ನೆಲಮಂಗಲದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ನೆರವು

KannadaprabhaNewsNetwork |  
Published : Jul 01, 2026, 01:45 AM IST
ಪೋಟೋ 4 : ನೆಲಮಂಗಲ ನಗರದ ತಾಲೂಕು ಕಚೇರಿ ಆವರಣ ದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎನ್.ಶ್ರೀನಿವಾಸ್ ಅವರನ್ನು ಗಣ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

ನೆಲಮಂಗಲ/ದಾಬಸ್‍ಪೇಟೆ: ರಾಜ್ಯಕ್ಕೆ ಮಾದರಿಯಾಗುವಂತಹ ಕೆಂಪೇಗೌಡ ಭವನ ನಿರ್ಮಾಣ ಮಾಡಬೇಕಿದ್ದು, ವೈಯಕ್ತಿಕವಾಗಿ 1 ಕೋಟಿ ಹಾಗೂ ಸರ್ಕಾರದಿಂದ 7 ಕೋಟಿ ಅನುದಾನ ಕೊಡಿಸುವೆ, 20 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು

ನೆಲಮಂಗಲ/ದಾಬಸ್‍ಪೇಟೆ: ರಾಜ್ಯಕ್ಕೆ ಮಾದರಿಯಾಗುವಂತಹ ಕೆಂಪೇಗೌಡ ಭವನ ನಿರ್ಮಾಣ ಮಾಡಬೇಕಿದ್ದು, ವೈಯಕ್ತಿಕವಾಗಿ 1 ಕೋಟಿ ಹಾಗೂ ಸರ್ಕಾರದಿಂದ 7 ಕೋಟಿ ಅನುದಾನ ಕೊಡಿಸುವೆ, 20 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಒಂದಿಂಚೂ ಜಾಗವಿಲ್ಲ ಎಂಬುದನ್ನು ಮನಗಂಡು ನಗರದಲ್ಲಿ 35,500 ಅಡಿ, ಯಲಚಗೆರೆ ಬಳಿ 1.5 ಎಕರೆ ಜಾಗ ನೀಡಲು ಮುಂದಾದರೆ, ಕೆಲವರು ಅರ್ಜಿ ಹಾಕಿ ಸಮಸ್ಯೆ ಮಾಡುತ್ತಿದ್ದಾರೆ. ನನ್ನ ಮೇಲೆ ರಾಜಕೀಯ ಮಾಡುವವರು ಚುನಾವಣೆ ಸಮಯದಲ್ಲಿ ಮಾಡಲಿ. ಆದರೆ ಸಮುದಾಯಕ್ಕೆ ಒಳ್ಳೆಯದು ಮಾಡುವಾಗ ವಿರೋಧವೇಕೆ? ನಾನು ಹೇಳಿದ್ದನ್ನು ಮಾಡುವುದು ತಪ್ಪೇ. ಸ್ವಲ್ಪ ವ್ಯತ್ಯಾಸವಿದ್ದರೆ ಸರ್ಕಾರವಿದೆ. ಸರಿಪಡಿಸುವ ಕೆಲಸ ಮಾಡುತ್ತೇನೆ. ನಾನು ಸಮುದಾಯಕ್ಕೆ ಕೊಟ್ಟ ಮಾತು ಎಂದಿಗೂ ತಪ್ಪುವುದಿಲ್ಲ. ನನ್ನ ಗೆಲುವಿಗೆ ಒಕ್ಕಲಿಗ ಸಮುದಾಯದ ಸಹಕಾರವೂ ಪ್ರಮುಖವಾಗಿದೆ ಎಂದರು.

ತಾಲೂಕು ಒಕ್ಕಲಿಗರ ಸಂಘಕ್ಕೆ ಜಾಗ ನೀಡಲು ತಹಸೀಲ್ದಾರರಿಗೆ ತಿಳಿಸಿದ್ದೇನೆ. ಒಕ್ಕಲಿಗರ ಮಹಿಳಾ ಸಮಾಜಕ್ಕೆ 1 ಕೋಟಿ ಅನುದಾನ ಮುಂಜೂರಾಗಿದೆ. ಮುಖಂಡರ ಬೇಡಿಕೆಯಂತೆ ತ್ಯಾಮಗೊಂಡ್ಲು ಅಥವಾ ಸೊಂಡೆಕೊಪ್ಪ ರಸ್ತೆಗೆ ಚರ್ಚೆ ಮಾಡಿ ನಾಡಪ್ರಭು ಕೆಂಪೇಗೌಡ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದರು.

ತಾಲೂಕಿನಲ್ಲಿ ಸಾಧನೆ ಮಾಡಿ ಉದ್ಯಮಿಗಳಾದ ಹರ್ಷ ಸಂಸ್ಥೆಯ ಡಾ.ಎಸ್.ಶಿವಕುಮಾರ್, ಕುಮುದ್ವತಿ ಸಂಸ್ಥೆಯ ಚಿಕ್ಕಹನುಮೇಗೌಡ, ಹೊಯ್ಸಳ ಕಾಲೇಜಿನ ಪ್ರಾಂಶುಪಾಲ ಗೌರಿಶಂಕರ್, ಕುಮಾರ್, ರಾಮಕೃಷ್ಣ, ಪೃಥ್ವಿರಾಜ್ ವಿ., ಡಾ.ಮಂಜುನಾಥ್, ಡಾ.ಶುಭಕರ್, ಶಂಕರ್, ಡಾ. ಲಕ್ಷ್ಮಿ, ಪ್ರಗತಿಪರ ರೈತರಾದ ರಂಗರಾಜು, ಎನ್.ಕೇಶವಮೂರ್ತಿ, ಹನುಮಂತಯ್ಯ, ರವಿಕುಮಾರ್, ಜನಾರ್ಧನ್, ಜಯರಾಮ್, ಪ್ರಕಾಶ್, ನಿತಿನ್, ಮುನಿರಾಜು, ವರುಣ್, ಮಾರೇಗೌಡ, ಸತೀಶ್ ಸೇರಿದಂತೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಂಪೇಗೌಡ ರತ್ನ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಂದಾಶ್ರಮದಶ್ರೀ ರಮಣಾನಂದನಾಥ ಸ್ವಾಮೀಜಿ, ಕೆನಾಲಿ ಲಿಂಗೇಗೌಡ, ಎನ್‍ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ತಹಸೀಲ್ವಾರ್ ಮಲ್ಲೇಶ್ ಬೀರಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷ ರಾಮಕೃಷ್ಣಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

ಪೋಟೋ 4 :

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್ ಅವರನ್ನು ಗಣ್ಯರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕ ಪರೀಕ್ಷೆಗೆ ಪಿಯುಸಿಯಿಂದಲೇ ಅಣಿಯಾಗಿ
ಪಾವಗಡದಲ್ಲಿ ಕಾಯಂ ಶಿಕ್ಷಕರ ಕೊರತೆ