ಕಾರ್ಮಿಕನ ಮೇಲೆ ಹಲ್ಲೆ: ಮೊಬೈಲ್ ಕಿತ್ತುಕೊಂಡು ಪರಾರಿ

KannadaprabhaNewsNetwork |  
Published : Nov 02, 2023, 01:00 AM IST

ಸಾರಾಂಶ

ದಾಬಸ್‌ಪೇಟೆ: ಕಾರ್ಮಿಕನೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಡ್ಡಗಟ್ಟಿ ಹಲ್ಲೆಮಾಡಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದಾಬಸ್‌ಪೇಟೆ: ಕಾರ್ಮಿಕನೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಡ್ಡಗಟ್ಟಿ ಹಲ್ಲೆಮಾಡಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬಿಹಾರ ರಾಜ್ಯದ ಚಪ್ರ ಜಿಲ್ಲೆಯ ಚೈನ್ ಪುರ ಗ್ರಾಮದ ಮಿತಲೇಶ್ ಕುಮಾರ್ ಸಿಂಗ್ (43) ಹಲ್ಲೆಗೊಳಗಾಗಿ ಮೊಬೈಲ್‌ ಕಳೆದುಕೊಂಡವರು. ಇವರು ಅ.28ರಂದು ರಾತ್ರಿ 12.30ರಲ್ಲಿ ಸೋಂಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಬರುವಾಗ ಎಡೇಹಳ್ಳಿ ಗ್ರಾಮದ ಬಳಿ ಇಬ್ಬರು ಹುಡುಗರು ಸ್ಕೂಟಿಯಲ್ಲಿ ಬಂದು ನಿಲ್ಲಿಸಿ ಚಾಕು ತೋರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ