ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್‌ನ ಹುಣಸೀಕೋಟೆ, ಕರಡುಗುರ್ಕಿ ಸ.ಹಿ.ಪ್ರಾಥಮಿಕ ಶಾಲೆಗಳಿಗೆ ಶುದ್ದನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಟೇಕಲ್ ಭಾಗದಲ್ಲಿ ನಮ್ಮ ಎರಡು ಸಂಸ್ಥೆಯಿಂದ ನೋಟ್ ಪುಸ್ತಕ, ಡೆಸ್ಕ್, ಕಂಪ್ಯೂಟರ್ ಇನ್ನಿತರೆ ಸಾಮಾಗ್ರಿಗಳನ್ನು ನೀಡುತ್ತ ಬಂದಿದ್ದೇವೆ ಎಂದರು.
ಶಿಕ್ಷಕರ ಮಾರ್ಗದರ್ಶನ ಪಡೆಯಿರಿಸದ್ಗಮಯ ರೋಟರಿ ಸಂಸ್ಥೆಯ ಜ್ಯೋತಿರಾವ್ ಮಾತನಾಡಿ, ಮಕ್ಕಳು ಪ್ರಾಥಮಿಕ ಹಂತದಿಂದ ತಮ್ಮ ವಿದ್ಯಾಭ್ಯಾಸ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಯಬೇಕು, ದಿನವಹಿ ಶಾಲೆಯಲ್ಲಿ ತಿಳಿಸಿಕೊಡುವ ಪಾಠಪ್ರವಚನ ಮನನ ಮಾಡಿಕೊಳ್ಳಬೇಕು ತಮ್ಮ ಜೀವನದಲ್ಲಿ ಶಿಕ್ಷಣವು ಅತೀಮುಖ್ಯವಾದದು ಎಂದರು.
ಅವಿನಾಶ್ ಮಾತನಾಡಿ, ಮಕ್ಕಳಿಗೆ ತಮ್ಮ ದಿನನಿತ್ಯ ಜೀವನದಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ವಿವರಿಸಿ ಅದನ್ನು ತಮ್ಮ ಶಾಲೆ ಮನೆ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಿ ಅದರಿಂದ ಉತ್ತಮ ಆರೋಗ್ಯ ಸಿಗುವಂತಾದಾಗುತ್ತದೆ ಎಂದರು.ಹುಣಸಿಕೋಟೆ ಶಾಲೆಯ ಮುಖ್ಯಶಿಕ್ಷಕಿ ಪ್ರಭಾವತಿ ಮಾತನಾಡಿ, ನಮ್ಮ ಶಾಲೆ ಸದ್ಗಮಯ ರೋಟರಿ ಸಂಸ್ಥೆ ಹಾಗೂ ಸುನಂದ ರಾಮ್‌ರಾವ್ ಪೌಂಡೆಶನ್ ಎರಡು ಸಂಸ್ಥೆಯವರು ಮಕ್ಕಳಿಗೆ ಸಹಾಯವಾಗುವ ಮತ್ತು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಸುಭಾಷ್‌ರಾವ್, ನಾಗರಾಜ್, ಅವಿನಾಶ್, ಶಿಕ್ಷಕರಾದ ಪುಷ್ಪ, ಸುಬ್ರಮಣಿ, ನಿವೃತ್ತ ಮುಖ್ಯ ಶಿಕ್ಷಕರಾದ ಎ.ಕೆ.ವೆಂಕಟೇಶ್ ಇದ್ದರು.