)
ಕನ್ನಡಪ್ರಭ ವಾರ್ತೆ ಬೆಂಗಳೂರು
ವೆಂಕಟೇಶ್ ಬಂಧಿತ. ಆರೋಪಿಯಿಂದ 329 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಗಿರಿನಗರ ನಿವಾಸಿಯಾದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
62 ವರ್ಷದ ವೃದ್ಧೆಯೊಬ್ಬರು ಅನಾರೋಗ್ಯದಿಂದಾಗಿ ಆಗಾಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯ ಸಮೀಪದಲ್ಲಿರುವ ಪಾದಚಾರಿ ಮಾರ್ಗದಲ್ಲಿ ಜ್ಯೋತಿಷಿ ವೆಂಕಟೇಶ್ ಎಂಬಾತನ ಪರಿಚಯವಾಗಿದೆ. ಆ ಸಂದರ್ಭದಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ವೃದ್ಧೆ ಆತನ ಬಳಿ ಹೇಳಿಕೊಂಡಾಗ ಆತ ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯ ಸುಧಾರಿಸಲಿದೆ ಎಂದು ಹೇಳಿದ್ದ. ಅದರಂತೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಇದರಿಂದ ಆ ಜ್ಯೋತಿಷಿಯನ್ನು ವೃದ್ಧೆ ನಂಬಲು ಆರಂಭಿಸಿದ್ದಾರೆ.ನಂತರ ತಮ್ಮ ಮಗನ ಕುಡಿತದ ಚಟ ಬಿಡಿಸುವಂತೆ ಹಾಗೂ ಮಗಳ ಮದುವೆ ವಿಚಾರವಾಗಿ ಮಾತನಾಡಲು ಮತ್ತೊಂದು ದಿನ ಅವರನ್ನು ಹುಡುಕಿಕೊಂಡು ಹೋದಾಗ ಆತ ಸಿಕ್ಕಿಲ್ಲ. ಹಾಗಾಗಿ ಆಟೋ ಚಾಲಕರೊಬ್ಬರಿಗೆ ತಮ್ಮ ಮೊಬೈಲ್ ನಂಬರ್ ಕೊಟ್ಟು ಜ್ಯೋತಿಷಿ ಬಂದಾಗ ನನ್ನ ನಂಬರ್ ಕೊಡುವಂತೆ ಹೇಳಿ ಮನೆಗೆ ಹೋಗಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಶಾಂತಮ್ಮ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಜ್ಯೋತಿಷಿ ವೆಂಕಟೇಶ್ ಕರೆ ಮಾಡಿ ಮಾತನಾಡಿದ್ದು, ನಿಮ್ಮ ಮನೆಯಲ್ಲಿರುವ ಚಿನ್ನಾಭರಣಗಳನ್ನಿಟ್ಟು ಪೂಜೆ ಮಾಡಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದಾನೆ. ವೃದ್ಧೆಯ ಅಸಹಾಯಕತೆಯನ್ನು ಅರಿತ ಜ್ಯೋತಿಷಿ ಇದೇ ಸರಿಯಾದ ಸಮಯವೆಂದು ಭಾವಿಸಿ ಪೂಜೆ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಅವರ ಮನೆಗೆ ಹೋಗಿ ಹಂತ ಹಂತವಾಗಿ 40 ಲಕ್ಷ ರು. ಮೌಲ್ಯದ ಆಭರಣಗಳನ್ನು ಪಡೆದುಕೊಂಡು ಆಂಧ್ರಕ್ಕೆ ಪರಾರಿಯಾಗಿದ್ದಾನೆ.
ಅದೇ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಹಬ್ಬ ಬಂದಿದ್ದು, ಹಾಗಾಗಿ ವೃದ್ಧೆ ಆಭರಣಗಳನ್ನು ವಾಪಸ್ ತಂದು ಕೊಡುವಂತೆ ಜ್ಯೋತಿಷಿಗೆ ಕರೆ ಮಾಡಿದ್ದಾಗ, ನನಗೆ ಅಪಘಾತವಾಗಿದೆ ನಾನು ಬದುಕುಳಿಯುವುದೇ ಕಷ್ಟ ಎಂದು ಬಿಂಬಿಸುವ ಕೃತಕ ಬುದ್ದಿಮತ್ತೆ (ಎ.ಐ) ವಿಡಿಯೋವೊಂದನ್ನು ಅವರಿಗೆ ಕಳುಹಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.