ಕನ್ನಡಪ್ರಭ ವಾರ್ತೆ ಜಮಖಂಡಿ
ಆಶಾದೇವಿ ಅವರು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಿಳೆಯರಲ್ಲಿ ಶಿಕ್ಷಣ, ಆತ್ಮವಿಶ್ವಾಸ, ಮತ್ತು ಸಾಮಾಜಿಕ ಜಾಗೃತಿ ಬೆಳೆಸುವಲ್ಲಿ ಅವರು ವಿಶೇಷ ಗಮನ ಹರಿಸಿದ್ದಾರೆ. ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಹಿಂದುಳಿದ ಸಮುದಾಯಗಳ ಬೆಂಬಲವಾಗಿ ನಿಂತಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಯುವ ಜನತೆ ಹಾಗೂ ಮಹಿಳೆಯರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ಅವರ ಸಾಧನೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲಿಟರೇಚರ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ .
ವಿಜಯಪುರದ ಅಕ್ಕಮಹದೇವಿ ಮಹಿಳಾ ವಿಶ್ವವಿದ್ಯಾಲಯ ಡಾ.ಆಶಾದೇವಿ ಗುಡಗುಂಟಿ ಅವರ ಸಮಾಜಸೇವೆ ಹಾಗೂ ಮಹಿಳಾ ಉದ್ಯಮಿಯಾಗಿ ಮಾಡಿದ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಸಂತಸ ತಂದಿದೆ. ಮಹಿಳೆಯರ ಒಳಿತಿಗಾಗಿ ಯಾವಾಗಲು ಮುಂಚೋಣಿಯಲ್ಲಿರುವ ಅವರೊಂದಿಗೆ 10 ವರ್ಷಗಳಿಂದ ಉತ್ತಮ ಒಡನಾಟವಿದೆ. ಇನ್ನರ್ ವ್ಹಿಲ್ ಕ್ಲಬ್ ಅಧ್ಯಕ್ಷರಾಗಿ ಹಿಂದುಳಿದ ಶಾಲೆಗಳನ್ನು ದತ್ತು ಪಡೆದು, ಮಕ್ಕಳಿಗೆ ಪುಸ್ತಕಗಳು, ಕಲಿಕಾ ಸಾಮಗ್ರಿ, ಗ್ರಂಥಾಲಯ ವ್ಯವಸ್ಥೆ, ಶಾಲೆಯ ಜೀರ್ಣೋದ್ದಾರ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಸೇರಿದಂತೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಮಹಿಳಾ ಮಂಡಳಿಗಳ ಆಜೀವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಡಾಕ್ಟರೇಟ್ ಪದವಿ ಸಿಕ್ಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆಡಾ. ಅಶ್ವಿನಿ ಪೂಜಾರಿ ದಂತ ವೈದ್ಯರು ಜಮಖಂಡಿ
- ಚಂದ್ರಕಲಾ ತುಪ್ಪದ ಸದಸ್ಯರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಜಮಖಂಡಿ