ಲೋಕಾ ದಾಳಿಗೊಳಗಾದ 12 ಅಧಿಕಾರಿಗಳೆಲ್ಲರೂ ‘ಕುಬೇರರೇ’! ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಎಕರೆಗಟ್ಟಲೇ ಭೂಮಿ

KannadaprabhaNewsNetwork |  
Published : Jul 20, 2024, 01:48 AM ISTUpdated : Jul 20, 2024, 06:02 AM IST
ಲೋಕಾ ದಾಳಿ | Kannada Prabha

ಸಾರಾಂಶ

ಪ್ರತಿಯೊಬ್ಬರ ಬಳಿಯೂ ಕೋಟಿ ಕೋಟಿ ಅಕ್ರಮ ಆಸ್ತಿ । ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಎಕರೆಗಟ್ಟಲೇ ಭೂಮಿ, ದುಬಾರಿ ಮೊತ್ತದ ವಾಹನ, ವಸ್ತುಗಳು ಪತ್ತೆ

1.ಚೇತನ್‌ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು ವಿಭಾಗ:

ಅಕ್ರಮ ಆಸ್ತಿ ಮೌಲ್ಯ: 5.38 ಕೋಟಿ ರು7 ಸ್ಥಳಗಳಲ್ಲಿ ದಾಳಿ. 7.69 ಎಕರೆ ಕೃಷಿ ಜಮೀನು, 1 ವಾಣಿಜ್ಯ ಸಂಕೀರ್ಣ, 2 ನಿವೇಶನಗಳು ಹಾಗೂ ಮನೆ ಸೇರಿ ಒಟ್ಟು 4.36 ಕೋಟಿ ರು ಮೌಲ್ಯದ ಸ್ಥಿರಾಸ್ತಿ. 58 ಲಕ್ಷ ರು ನಗದು, 14.71 ಲಕ್ಷ ರು ಬೆಲೆಯ ಚಿನ್ನ, 30 ಲಕ್ಷ ರು ಮೌಲ್ಯದ ವಾಹನ ಸೇರಿ 1.02 ಕೋಟಿ ರು ಚರಾಸ್ತಿ. ಒಟ್ಟು 5.38 ಕೋಟಿ ರು ಮೌಲ್ಯದ ಅಕ್ರಮ ಆಸ್ತಿ ಪತ್ತೆ.2.ಸಿ.ಎಲ್‌.ಆನಂದ್‌, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

ಅಕ್ರಮ ಆಸ್ತಿ ಮೌಲ್ಯ: 2.77 ಕೋಟಿ ರು6 ಸ್ಥಳಗಳಲ್ಲಿ ದಾಳಿ. 3 ಮನೆಗಳು, 4.27 ಎಕರೆ ಕೃಷಿ ಭೂಮಿ ಸೇರಿ 2.12 ಕೋಟಿ ಮೌಲ್ಯದ ಸ್ಥಿರಾಸ್ತಿ. 19.40 ಲಕ್ಷ ರು ಮೌಲ್ಯದ ಚಿನ್ನ, 20.50 ಲಕ್ಷ ರು ಬೆಳ್ಳಿ, 10 ಲಕ್ಷ ರು ನಗದು, ಅವರ ಪತ್ನಿ ಹಾಗೂ ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ 16 ಲಕ್ಷ ರು ಸೇರಿ 65.90 ಲಕ್ಷ ರು ಸಿಕ್ಕಿದೆ. ಒಟ್ಟು 2.77 ಕೋಟಿ ರು ಅಕ್ರಮ ಆಸ್ತಿ ಪತ್ತೆಯಾಗಿದೆ.

3.ಬಿ.ವಿ.ರಾಜು, ಎಫ್‌ಡಿಎ, ಭೂಸ್ವಾಧೀನಾಧಿಕಾರಿ ಕಚೇರಿ ಕೆಐಎಡಿಬಿ

ಅಕ್ರಮ ಆಸ್ತಿ ಮೌಲ್ಯ: 5.51 ಕೋಟಿ ರು

3 ಸ್ಥಳಗಳಲ್ಲಿ ಶೋಧ. 1 ನಿವೇಶನ, 6 ಮನೆಗಳು ಸೇರಿ 4.04 ಕೋಟಿ ರು ಮೌಲ್ಯದ ಸ್ಥಿರಾಸ್ತಿ. 7 ಸಾವಿರ ರು ನಗದು, 40 ಲಕ್ಷ ರು ಮೌಲ್ಯದ ಚಿನ್ನ, 32 ಲಕ್ಷ ರು ಮೌಲ್ಯದ ವಾಹನಗಳು, 25 ಲಕ್ಷ ರು ಬೆಲೆಯ ಗೃಹೋಪಯೋಗಿ ಹಾಗೂ 50 ಸಾವಿರ ಮೌಲ್ಯದ ಇತರೆ ವಸ್ತು ಸೇರಿ 1.47 ಕೋಟಿ ರು ಚಿರಾಸ್ತಿ ಕಂಡು ಬಂದಿದೆ. ಒಟ್ಟು ಅಕ್ರಮ ಆಸ್ತಿ ಮೌಲ್ಯ 5.51 ಕೋಟಿ ರು.4.ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ

ಅಕ್ರಮ ಆಸ್ತಿ ಮೌಲ್ಯ: 4.08 ಕೋಟಿ ರು

4 ಸ್ಥಳಗಳಲ್ಲಿ ಶೋಧ. 2 ಮನೆಗಳು, 31.5 ಲಕ್ಷ ರು ಚಿನ್ನ, 20 ಲಕ್ಷ ರು ಗೃಹೋಪಯೋಗಿ ವಸ್ತುಗಳು ಹಾಗೂ 1.12 ಲಕ್ಷ ರು ಇತರೆ ವಸ್ತುಗಳು ಸೇರಿ ಒಟ್ಟು 4.08 ಕೋಟಿ ರು ಮೌಲ್ಯದ ಅಕ್ರಮ ಆಸ್ತಿ ಪತ್ತೆ. 

5.ಅತ್ಹರ್‌ ಅಲಿ, ಉಪ ನಿಯಂತ್ರಕ, ಕಾನೂನು ಮಪಾನ ಶಾಸ್ತ್ರ

ಅಕ್ರಮ ಆಸ್ತಿ ಮೌಲ್ಯ: 8.63 ಕೋಟಿ ರು4 ಕಡೆ ದಾಳಿ. 4 ನಿವೇಶನಗಳು, 3 ವಾಸದ ಮನೆಗಳು, 25.18 ಲಕ್ಷ ರು ನಗದು, 2.08 ಕೋಟಿ ಬೆಲೆಯ ಚಿನ್ನ, 11 ಲಕ್ಷ ರು ಬೆಲೆಯ ವಾಹನಗಳು, 37.45 ಲಕ್ಷ ರು ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 8.63 ಕೋಟಿ ರು ಅಕ್ರಮ ಆಸ್ತಿ ಪತ್ತೆ.

6.ಟಿ.ಆರ್‌.ಮಂಜುನಾಥ್‌, ಎಫ್‌ಡಿಎ, ಕಂದಾಯ ಸಹಾಯಕ ಆಯುಕ್ತರ ಕಚೇರಿ ಬೆಂಗಳೂರು ಉತ್ತರ

ಅಕ್ರಮ ಆಸ್ತಿ ಮೌಲ್ಯ: 2.68 ಕೋಟಿ ರು4 ಸ್ಥಳಗಳಲ್ಲಿ ಶೋಧ. 1 ನಿವೇಶನ, 1 ಮನೆ, 3.12 ಎಕರೆ ಕೃಷಿ ಜಮೀನು, 4 ಲಕ್ಷ ರು ನಗದು, 67.63 ಲಕ್ಷ ಚಿನ್ನ, 8 ಲಕ್ಷ ವಾಹನಗಳು, 20.12 ಬೆಲೆ ಬಾಳುವ ಗೃಹೋಪಯೋಗಿ ಹಾಗೂ ಇತರೆ ವಸ್ತು ಸೇರಿ ಒಟ್ಟು 2.68 ಕೋಟಿ ರು ಮೌಲ್ಯದ ಅಕ್ರಮ ಆಸ್ತಿ ಪತ್ತೆ. 

7.ಕೆ.ನರಸಿಂಹ ಮೂರ್ತಿ, ಪೌರಾಯುಕ್ತ, ಹೆಬ್ಬಗೋಡಿ ನಗರ ಸಭೆ

ಅಕ್ರಮ ಆಸ್ತಿ ಮೌಲ್ಯ: 4.45 ಕೋಟಿ ರು6 ಸ್ಥಳಗಳಲ್ಲಿ ಶೋಧ. 2 ನಿವೇಶನ, 2 ಮನೆಗಳು, 6 ಲಕ್ಷ ರು ನಗದು, 22.58 ಬೆಲೆಯ ಚಿನ್ನ, 16 ಲಕ್ಷ ರು ಮೌಲ್ಯದ ಬೆಲೆ ಬಾಳುವ ವಾಹನಗಳು, 11.23 ಲಕ್ಷ ರು ಗೃಹ ಬಳಕೆ ವಸ್ತುಗಳು ಸೇರಿ 4.45 ಕೋಟಿ ರು ಮೌಲ್ಯದ ಅಕ್ರಮ ಸಂಪತ್ತು ಪತ್ತೆ.

8.ಆರ್‌.ಸಿದ್ದಪ್ಪ, ನಿರೀಕ್ಷಕರು, ಪಶುಸಂಗೋಪನೆ ಇಲಾಖೆ ರಾಮೇಶ್ವರ ದೊಡ್ಡಬಳ್ಳಾಪುರ ತಾಲೂಕು

ಅಕ್ರಮ ಆಸ್ತಿ ಮೌಲ್ಯ: 2.93 ಕೋಟಿ ರು5 ಕಡೆ ದಾಳಿ. 9 ನಿವೇಶನಗಳು, 3 ಮನೆಗಳು, 5 ಎಕರೆ ಕೃಷಿ ಜಮೀನು, 3.65 ಲಕ್ಷ ರು ನಗದು, 11.68 ಲಕ್ಷ ರು ಬೆಲೆಯ ಚಿನ್ನ, 12.35 ಲಕ್ಷ ರು ಮೌಲ್ಯದ ವಾಹನಗಳು ಹಾಗೂ 4.50 ಬೆಲೆ ಬಾಳುವ ವಸ್ತು ಸೇರಿ 2.93 ಕೋಟಿ ರು ಅಕ್ರಮ ಆಸ್ತಿ.

9.ಜಿ.ಎನ್‌.ಪ್ರಕಾಶ್‌, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಅಕ್ರಮ ಆಸ್ತಿ ಮೌಲ್ಯ: 2.07 ಕೋಟಿ ರು3 ಕಡೆ ಶೋಧ. 2 ಮನೆಗಳು, 2.08 ಎಕರೆ ಕೃಷಿ ಭೂಮಿ, 12.85 ಲಕ್ಷ ರು ನಗದು, 38.32 ಲಕ್ಷ ರು ಬೆಲೆಯ ಚಿನ್ನ ಹಾಗೂ 5.2 ಲಕ್ಷ ರು ಮೌಲ್ಯದ ವಾಹನಗಳು ಸೇರಿ 2.07 ಕೋಟಿ ಅಕ್ರಮ ಸಂಪತ್ತು ಪತ್ತೆ. 

10.ನಾಗೇಶ್, ಅಧ್ಯಕ್ಷರು ಅಂತರಗಂಗೆ ಗ್ರಾಪಂ, ಭದ್ರಾವತಿ ತಾಲೂಕು, ಶಿವಮೊಗ್ಗ

ಅಕ್ರಮ ಆಸ್ತಿ ಮೌಲ್ಯ: 2.19 ಕೋಟಿ ರು5 ಕಡೆ ದಾಳಿ. 2 ನಿವೇಶನ, 2 ಮನೆ, 5.14 ಎಕರೆ ಜಮೀನು, 5.71 ಲಕ್ಷ ರು ನಗದು, 12.80 ಲಕ್ಷ ರು ಬೆಲೆಯ ಚಿನ್ನ, 1.76 ಲಕ್ಷ ರು ಬೆಲೆಯ ವಾಹನ ಹಾಗೂ 7 ಲಕ್ಷ ಬೆಲೆಯ ಇತರೆ ವಸ್ತುಗಳು ಸೇರಿ ಒಟ್ಟು 2.19 ಕೋಟಿ ರು ಅಕ್ರಮ ಆಸ್ತಿ ಪತ್ತೆ.

11.ಸಿ.ಟಿ.ಮುದ್ದುಕುಮಾರ್‌, ಅಪರ ನಿರ್ದೇಶಕರು, ಇನ್ವೆಸ್ಟ್ ಕರ್ನಾಟಕ ಫೋರಂ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ.

ಅಕ್ರಮ ಆಸ್ತಿ ಮೌಲ್ಯ: 7.41 ಕೋಟಿ ರು10 ಸ್ಥಳಗಳಲ್ಲಿ ಶೋಧ. 3 ಮನೆಗಳು, 6.20 ಎಕರೆ ಜಮೀನು, 1 ತೋಟದ ಮನೆ, 1.13 ಲಕ್ಷ ರು ನಗದು, 88.75 ಲಕ್ಷ ರು ಮೌಲ್ಯದ ಚಿನ್ನ, 35.40 ಲಕ್ಷ ರು ಮೌಲ್ಯದ ಬೆಲೆಯ ವಾಹನಗಳು, 3 ಲಕ್ಷ ಮೌಲ್ಯದ ಶೆಡ್‌, 68.86 ಲಕ್ಷ ರು ಉಳಿತಾಯ ಹಾಗೂ ಬಂದೂಕು ಸೇರಿ ಒಟ್ಟು 7.41 ಕೋಟಿ ರು ಮೌಲ್ಯದ ಅಕ್ರಮ ಸಂಪತ್ತು ಪತ್ತೆ. 

12.ಬಲವಂತ್ ರಾಥೋಡ್‌, ಯೋಜನಾ ನಿರ್ದೇಶಕರು, ಜಿಪಂ, ಯಾದಗಿರಿ

ಅಕ್ರಮ ಆಸ್ತಿ ಮೌಲ್ಯ: 1.69 ಕೋಟಿ ರು3 ಸ್ಥಳಗಳಲ್ಲಿ ದಾಳಿ. 5 ನಿವೇಶನಗಳು, 1 ಮನೆ, 3.68 ಲಕ್ಷ ರು ನಗದು, 17.59 ಲಕ್ಷ ರು ಚಿನ್ನಾಭರಣ, 18.64 ಲಕ್ಷ ರು ಬೆಲೆ ಬಾಳುವ ವಾಹನಗಳು ಸೇರಿ 1.69 ಕೋಟಿ ರು ಮೌಲ್ಯದ ಅಕ್ರಮ ಆಸ್ತಿ ಪತ್ತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ