ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕಲಬುರಗಿಯಲ್ಲಿ ವಕೀಲರ ಹತ್ಯೆ ಹಾಗೂ ಚಿಕ್ಕಮಗಳೂರಿನಲ್ಲಿ ವಕೀಲರ ಮೇಲಿನ ಹಲ್ಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿಯ ವಕೀಲರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ವಕೀಲರ ಸಂಘದಿಂದ ಪಾದಯಾತ್ರೆ ಮೂಲಕ ವಕೀಲರ ಸಂಘದ ಸದಸ್ಯರು ತಾಲೂಕು ಕಚೇರಿಗೆ ತೆರಳಿ ಬಹಿರಂಗ ಸಭೆ ನಡೆಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ಜಗದಪ್ಪ ಮಾತನಾಡಿ, ದೇಶದಲ್ಲಿ ಮೇಲಿಂದ ಮೇಲೆ ವಕೀಲರ ಮೇಲೆ ಹಲ್ಲೆ ನಡೆಯುತ್ತಿದ್ದು, ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಮಂಡಿಸಿರುವ ವಕೀಲರ ರಕ್ಷಣಾ ಕಾಯ್ದೆಯು ಕಾಟಾಚಾರದ ಕಾಯ್ದೆಯಾಗಿದ್ದು, ಇಂತಹ ಕಾಯ್ದೆಯನ್ನು ಸರ್ಕಾರ ಮಂಡಿಸಬಾರದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಕೂಡಲೇ ಸರ್ಕಾರ ವಕೀಲರ ರಕ್ಷಣಾ ಕಾಯ್ದೆಯನ್ನು ಮರುಪರಿಶೀಲಿಸಿ ಕಠಿಣ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಬೇಕು. ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾದರ ವಿರುದ್ಧ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ, ಉಪಾಧ್ಯಕ್ಷ ಕೆ. ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ. ಆನಂದ, ಹಿರಿಯ ವಕೀಲರಾದ ಆರ್. ರಾಮನಗೌಡ್ರು, ಕೆ. ಚಂದ್ರಗೌಡ್ರು, ಕೆ.ಎಂ. ಚಂದ್ರಮೌಳಿ, ಬಿ. ರೇವನಗೌಡ್ರು, ಎಸ್.ಎಂ. ರುದ್ರಮನಿ ಸ್ವಾಮಿ, ಬಿ. ಗೋಣಿಬಸಪ್ಪ, ಎಚ್.ವಿ. ಹಾಲಗೌಡ, ವಕೀಲರಾದ ಎಸ್.ಜಿ. ತಿಪ್ಪೇಸ್ವಾಮಿ, ಕೆ. ನಾಗರಾಜ್, ವಾಮದೇವಪ್ಪ, ಸಿ. ರಾಜಪ್ಪ, ಮುತ್ತಿಗಿ ಮಂಜುನಾಥ್, ಬಾಗಳಿ ಮಂಜುನಾಥ್, ಕೆ. ಪ್ರಕಾಶ್, ಮಾಬುಬಾಷಾ, ಅಲ್ತಾಪ್, ಕೆ. ಹುಚ್ಚೆಂಗಪ್ಪ, ವಿ.ಎಸ್, ಬಸವನಗೌಡ, ಕೆ.ಎಸ್. ಮಂಜಾನಾಯ್ಕ, ಕೆ. ಬಸವರಾಜ್, ಕೆ. ರಾಜಪ್ಪ, ಡಿ. ಹನುಮಂತಪ್ಪ, ಜಾಕೀರ್, ಸಣ್ಣ ನಿಂಗನಗೌಡ, ಕೆ. ರವಿಶಂಕರ್, ಓ. ತಿರುಪತಿ, ಎ.ಎಂ. ಮಂಜುನಾಥ್, ಕೆ. ಕೋಟ್ರೇಶ್, ರೇಣುಖಾ ಮೇಟಿ, ಡಿ. ದ್ರಾಕ್ಷಾಯಣಮ್ಮ, ಕೆರೆಗುಡಿಹಳ್ಳಿ ಹಾಲೇಶ್, ಬಿ. ತಿಪ್ಪೇಶ್, ಸೇರಿದಂತೆ ಇತರರು ಪಾಲ್ಗೊಂಡಿದ್ದರು.