ಮಕ್ಕಳಿಗೆ ತಲಸ್ಸೇಮಿಯಾ ಚಿಕಿತ್ಸೆಗೆ ನೆರವು ನೀಡಿ: ಗಿರೀಶ್‌

KannadaprabhaNewsNetwork |  
Published : Sep 27, 2024, 01:27 AM IST
ಕ್ಯಾಪ್ಷನಃ26ಕೆಡಿವಿಜಿ41ಃ ತಲಸ್ಸೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ತಮ್ಮ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಂತೆ ಮಕ್ಕಳ ತಂದೆ ಗಿರೀಶ ದಾವಣಗೆರೆ ಸುದ್ದಿಗೋಷ್ಠಿ ಮೂಲಕ  ಮನವಿ ಮಾಡಿದರು.  | Kannada Prabha

ಸಾರಾಂಶ

ಇಬ್ಬರು ಮಕ್ಕಳು ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಸುಮಾರು ₹30 ಲಕ್ಷ ವೆಚ್ಚವಾಗುತ್ತದೆ. ಆದ್ದರಿಂದ ದಾನಿಗಳು ಆರ್ಥಿಕ‌ ನೆರವು‌ ನೀಡುವಂತೆ ಮಕ್ಕಳ ತಂದೆ, ಲಾರಿ ಚಾಲಕ ಗಿರೀಶ್ ದಾವಣಗೆರೆಯಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಇಬ್ಬರು ಮಕ್ಕಳು ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಸುಮಾರು ₹30 ಲಕ್ಷ ವೆಚ್ಚವಾಗುತ್ತದೆ. ಆದ್ದರಿಂದ ದಾನಿಗಳು ಆರ್ಥಿಕ‌ ನೆರವು‌ ನೀಡುವಂತೆ ಮಕ್ಕಳ ತಂದೆ, ಲಾರಿ ಚಾಲಕ ಗಿರೀಶ್ ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಬಾತಿ ಗುಡ್ಡದ ಕ್ಯಾಂಪ್ ನಿವಾಸಿಯಾಗಿದ್ದೇನೆ. ಲಾರಿ ಚಾಲಕನಾಗಿದ್ದು, ಇಬ್ಬರು ಮಕ್ಕಳಿಗೂ ತಲಸ್ಸೇಮಿಯಾ ಕಾಯಿಲೆ ಇದೆ. ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರತಿ‌ ತಿಂಗಳು ಚಿಕಿತ್ಸೆಗೆ ₹20 ಸಾವಿರ ವೆಚ್ಚವಾಗಲಿದೆ. ಸೂಕ್ತ ಚಿಕಿತ್ಸೆಗಾಗಿ ಹಲವಾರು ಆಸ್ಪತ್ರೆಗೆ ತೋರಿಸಲಾಗಿದೆ. ಇದೀಗ ವೈದ್ಯರು ಒಂದು ಮಗುವಿನ ಚಿಕಿತ್ಸೆಗೆ ₹30 ಲಕ್ಷ ವೆಚ್ಚವಾಗಲಿದೆ ಎಂದಿದ್ದಾರೆ ಎಂದು ಅಳಲು ತೋಡಿಕೊಂಡರು.

ಕಡುಬಡವನಾಗಿದ್ದು, ಅಷ್ಟು ಹಣ ಹೊಂದಿಸಲು ನನಗೆ ಸಾಧ್ಯವಿಲ್ಲ. ದಾನಿಗಳು ನನ್ನ ಮಕ್ಕಳ ಚಿಕಿತ್ಸೆಗೆ ನೆರವು ನೀಡಬೇಕು‌. ಅಕೌಂಟ್. ನಂ 34542877404, ಐಎಫ್ ಎಸ್ ಸಿ ಕೋಡ್ SBIN0015450, ಪೋನ್ ಪೇ ನಂಬರ್ 9731722896 ಇಲ್ಲಿಗೆ ನೆರವು ನೀಡಿದರೆ ಸಹಾಯವಾಗಲಿದೆ ಎಂದರು.

- - -

-26ಕೆಡಿವಿಜಿ41ಃ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ