ಅಟಲ್‌ ಫೌಂಡೇಶನ್‌ ಸಾಮಾಜಿಕ ಕಾರ್ಯಗಳಿಗೆ ಸದಾ ಸಹಕಾರ

KannadaprabhaNewsNetwork |  
Published : Jan 10, 2024, 01:46 AM IST
ಬೀದರ್‌ನ ಅಟಲ್‌ ಫೌಂಡೇಶನ್‌ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳುರ ನೇತೃತ್ವದಲ್ಲಿ ಹಾಗೂ ಬೀದರ ಕ್ರಿಕೆಟ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಆಯೋಜಿಸಿದ್ದ ಐತಿಹಾಸಿಕ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ ಫೈನಲ್‌ಗೆ ಮೈದಾನಕ್ಕೆ ತೆರಳಿ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಚಾಲನೆ ನೀಡಿದರು. | Kannada Prabha

ಸಾರಾಂಶ

ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯವಾದದ್ದು, ಮುಂದಿನ ಯುವ ಪೀಳಿಗೆಗೆ ಇಂತಹ ವೇದಿಕೆ ಮಾಡಿಕೊಡುವುದು ಅತ್ಯವಶ್ಯಕ ಹೀಗಾಗಿ ಇದು ಪ್ರತಿವರ್ಷ ನಡೆಯಬೇಕು.

ಬೀದರ್‌: ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯವಾದದ್ದು, ಮುಂದಿನ ಯುವ ಪೀಳಿಗೆಗೆ ಇಂತಹ ವೇದಿಕೆ ಮಾಡಿಕೊಡುವುದು ಅತ್ಯವಶ್ಯಕ ಹೀಗಾಗಿ ಇದು ಪ್ರತಿವರ್ಷ ನಡೆಯಬೇಕು ಎಂದು ಮಾಜಿ ಸಚಿವ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಹೇಳಿದರು.

ಅಟಲ್‌ ಫೌಂಡೇಶನ್‌ ಅಧ್ಯಕ್ಷ , ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳುರ ನೇತೃತ್ವದಲ್ಲಿ ಹಾಗೂ ಬೀದರ ಕ್ರಿಕೆಟ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಆಯೋಜಿಸಿದ್ದ ಐತಿಹಾಸಿಕ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಔರಾದ್‌ ತಾಲೂಕಿನವರಾದ ಗುರುನಾಥ ಕೊಳ್ಳುರ ಅವರ ಕಾರ್ಯ ಅಭಿನಂದನಾರ್ಹ ಇದು ಹೀಗೆ ಮುಂದುವರೆಯಲಿ ನಿಮ್ಮ ಜೊತೆಗಿರುತ್ತೇನೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುತ್ತದೆ ಇದರ ಸದುಪಯೋಗ ಪಡೆದುಕೊಂಡು ಅವರು ಬರುವ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡುವಂತಾಗಲಿ ಎಂಬುದು ಶುಭ ಹಾರೈಕೆಯಾಗಿದೆ ಅಟಲ್‌ ಫೌಂಡೇಶನ್‌ ಸಾಮಾಜಿಕ ಕಾರ್ಯಗಳಿಗೆ ನನ್ನ ಸಹಕಾರ ಸದಾಕಾಲ ಇರುತ್ತದೆ ಎಂದು ತಿಳಿಸಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿಯೇ ಇದೊಂದು ಮಾದರಿ ಕಾರ್ಯ ಇದು ಹೀಗೆ ಮುಂದುವರೆಯಲಿ. ಗುರುನಾಥ ಕೊಳ್ಳುರ ಅವರ ಸಾಮಾಜಿಕ ಕಾರ್ಯಗಳಿಗೆ ಸಹಕಾರ ಇರುತ್ತದೆ ಮತ್ತು ಮುಂದಿನ ವರ್ಷ ನಾನೂ ಕೂಡ ಬಸವಕಲ್ಯಾಣ ತಂಡದಲ್ಲಿ ಒಬ್ಬ ಆಟಗಾರನಾಗಿ ಭಾಗವಹಿಸುತ್ತೇನೆ ಎಂದರು.

ಹೊನಲು ಬೆಳಕಿನ ಫೈನಲ್‌ ಪಂದ್ಯದಲ್ಲಿ ಬಸವಕಲ್ಯಾಣ ಹಾಗೂ ಬೀದರ್‌ ತಂಡಗಳು ಎದುರಾಳಿಯಾಗಿದ್ದವು ಮುಂಚಿತವಾಗಿ ಬಸವಕಲ್ಯಾಣ ತಂಡಕ್ಕೆ ಶುಭಾಶಯ ತಿಳಿಸಿದ ಶಾಸಕ ಸಲಗರ ಬಳಿಕ ಬಸವಕಲ್ಯಾಣ ತಂಡವು ವಿಜೇತರಾದ ಮೇಲೆ ತಂಡದ ಸದಸ್ಯರ ಜೊತೆಗೆ ಕುಣಿದು ಕುಪ್ಪಳಿಸಿ ಆಟಗಾರರಿಗೆ ಪ್ರೋತ್ಸಾಹಿಸಿದರು.

ಅಟಲ್‌ ಫೌಂಡೇಶನ್‌ ಅಧ್ಯಕ್ಷ ಗುರುನಾಥ ಕೊಳ್ಳುರ ಮಾತನಾಡಿ, ಸದುದ್ದೇಶದಿಂದ ಅಟಲ್‌ ಫೌಂಡೇಶನ್‌ ಪ್ರಾರಂಭಿಸಿದ್ದು, ಸಾಮಾಜಿಕ ಕಾರ್ಯಗಳಿಗೆ ವಾಜಪೇಯಿ ಪ್ರೇರಣೆ ಮತ್ತು ಮೋದಿಯವರ ಸದೃಢ ನಾಯಕತ್ವ ಪ್ರೇರಣೆಯಾಗಿದ್ದು, ಬರುವ ದಿನಗಳಲ್ಲಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು ಜನರ ಸಹಕಾರವಿರಲಿ ಎಂದರು.

ಅಟಲ್‌ ಫೌಂಡೇಶನ್‌ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮಾತನಾಡಿ, ಅಟಲ್‌ ಫೌಂಡೇಶನ್‌ ಅಸ್ತಿತ್ವಕ್ಕೆ ಬಂದಿರುವುದು ಸಮಾಜದ ಹಿತಕ್ಕಾಗಿ ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸುವದರ ಜೊತೆಗೆ ಬೀದರ್‌ ಜಿಲ್ಲೆಯ ಅಭಿವೃದ್ಧಿಗಾಗಿ ತನ್ನದೆಯಾದ ದೃಷ್ಟಿಕೋನ ಹೊಂದಿದೆ ಎಂದು ತಿಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಆಳಂದ ಮಾಜಿ ಶಾಸಕ ಸುಭಾಷ ಗುತ್ತೆದಾರ, ಬಿಜೆಪಿ ಹಿರಿಯ ಮುಖಂಡ ಸುಭಾಷ ಕಲ್ಲೂರ ಮಾತನಾಡಿದರು. ಈ ಸಂದರ್ಭದಲ್ಲಿ ಔರಾದ್‌ ಮಾಜಿ ಶಾಸಕ ಗುಂಡಪ್ಪ ವಕೀಲ, ಮುಖಂಡರಾದ ಚನ್ನಬಸವ ಬಳತೆ, ಬಸವರಾಜ ಆರ್ಯ, ಬಾಬುರಾವ ಕಾರಬಾರಿ, ಸೋಮಶೇಖರ್ ಪಾಟೀಲ್‌ ಗಾದಗಿ, ಹಾವಶೆಟ್ಟಿ ಪಾಟೀಲ್‌, ಕಿರಣ ಪಾಟೀಲ್‌, ಪ್ರಭುರಾವ್‌ ವಸ್ಮತೆ, ಶರಣಪ್ಪ ಮಿಠಾರೆ, ಸುರೆಶ ಚನ್ನಶೆಟ್ಟಿ, ಸಚಿನ್‌ ಕೊಳ್ಳುರ, ಗುರುನಾಥ ರಾಜಗೀರಾ ಬೀದರ್‌ ಕ್ರಿಕೆಟ್‌ ಅಸೋಸಿಯೇಷನ್‌ ಕುಶಾಲ ಪಾಟೀಲ್‌ ಗಾದಗಿ, ಅನೀಲ ದೇಶಮುಖ, ಸಂಜಯ ಜಾಧವ, ಯುವರಾಜ, ವಿಕ್ಕಿ ಅತವಾಲ್‌, ವೀಕ್ಷಕ ವಿವರಣೆಗಾರ ಮುಕ್ರಂಖಾನ್‌ ಹಾಗೂ ಮಲ್ಲಿಕಾರ್ಜುನ್‌ ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ