ಕನ್ನಡಪ್ರಭ ವಾರ್ತೆ ಸೊರಬ
ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಮತೀಯರ ಸಂಖ್ಯೆ ಹೆಚ್ಚಾದಂತೆ ರಾಷ್ಟ್ರದಲ್ಲಿ ಅಶಾಂತಿ, ಕ್ಷೋಭೆಗಳ ತಾಣವಾಗುತ್ತದೆ ಎಂದು ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆತಂತ ವ್ಯಕ್ತಪಡಿಸಿದರು.ಬುಧವಾರ ನೇಹಾ ಹಿರೇಮಠ ಕೊಲೆಗೈದ ಫಯಾಜ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ತಾಲೂಕಿನ ಎಲ್ಲಾ ಮಠಾಧೀಶರ ಮತ್ತು ಹಿಂದೂ ಸಂಘಟನೆಗಳ ಸಂಘ ಸಂಸ್ಥೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ದೇಶದ ವಾರಸುದಾರರು ಹಿಂದೂಗಳಾಗಿದ್ದು, ಈ ದೇಶದ ಉಳಿವಿಗಾಗಿ ಹಿಂದೂಗಳ ರಕ್ತ, ಬೆವರು, ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಇಲ್ಲಿ ಹಿಂದೂ ಸಮಾಜದ ರಕ್ಷಣೆಯಾಗಬೇಕಾಗಿದೆ. ಆದರೆ ಇತರೆ ಧರ್ಮದವರಿಗೂ ಸಮಾನ ಹಕ್ಕು ನೀಡಲಾಗಿದೆ ಎಂದರು.ಅನ್ಯ ಮತದವರೇ ವಾಸಿಸುವ ಇರಾನ್, ಅಫಘಾನಿಸ್ತಾನ, ಬಾಂಗ್ಲಾ, ಕೆನಡ ಮತ್ತು ಪಾಕಿಸ್ಥಾನ ದೇಶಗಳು ಅರಾಜಕತೆ ಮತ್ತು ಅಶಾಂತೆಯ ದೇಶಗಳಾಗಿವೆ. ಹಿಂದೂಗಳು ಮಾತ್ರ ಶಾಂತಿ ಪ್ರಿಯರು. ಆದರೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದವರು ಹಿಂದುಗಳಿಂದಲೇ ಅಶಾಂತಿ ಕಾರಣ ಎಂದು ಹೇಳುತ್ತಿ ರುವುದು ವಿಪರ್ಯಾಸ ಎಂದರು.
ಕಾನೂನು ಪಾಲಿಸಲು ಮಾತ್ರ ಹಿಂದೂಗಳು. ಅನ್ಯಮತೀಯರಿಗೆ ಇದು ಅನ್ವಯಿಸುವುದಿಲ್ಲ ಎಂದು ರಾಜಕೀಯ ನಾಯಕರು ಭಾವಿಸಿದಂತಿದೆ. ಇಂದು ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಅನ್ಯ ಮತೀಯರು ಅನುಭವಿಸಬೇಕು ಎಂಬುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶ್ರೀಗಳು ಉತ್ತಮ ಆಡಳಿತಕ್ಕೆ ನಿಮ್ಮನ್ನು ಆಯ್ಕೆ ಮಾಡಲಾಗಿದೆಯೇ ಹೊರತು ಮುಸ್ಲಿಮರ ತುಷ್ಟೀಕರಕ್ಕೆ ನಿಮ್ಮನ್ನು ಆಯ್ಕೆ ಮಾಡಿಲ್ಲ ಎಂದರು.ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ತಹಶೀಲ್ದಾರ್ ಕಛೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು. ಪುರಸಭೆ ಮುಂಭಾಗದಲ್ಲಿ ಪಾಣಿ ರಾಜಪ್ಪ, ಅಂಡಿಗೆ ಅಶೋಕ ನಾಯಕ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದೇವರಾಜ್ ಅರಳಳ್ಳಿ ಮಾತನಾಡಿದರು.
ಗುತ್ತಿ ನಾಗರಾಜ್, ನಂದೀಶ್ ಬಿಳವಾಣಿ ಜಾನಕಪ್ಪ ಒಡೆಯರ್ ಯಲಸಿ, ಚಂದನ್, ಲೋಕೇಶ್ ಗ್ಯಾರೇಜ್, ಸುಧಾಕರ ಭಾವೆ, ಸತೀಶ್ ಬೈದೂರ್, ಸುಧೀರ್ ಪೈ, ರವಿ ಗುಡಿಗಾರ್, ಗಜಾನನ ರಾವ್, ಯೋಗೇಶ ಓಟ್ಟೂರು, ರಾಘು ಆಚಾರ್, ನಾಗರಾಜ್ ಅಂಬಾರಿ, ಶಿವರಾಮ ಹೆಗಡೆ, ರೂಪದರ್ಶಿನಿ, ರೇಣುಕಮ್ಮ ಗೌಳಿ, ಅನಿತಾ ದಾಮ್ಲೆ, ದೇವಕಿ ಆಚಾರ್ ಮತ್ತಿತರರಿದ್ದರು.