ಕಾಂಗ್ರೆಸ್‌ಗೆ ದಲಿತ ವ್ಯಕ್ತಿಯನ್ನು ಸಹಿಸಿಕೊಳ್ಳಲು ಆಗ್ತಿಲ್ಲ: ಕಾರಜೋಳ

KannadaprabhaNewsNetwork |  
Published : Sep 27, 2026, 03:00 AM IST
 | Kannada Prabha

ಸಾರಾಂಶ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಂದ್ರಕುಮಾರ್‌ ದಲಿತ ಪ್ರತಿಭಾವಂತ ಅಧಿಕಾರಿ. ದಲಿತ ವ್ಯಕ್ತಿ ಮುಖ್ಯ ಚುನಾವಣೆ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಅವರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಂದ್ರಕುಮಾರ್‌ ದಲಿತ ಪ್ರತಿಭಾವಂತ ಅಧಿಕಾರಿ. ದಲಿತ ವ್ಯಕ್ತಿ ಮುಖ್ಯ ಚುನಾವಣೆ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಅವರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಾಬು ಜಗಜೀವನರಾಂ ಅವರು ಪ್ರಧಾನಿಯಾಗುತ್ತಾರೆ ಎಂದು ಸಹಿಸಿಕೊಳ್ಳದೆ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು. ಈಗ ದಲಿತ ಸಮುದಾಯದ ವ್ಯಕ್ತಿ ಈ ಉನ್ನತ ಹುದ್ದೆಯಲ್ಲಿ ಕೂರುವುದು ಅವರಿಗೆ ಸರಿ ಇರಲಿಲ್ಲ. ದಲಿತ ಅಷ್ಟೇ ಮುಸಲ್ಮಾನರೂ ಉನ್ನತ ಹುದ್ದೆಯಲ್ಲಿರಬಾರದು ಎನ್ನುವುದು ಕಾಂಗ್ರೆಸ್‌ನ ಕೀಳುಮಟ್ಟದ ಮನಸ್ಥಿತಿ. ಹೀಗಾಗಿಯೇ ಜ್ಞಾನೇಂದ್ರಕುಮಾರ್‌ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.

ಅಲ್ಪಸಂಖ್ಯಾತ ಮುಸ್ಲಿಮರು ಹಾಗೂ ದಲಿತ ಬಾಂಧವರು ಕೇವಲ ಕಾಂಗ್ರೆಸ್ ವೋಟ್ ಬ್ಯಾಂಕ್, ನಿಜಕ್ಕೂ ಈ ದೇಶದ ಮುಸಲ್ಮಾನರಿಗೆ ಹಾಗೂ ದಲಿತರಿಗೆ ಅನ್ಯಾಯವಾಗಿದ್ದು ಕಾಂಗ್ರೆಸ್‌ನಿಂದ. ಓರ್ವ ಪ್ರತಿಭಾವಂತ ವಿದ್ಯಾರ್ಥಿ, ಅಸ್ಪೃಶ್ಯ ಸಮುದಾಯದಿಂದ ಬಂದ ವ್ಯಕ್ತಿ ಚುನಾವಣಾ ಆಯೋಗದಂತಹ ಶ್ರೇಷ್ಠ ಹುದ್ದೆಯಲ್ಲಿರುವುದು ಕಾಂಗ್ರೆಸ್‌ಗೆ ಸಹನೆಯಾಗುತ್ತಿಲ್ಲ ಎಂದು ದೂರಿದರು.

ನಕಲಿ ಗಾಂಧೀ ಕುಟುಂಬದಿಂದ ನಾಗರಿಕ ಧಂಗೆ ಎಬ್ಬಿಸುವ, ತಾನೇ ಅಧಿಕಾರದಲ್ಲಿರಬೇಕು ಎಂಬ ಉಮೇದಿನಲ್ಲಿದ್ದ ಗಾಂಧೀಜಿ ಅವರ ಹೆಸರು ಇರಿಸಿಕೊಂಡ ನಕಲಿ ಗಾಂಧೀ ಕುಟುಂಬದ ಷಡ್ಯಂತ್ರವನ್ನು ಪ್ರಧಾನಿ ಮೋದಿ ವಿಫಲಗೊಳಿಸಿದರು. ಈ ಕಾರಣಕ್ಕಾಗಿಯೇ ಹತಾಶೆಯಾಗಿರುವ ನಕಲಿ ಗಾಂಧಿ ಕುಟುಂಬ ನಾಗರಿಕ ಧಂಗೆ ಎಬ್ಬಿಸಿ, ಅರಾಜಕತೆ ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದು, ಕೆಲವು ವಿದೇಶಿ ಶಕ್ತಿಗಳು ಸಹ ಈ ದ್ವೇಷಕ್ಕೆ ಕೈಜೋಡಿಸಿದೆ. ಈಗ ಚುನಾವಣೆ ಆಯುಕ್ತರ ಮೇಲೆ ಅವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ದೂರಿದರು.

ಪ್ರತಿ ಜಿಲ್ಲೆಗೆ ₹100 ಕೋಟಿ ಪ್ಯಾಕೇಜ್ ಘೋಷಿಸಿ:

ಬರ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಸರ್ಕಾರ ಯವ ತಯಾರಿಯೂ ಮಡಿಕೊಂಡಿಲ್ಲ. ನೀರಿಲ್ಲ, ವಿದ್ಯುತ್ ಇಲ್ಲ, ಮೇವಿಲ್ಲ, ಕೂಡಲೇ ಲೋಡಶೆಡ್ಡಿಂಗ್ ನಿಲ್ಲಿಸಿ ವಿದ್ಯುತ್ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಿ, ಕೂಡಲೇ ಪ್ರತಿ ಜಿಲ್ಲೆಗೆ ₹100 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಇದರಲ್ಲಿ ಗೋಶಾಲೆ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ಕಾರಜೋಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನವೀನ ಅರಕೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಐವಿ–ಏಡ್ಸ್‌ ಕುರಿತು ಬೀದಿ ನಾಟಕ
ಹೊರಗಿನವರ ಸ್ಪರ್ಧೆಗೆ ಸ್ಥಳೀಯರ ವಿರೋಧ