಿತರನ್ನು ಮರೆಯಬೇಡಿ. ಶಿಕ್ಷಕರು ಕೇವಲ ಎಂಜಿನಿಯರಿಂಗ್ ಅನ್ನು ಬೋಧಿಸಿಲ್ಲ. ಬದಲಾಗಿ ಎಂಜಿಯರ್‌ಗಳನ್ನು ಹುಟ್ಟುಹಾಕಿದ್ದೀರಿ ಎಂದು ಶಿಕ್ಷಕರನ್ನು ಅಭಿನಂದಿಸಿದರು.ಅವಕಾಶಗಳ ಆಗರ: ತಂತ್ರಜ್ಞಾನಗಳು ಹೆಚ್ಚಾದಷ್ಟು ಅವಕಾಶಗಳು ಸಹ ಹೆಚ್ಚಾಗಲಿವೆ. ನೀವು ಕೃತಕ ಬುದ್ಧಿಮತ್ತೆ, ಕ್ವಾಟಂ ಕಂಪ್ಯೂಟಿಂಗ್ ತಂತ್ರಜ್ಞಾನ ಹೆಚ್ಚು ಸದ್ದು ಮಾಡುತ್ತಿವೆ. ವಿದ್ಯಾರ್ಥಿಗಳು ಉಪಗ್ರಹಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಯೋಟೆಕ್ನಾಲಜಿ, ಔಷಧ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದೆ. ಯಾವುದೇ ತಂತ್ರಜ್ಞಾನ ರೂಪಿಸಿದರೂ, ಅದು ಭಾರತದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಕೃತಕ ಬುದ್ಧಿಮತ್ತೆ (ಎಐ) ಎಂಜಿನಿಯರ್‌ಗಳ ಸ್ಥಾನವನ್ನು ಕಸಿಯಬಾರದು ಎಂದರೆ, ಇಂದಿನ ಎಂಜಿನಿಯರ್‌ಗಳು ಪ್ರತಿನಿತ್ಯ ಅಪ್‌ಡೇಟ್ ಆಗಿರಬೇಕು. ಕಲಿಕೆ ಎಂಬುದು ನಿರಂತರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ವ್ಯಾಪಕ ಶ್ರೇಣಿಯ ಕಾರ್ಯಗಳಲ್ಲಿ ಮಾನವ ಸಾಮರ್ಥ್ಯಕ್ಕೆ ಸಮನಾದ ಅಥವಾ ಅದಕ್ಕಿಂತ ಮಿಗಿಲಾದ ಸಾಮರ್ಥ್ಯವನ್ನು ಹೊಂದಿರುವ ವ್ಯವಸ್ಥೆಯಾಗಿದೆ. ಇದು ನಿಖರವಾಗಿ ಯಾವಾಗ ಸಕಾರಗೊಳ್ಳುತ್ತದೆ ಎಂದು ಯಾರೂ ಸಹ ಊಹೆ ಮಾಡಲು ಸಾದ್ಯವಿಲ್ಲ. ಆದರೆ, ಅದರ ದಿಕ್ಕು ಮಾತ್ರ ಸ್ಪಷ್ಟವಾಗಿದೆ. ಹೀಗಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಐಯನ್ನು ಕಲಿಯುವುದು ಐಚ್ಛಿಕವಾಗಿ ಉಳಿದಿಲ್ಲ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಭಾರತದ ಶ್ರೇಷ್ಠ ಎಂಜಿನಿಯರ್ ಹಾಗೂ ರಾಷ್ಟ್ರನಿರ್ಮಾಪಕ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹೆಸರಿನೊಂದಿಗೆ ಗುರುತಿಸಿಕೊಂಡಿದೆ. ಅವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಉದ್ಯಮ ಅಥವಾ ನಾಶ ಎಂಬ ಅವರ ಸಂದೇಶವನ್ನು ಇಂದಿನ ಸಂದರ್ಭದಲ್ಲಿ ಹೊಸತನ ಸಾಧಿಸುವುದು, ಸ್ವಾವಲಂಬಿಗಳಾಗುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವುದು ಎಂಬ ಅರ್ಥದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಘಟಿಕೋತ್ಸವದಲ್ಲಿ 74,763 ಪದವಿ ವಿದ್ಯಾರ್ಥಿಗಳು ಹಾಗೂ 329 ಪಿಎಚ್.ಡಿ ವಿದ್ಯಾರ್ಥಿಗಳು ಪದವಿ ಪಡೆದರು. 38 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ, 49 ವಿದ್ಯಾರ್ಥಿಗಳು ದತ್ತಿ ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದರು. 7 ವಿದ್ಯಾರ್ಥಿಗಳು ದತ್ತಿ ನಿಧಿ ಚಿನ್ನದ ಪದಕ ಪಡೆದರು. ಒಟ್ಟಾರೆ 45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕವನ್ನು (38 ವಿಟಿಯು ಗೋಲ್ಡ್ ಮೆಡಲ್ ಹಾಗೂ 56 ದತ್ತಿ ನಿಧಿ) ನೀಡಿ ಗೌರವಿಸಿತು.
ಕೋಟ್.
- ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವರು
ಪ್ರೀತಿಯ ವಿದ್ಯಾರ್ಥಿಗಳು ಪದವಿಯನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಿದ್ದೀರಿ. ಈಗ ಬಹುತೇಕರು ವೃತ್ತಿಪರ ಜೀವನಕ್ಕೆ ಹೆಜ್ಜೆ ಹಾಕುತ್ತಿದ್ದೀರಿ. ನಿಮ್ಮ ಜ್ಞಾನವನ್ನು ಬಳಕೆ ಮಾಡುವ ಸಮಯ ಬಂದಿದೆ. ನಿಮಗೆ ಸ್ವಾತಂತ್ರ್ಯ ಸಿಗುವ ಜತೆಗೆ, ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ವೃತ್ತಿ ಜೀವನವನ್ನು ಮತ್ತಷ್ಟು ಉಜ್ವಲಗೊಳಿಸಲಿವೆ. ಜೀವನದಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ.
* ಪ್ರೊ.ಎಸ್.ವಿದ್ಯಾಶಂಕರ್, ಕುಲಪತಿಗಳು, ವಿಟಿಯು.--------
ಕೋಟ್ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿಯಲ್ಲಿ 9.79 ಸಿಜಿಪಿಎ ಪಡೆದು ವಿಶ್ವವಿದ್ಯಾಲಯದಲ್ಲಿಯೇ ಅತೀ ಹೆಚ್ಚು ಅಂಕ ಪಡೆದಿದ್ದೇನೆ. ಹೆಚ್ಚಿನ ಗೋಲ್ಡ್ ಮೆಡಲ್ ಬರುವ ನಿರೀಕ್ಷೆ ಇತ್ತು. ಈಗ ಬಂದಿರುವ ಐದು ಚಿನ್ನದ ಪದಕಗಳಿಂದಲೂ ಖುಷಿಯಾಗಿದೆ. ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬ, ಉಪನ್ಯಾಸಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡುವ ಗುರಿ ಇದೆ.
ಕಿರ್ತಿ ಕೆ.ಬಿ, 5 ಚಿನ್ನದ ಪದಕಕೋಟ್
ನಮ್ಮದು ರೈತ ಕುಟುಂಬವಾಗಿದ್ದು, ತಂದೆ ರೈತರು. ಶಿವಮೊಗ್ಗ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ 9.44 ಸಿಜಿಪಿಎ ಪಡೆದಿದ್ದರಿಂದ 7 ಚಿನ್ನದ ಪದಗಳು ಬಂದಿವೆ. ನಿರಂತರ ಓದಿನ ಶ್ರಮಕ್ಕೆ ಫಲ ಸಿಕ್ಕಿದೆ. ಮುಂದೆ ಯುಪಿಎಸ್ ಸಿ ಸೇರಿದಂತೆ ಇತರ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತೇನೆ.ಧನ್ಯಶ್ರೀ.ಬಿ.ಎಂ, 7 ಚಿನ್ನದ ಪದಕ
------ಕೋಟ್
ವಿಶ್ವನಾಥ ಮೊದಲ ಸೆಮಿಸ್ಟರ್ ಇದ್ದಾಗಲೇ ಟಾಪ್ 10 ರ್‍ಯಾಂಕ್‌ನಲ್ಲಿ ಬರುವ ನಿರೀಕ್ಷೆ ಮಾಡಿದ್ದೆ. ಆದರೆ, ಟಾಪ್ 1 ಬಂದಿದ್ದು ಅನಿರೀಕ್ಷಿತ. ಇದರ ಹಿಂದೆ ತಂದೆ-ತಾಯಿ, ಸಂಬಂಧಿಕರು, ಗ್ರಾಮಸ್ಥರು, ಪ್ರಾಧ್ಯಾಪಕರ ಶ್ರಮ ಇದೆ. ಇಲ್ಲಿ ನನ್ನ ಹೆಸರು ಮಾತ್ರ ಬಂದಿದೆ. ಇದರ ಹಿಂದೆ ಕಾಣದ ಕೈಗಳ ಸಹಾಯ ಬಹಳಷ್ಟಿದೆ. ನಾನು ರೆಗೂಲರ್ ಸ್ಟೂಡೆಂಟ್ ಆಗಿದ್ದೆ, ಅದು ನನಗೆ ಬಹಳಷ್ಟು ಉಪಯುಕ್ತವಾಯಿತು. ನಿತ್ಯ ಮನೆಯಲ್ಲಿ ಹಾಲು ಕರೆಯುವುದು, ಕೃಷಿ ಕೆಲಸಕ್ಕೆ ಅಪ್ಪ-ಅವ್ವನಿಗೆ ನೆರವಾಗುತ್ತಿದ್ದೆ. ರಜೆ ಇದ್ದಾಗ, ಗೂಡ್ಸ್ ಗಾಡಿ ಓಡಿಸಿದ್ದೇನೆ. ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಮುಂದೆ ಮಾಸ್ಟರ್ಸ್ ಮಾಡುವ ಆಶಯ ಇದೆ.(12ಎಚ್.ಎಂ.ವಿಶ್ವನಾಥ್, 12 ಚಿನ್ನದ ಪದಕ
-----ಬಾಕ್ಸ್
ರೈತನ ಮಗಳಿಗೆ 8 ಚಿನ್ನದ ಪದಕಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ರೈತನ ಮಗಳು ಸಾಕ್ಷಿ ಸುರೇಶ ಹಡಗಲೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟು ಚಿನ್ನದ ಪದಕ ಬಾಚಿಕೊಂಡಿದ್ದಾರೆ. ತಂದೆ ಸುರೇಶ ಹಡಗಲೆ ಒಂದು ಎಕರೆ ಜಮೀನಿನಲ್ಲಿ ಕೃಷಿ ನಡೆಸಿ ಮಗಳಿಗೆ ಎಂಜಿನಿಯರಿಂಗ್ ಓದಿಸಿದ್ದಾರೆ. ತಾಯಿ ಜಯಶ್ರೀ ಗೃಹಿಣಿ.
ನಿಪ್ಪಾಣಿಯ ವಿಎಸ್ ಎಂಎಸ್ ಇನ್ಸಟ್ಯೂಟ್ ಆಪ್ ಟೆಕ್ನಾಲಾಜಿಯಲ್ಲಿ ಮೆಕ್ಯಾನಿಕಲ್ ಇಂನಿಯರಿಂಗ್ ಓದಿರುವ ಸಾಕ್ಷಿ ಯುಪಿಎಸ್‌ಸಿ ಕೋಚಿಂಗ್ ಪಡೆದು ಐಎಎಸ್ ಮಾಡಬೇಕು ಎಂದುಕೊಂಡಿದ್ದಾರೆ. ಸದ್ಯ ಯಾವುದಾದರೂ ಸರ್ಕಾರಿ ನೌಕರಿಗಾಗಿ ತಯಾರಿ ನಡೆಸಿದ್ದಾರೆ. ಯಾವುದೇ ಟ್ಯೂಷನ್ ಇಲ್ಲದೇ ತನ್ನಷ್ಟಕ್ಕೆ ತಾನು ಓದಿ 9.54 ಸಿಜಿಪಿ ಅಂಕ ಗಳಿಸಿದ್ದಾರೆ.----
ಬಾಕ್ಸಬೆಂಗಳೂರಿನ ಚಿನ್ಮಯಿಗೆ 7 ಚಿನ್ನದ ಪದಕ
ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ವಿಭಾಗದ ಚಿನ್ಮಯಿ.ಎಂ.ಕಶ್ಯಪ್ 7 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಎಷ್ಟು ಲಕ್ಷ ರೂಪಾಯಿ ಕೊಟ್ಟು ಚಿನ್ನ ಖರೀದಿಸಿದರೂ ಇಷ್ಟು ಖುಷಿ ಆಗುತ್ತಿರಲಿಲ್ಲ. ನಮ್ಮ ತಂದೆ-ತಾಯಿ ಕನಸು ನಾನು ಈಡೇರಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಮೊದಲ ಸೆಮಿಸ್ಟರ್ ನಿಂದಲೇ ಉತ್ತಮವಾಗಿ ಓದುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ಹೆಚ್ಚು ಓದುತ್ತಿದ್ದೆ. ಇನ್ನುಳಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ತಂದೆ ಮಹೇಶ, ತಾಯಿ ನೆಟ್ವರ್ಕ್ ಎಂಜಿನಿಯರ್ ಅವರೇ ನನಗೆ ಪ್ರೇರಣೆ. ನನಗೆ ತುಂಬಾ ಸಪೋರ್ಟ್ ಮಾಡಿದರು. ಎರಡು ವರ್ಷ ಕೆಲಸ ಮಾಡಿ, ಮುಂದೆ ಮಾಸ್ಟರ್ಸ್ ಮಾಡುವೆ. ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು ಎನ್ನುತ್ತಾರೆ ಚಿನ್ನದ ಹುಡುಗಿ ಚಿನ್ಮಯಿ.