ಗಗನಕ್ಕೆ ಹೋಗುತ್ತಿರುವ ತಂಬಾಕಿನ ಬೆಲೆ, ಉತ್ಪಾದನೆ ಇಳಿಮುಖ

KannadaprabhaNewsNetwork |  
Published : May 03, 2024, 01:06 AM ISTUpdated : May 03, 2024, 01:07 AM IST
56 | Kannada Prabha

ಸಾರಾಂಶ

ಆಂಧ್ರಪ್ರದೇಶದಲ್ಲಿ ಪ್ರತಿ ಕೆಜೆ 341 ರು. ಹೀಗೆ ಏರುತ್ತಾ ಹೋಗುತ್ತಿದೆ, ಉತ್ಪಾದನೆಯು ಹೆಚ್ಚಾದರೆ ರೈತರ ಆರ್ಥಿಕ ಶಕ್ತಿ ದುಪ್ಪಟ್ಟು ಆಗಲಿದೆ. ಚಿನ್ನದ ಬೆಳೆಗೆ ಚಿನ್ನದ ಬೆಲೆ ಆಂಧ್ರದಲ್ಲಿ ಪ್ರತಿ ಕೆಜಿಗೆ ಗರಿಷ್ಠ ರು. 341 ಮುಟ್ಟಿದ ತಂಬಾಕು ಬೆಲೆ ದೇಶ ವಿದೇಶಗಳಲ್ಲಿ ಪ್ರತಿಕೂಲ ಹವಾಮಾನ ಪರಿಣಾಮವಾಗಿ ತಂಬಾಕು ದಿನೇ ದಿನೇ ತಂಬಾಕು ಉತ್ಪಾದನೆ ಕುಸಿಯತೊಡಗಿದೆ.

ಕನ್ನಡಪ್ರಭವಾರ್ತೆ ಮೈಸೂರು

ವಿಶ್ವದಲ್ಲೆ ಭಾರತ ದೇಶ ತಂಬಾಕು ಉತ್ಪಾದನೆ ಉತ್ತಮ ಶ್ರೇಣಿಯನ್ನು ಪಡೆದುಕೊಂಡಿದ್ದು, ತಂಬಾಕಿನ ಬೆಲೆ ಗಗನಕ್ಕೆ ಹೋಗುತ್ತಿದ್ದರೆ, ಉತ್ಪಾದನೆ ಇಳಿಮುಖವಾಗಿದೆ.

ತಂಬಾಕು ಭಾರತದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದು 45.7 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ರು. ರಾಷ್ಟ್ರೀಯ ಖಜಾನೆಗೆ ವಿದೇಶಿ ವಿನಿಮಯದ ವಿಷಯದಲ್ಲಿ 9,739.06 ಕೋಟಿ ರು. ವಹಿವಾಟು ನಡೆಸಿ ವಿಶ್ವದಲ್ಲಿ ತಂಬಾಕು ಉತ್ಪಾದನೆಯಲ್ಲಿ ಭಾರತವು ಪ್ರಮುಖ ಸ್ಥಾನ ಹೊಂದಿದೆ.

ಆಂಧ್ರಪ್ರದೇಶದಲ್ಲಿ ಪ್ರತಿ ಕೆಜೆ 341 ರು. ಹೀಗೆ ಏರುತ್ತಾ ಹೋಗುತ್ತಿದೆ, ಉತ್ಪಾದನೆಯು ಹೆಚ್ಚಾದರೆ ರೈತರ ಆರ್ಥಿಕ ಶಕ್ತಿ ದುಪ್ಪಟ್ಟು ಆಗಲಿದೆ. ಚಿನ್ನದ ಬೆಳೆಗೆ ಚಿನ್ನದ ಬೆಲೆ ಆಂಧ್ರದಲ್ಲಿ ಪ್ರತಿ ಕೆಜಿಗೆ ಗರಿಷ್ಠ ರು. 341 ಮುಟ್ಟಿದ ತಂಬಾಕು ಬೆಲೆ ದೇಶ ವಿದೇಶಗಳಲ್ಲಿ ಪ್ರತಿಕೂಲ ಹವಾಮಾನ ಪರಿಣಾಮವಾಗಿ ತಂಬಾಕು ದಿನೇ ದಿನೇ ತಂಬಾಕು ಉತ್ಪಾದನೆ ಕುಸಿಯತೊಡಗಿದೆ.

2021ರ ಸಮಯದಲ್ಲಿ, ಭಾರತವು ಉತ್ಪಾದನೆಯಲ್ಲಿ 2ನೇ ಅತಿದೊಡ್ಡ ದೇಶವಾಗಿ ನಿಂತಿದೆ. ಅಂಕಿ ಅಂಶ ಡೇಟಾ, 2021 ಮತ್ತು ವಿಶ್ವದ 4 ನೇ ಅತಿದೊಡ್ಡ ತಂಬಾಕಿನ ರಫ್ತುದಾರ (ಐಟಿಸಿ ಟ್ರೇಡ್ಮ್ಯಾಪ್ ಡೇಟಾ 2021 . ಭಾರತವು ಫ್ಲೂ ಕ್ಯೂರ್ಡ್ ವರ್ಜೀನಿಯಾ ತಂಬಾಕಿನ ವಿಭಿನ್ನ ಶೈಲಿಗಳ ನ್ನು ಉತ್ಪಾದಿಸುತ್ತದೆ, ಅದು ಅವುಗಳ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುತ್ತದೆ.

ವಿಶ್ವದ ತಂಬಾಕು ಬೆಳೆಯುವ ಪ್ರಮುಖ ದೇಶಗಳಾದ ಜಿಂಬಾವೆ ಮತ್ತು ಬ್ರೆಜಿಲ್ ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ, ಸುಮಾರು 150 ರಿಂದ 200 ಮಿಲಿಯನ್ ಕೆಜಿ ಬೆಳೆ ಕಡಿಮೆಯಾಗಿದೆ. ಆದ್ದರಿಂದ ಇವತ್ತು ವಿಶ್ವಾದ್ಯಂತ ತಂಬಾಕಿಗೆ ಹೆಚ್ಚಿದ ಬೇಡಿಕೆ ಬಂದಿದ್ದು, ಎಲ್ಲ ಕಡೆ ತಂಬಾಕು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ತಂಬಾಕು ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಎರಡು ವರ್ಷಗಳಿಂದ ತುಂಬ ಬೇಡಿಕೆ ಇದ್ದು, ಇದರ ಪರಿಣಾಮವಾಗಿ ಕರ್ನಾಟಕ ಮತ್ತು ಆಂಧ್ರ ರೈತರು ಉತ್ತಮ ಬೆಲೆ ಗಳಿಸಿದ್ದಾರೆ. ಅದರಲ್ಲೂ ಈ ವರ್ಷ ತಂಬಾಕು ಬೆಳೆಗೆ ಸರ್ವಕಾಲಿಕ ಮೊದಲ ಬಾರಿಗೆ ರೂ 300 ದಾಟಿದ್ದು, ಆಂಧ್ರದಲ್ಲಿ ಇತ್ತೀಚೆಗೆ ಗರಿಷ್ಠ ರು. 341 ಮುಟ್ಟಿದೆ. ಹೀಗಿರುವ ಮಾರುಕಟ್ಟೆಯ ಬೇಡಿಕೆಯನ್ನು ನೋಡಿದರೆ ಇದು ಈ ವರ್ಷವೇ ಆಂಧ್ರಪ್ರದೇಶದಲ್ಲಿ 400 ರು. ಗಳನ್ನು ಮುಟ್ಟಬಹುದು ಎಂದು ವರದಿ ಬಂದಿದೆ.

ತಂಬಾಕಿನ ಅಂಕಿ ಅಂಶಗಳನ್ನು ಗಮನಿಸುವುದಾದರೆ ಮೈಸೂರು 2022 ನೇ ಸಾಲಿನಲ್ಲಿ ಸುಮಾರು 60 ಮಿಲಿಯನ್ ಕೆಜಿಗೆ 228 ಪ್ರತಿ ಕೆಜಿಗೆ ಆಂಧ್ರಪ್ರದೇಶದಲ್ಲಿ 2022ನೇ ಸಾಲಿನಲ್ಲಿ ಸುಮಾರು 121 ಮಿಲಿಯನ್ ಕೆ.ಜಿ ಬೆಳೆದಿದ್ದು, ಸರಾಸರಿ 179 ರು. ಮತ್ತು ಆ ವರ್ಷದ ಗರಿಷ್ಠ ಬೆಲೆ 245 ರು. ಆಗಿರುತ್ತದೆ. ಆದರೆ 2023 ನೇ ಸಾಲಿನಲ್ಲಿ 181 ಮಿಲಿಯನ್ ಸುಮಾರು 60 ಮಿಲಿಯನ್ ಕೆ.ಜಿ ಬೆಳೆ ಹೆಚ್ಚಿಗೆ ಬೆಳೆಯದಿದ್ದರೂ ಸರಾಸರಿ ಬೆಲೆ ಪ್ರತಿ ಕೆಜಿಗೆ 225 ದೊರಕಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುವರ್ಣ 45 ಹೆಚ್ಚಿಗೆ ಇರುತ್ತದೆ ಮತ್ತು ಆ ವರ್ಷ ಗರಿಷ್ಠ ಬೆಲೆ 289 ತಲುಪಿರುತ್ತದೆ.

ಪ್ರಸ್ತುತ ಆಂಧ್ರಪ್ರದೇಶದಲ್ಲಿ 24 ನೇ ಸಾಲಿನ ಮಾರುಕಟ್ಟೆ ಜರುಗುತ್ತಿದ್ದು, ಇದುವರೆಗೆ ಸುಮಾರು 40 ಮಿಲಿಯನ್ ಮಾರಾಟವಾಗಿರುತ್ತದೆ, ಈ ವರ್ಷ ಸುಮಾರು 210 ರಿಂದ 2220 ವಿಲಿಯನ್ ಕೆಜಿ ಬೆಳೆ ಬೆಳೆದಿದ್ದಾರೆಂದು ತಿಳಿದು ಬಂದಿದೆ. ಆದರೆ ತುಂಬಾ ಬೇಡಿಕೆ ಇರುವುದರಿಂದ ಮಾರುಕಟ್ಟೆ ಕೂಡ ನಾಗಾಲೋಟದಿಂದ ಓಡುತ್ತಿದೆ, ಈಗ ಪ್ರತಿ ಕೆಜಿಗೆ ಗರಿಷ್ಠ ಬೆಲೆ 341 ರು. ಆಗಿರುತ್ತದೆ.

ಕರ್ನಾಟಕದ ವಿಷಯಕ್ಕೆ ಬಂದರೆ ಈ ವರ್ಷ ತಂಬಾಕು ಮಂಡಳಿ ಕರ್ನಾಟಕದ ಬೆಳೆಗಾರರಿಗೆ ಸುಮಾರು 100 ಮಿಲಿಯನ್ ಕೆ.ಜಿ ಬೆಳೆಯನ್ನು ನಿಗದಿಪಡಿಸಿದೆ ಮತ್ತು ಗೊಬ್ಬರವನ್ನು ಆಗಲೇ ರೈತರಿಗೆ ಹಂಚಿಕೆ ಮಾಡಲು ಪ್ರಾರಂಭಿಸಿದೆ. ಮತ್ತು ಗೊಬ್ಬರದ ಬೆಳೆಯು ಪ್ರತಿ ಬ್ಯಾರನ್ ಗೆ ಸುಮಾರು 5 ಸಾವಿರ ರು. ಗಳಷ್ಟು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಈಗಾಗಲೇ ರೈತರು ಟ್ರೈಸಸಿಗಳನ್ನು ಮಾಡಿ ನಾಟಿಗಾಗಿ ಕಾಯುತ್ತಿದ್ದಾರೆ. ಪ್ರಕೃತಿ ಸಹಕರಿಸಿದರೆ ನಾಟಿ ಮಾಡಲು ಸಿದ್ಧರಾಗಿದ್ದಾರೆ.

ತಂಬಾಕಿಗೆ ತುಂಬಾ ಬೇಡಿಕೆ ಇರುವುದರಿಂದ ರೈತರು ಸಹ ಉತ್ಸಾಹದಿಂದ ತ್ರೈಸಸಿಗಳನ್ನು ಮಾಡಿ ನಾಟಿ ಮಾಡಲು ರೆಡಿಯಾಗಿದ್ದಾರೆ. ಆದರೆ ಒಡ ವಾತಾವರಣ ಮುಂದುವರೆದಿದ್ದು, ಮಳೆ ಬರದ ಕಾರಣ ನಾಟಿ ಮಾಡಲು ಆಗುವುದಿಲ್ಲ, ಒಂದು ವೇಳೆ ಮಳೆಯಾದರೆ ರೈತರು ಸಕಾಲದಲ್ಲಿ ನಾಟಿ ಮಾಡಿ ಉತ್ತಮ ಇಳುವರಿನ್ನು ತೆಗೆಯುವ ಮನಸ್ಸು ಮಾಡಿದ್ದಾರೆ, ಇದರಿಂದ ಆಂಧ್ರಪ್ರದೇಶದ ರೈತರ ಹಾಗೂ ನಮ್ಮ ರೈತರು ಸಹ ಉತ್ತಮ ಲಾಭವನ್ನು ಗಳಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!