ವರದಕ್ಷಿಣಿ ಕೇಸ್‌: ಫ್ರಾನ್ಸ್‌ಗೆ ಪರಾರಿ ಹಿನ್ನೆಲೆ ಲುಕ್‌ಔಟ್‌ಗೆ ಹೈ ನಿರ್ದೇಶನ

KannadaprabhaNewsNetwork |  
Published : Oct 15, 2026, 04:00 AM IST
Metro 1 | Kannada Prabha

ಸಾರಾಂಶ

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ ಫ್ರಾನ್ಸ್‌ಗೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆತನ ವಿರುದ್ಧ ‘ಲುಕ್ ಔಟ್ ಸರ್ಕ್ಯುಲರ್’ (ಎಲ್‌ಒಸಿ) ಹೊರಡಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

-ಪತಿ ಪ್ರಾನ್ಸ್‌ಗೆ ಹೋಗದಂತೆ ಪತ್ನಿಯಿಂದ ಕೋರಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ ಫ್ರಾನ್ಸ್‌ಗೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆತನ ವಿರುದ್ಧ ‘ಲುಕ್ ಔಟ್ ಸರ್ಕ್ಯುಲರ್’ (ಎಲ್‌ಒಸಿ) ಹೊರಡಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪತಿಯ ವಿರುದ್ಧ ಎಲ್‌ಒಸಿ ಹೊರಡಿಸುವಂತೆ ಕೋರಿದ್ದ ಮನವಿ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಠ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಕೃತಿಕಾ ಗಜೇಂದ್ರ ಚೌಹಾಣ್‌ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ, ನಗರದ ಪೂರ್ವ ವಲಯದ ಮಹಿಳಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರಿಗೆ ಈ ಸೂಚನೆ ನೀಡಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿದೆ.

ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ, ಮಾನಸಿಕ ಮತ್ತು ಆರ್ಥಿಕ ಹಿಂಸೆ ನೀಡಿದ ಆರೋಪದ ಮೇಲೆ ತನ್ನ ಪತಿಯ ವಿರುದ್ಧ ಅರ್ಜಿದಾರ ಮಹಿಳೆ 2026ರ ಸೆ.30ರಂದು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪತಿ ಮತ್ತು ಅತ್ತೆ (ಗಂಡನ ತಾಯಿ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಈ ಮಧ್ಯೆ ಅರ್ಜಿದಾರೆಯು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತನ್ನ ಪತಿ ಕಳೆದ 3 ವರ್ಷದಿಂದ ಫ್ರಾನ್ಸ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಬಹು ವರ್ಷದ ಫ್ರೆಂಚ್ ನಿವಾಸದ ಪರವಾನಗಿಯನ್ನೂ ಹೊಂದಿದ್ದಾರೆ. ಸದ್ಯ ಭಾರತದಲ್ಲಿರುವ ಅವರು ನಾನು ಎಫ್‌ಐಆರ್ ದಾಖಲು ಮಾಡುತ್ತಿದ್ದಂತೆಯೇ ತನಿಖೆಗೆ ಸಹಕರಿಸದೇ ತಪ್ಪಿಸಿ ಫ್ರಾನ್ಸ್‌ಗೆ ಹೋಗಲು ಹೊಂಚು ಹಾಕಿದ್ದಾರೆ. ಆದ್ದರಿಂದ ಎಲ್‌ಒಸಿ ಜಾರಿಗೆ ಕೋರಿದ್ದರು.

ಆ ಮನವಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಅರ್ಜಿದಾರೆಯು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈಗ ಹೈಕೋರ್ಟ್‌, ಅರ್ಜಿದಾರೆಯ ಪತಿಯ ವಿರುದ್ಧ ಎಲ್‌ಒಸಿ ಜಾರಿಗೊಳಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಹಾಗೆಯೇ, ಈ ಆದೇಶದಿಂದ ಅಸಮಾಧಾನವಿದ್ದಲ್ಲಿ ಅರ್ಜಿದಾರರ ಪತಿಗೂ ಸಹ ಅರ್ಜಿಯ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃದ್ಧೆಗೆ ಚಿನ್ನಾಭರಣ ವಂಚಿಸಿದ್ದ ಜ್ಯೋತಿಷಿ ಸೆರೆ
ಮನೆ ಮುಂದೆ ವಾಹನ ನಿಲ್ಲಿಸಿದರೆ ಶುಲ್ಕ ಪಾವತಿ ಪ್ರಸ್ತಾವನೆ ಸದ್ಯಕ್ಕಿಲ್ಲ