- ಕವಿವಿ ಅಂತರ ಕಾಲೇಜು ಮಟ್ಟದ 70ನೇ ಅಥ್ಲೆಟಿಕ್ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ಧಾರವಾಡಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಕಾಲೇಜು ಆಯೋಜಿಸಿರುವ ಕವಿವಿ ವ್ಯಾಪ್ತಿಯ ಅಂತರ್ ಕಾಲೇಜು 70ನೇ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎರಡು ನೂತನ ದಾಖಲೆಗಳು ನಿರ್ಮಾಣವಾಗಿವೆ.
100 ಮೀಟರ್‌ನಲ್ಲಿ ಜೆಎಸ್ಎಸ್ ಕಾಲೇಜಿನ ನಯನಾ ಕೋಕರೆ ಹತ್ತು ವರ್ಷಗಳ ನಂತರ 200 ಮೀಟರ್ ಓಟದ ಸ್ಪರ್ಧೆಯಲ್ಲಿ 24.88 ಸೆಕೆಂಡುಗಳಲ್ಲಿ ಓಡಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇವರು 2013ರಲ್ಲಿ ಪ್ರಿಯಾಂಕಾ ಕಲಗಿ ಅವರ ದಾಖಲೆಯನ್ನು ಮುರಿದಿದ್ದಾರೆ. ಈಗಾಗಲೇ ರಾಷ್ಟ್ರಮಟ್ಟದ ಭಾರತವನ್ನು ಪ್ರತಿನಿಧಿಸುವ ಆಸೆಯನ್ನು ಹೊಂದಿದ್ದೇನೆ ಎಂದು ಬಿಕಾಂ ಪ್ರಥಮ ವರ್ಷದ ನಯನಾ ಕೊಕರೆ ತನ್ನ ಆಸೆಯನ್ನು ಹಂಚಿಕೊಂಡಳು. ಇವಳು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಳಗೇರಿ ಗ್ರಾಮದ ರೈತ ದಂಪತಿ ಮಗಳು.ಕರ್ನಾಟಕ ಕಲಾ ಕಾಲೇಜಿನ ನಾಗರಾಜ ದೀವಟೆ ಅವರು 25 ವರ್ಷಗಳ ನಂತರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 3.56 ಸೆಕೆಂಡುಗಳಲ್ಲಿ ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇವರು 1997ರಲ್ಲಿ ಅರ್.ಎಂ. ಕುರಬಗಟ್ಟಿ ಅವರ ದಾಖಲೆಯನ್ನು ಮುರಿದ್ದಾರೆ. ನಾಗರಾಜ ದಿವಟೆ ಕರ್ನಾಟಕ ಕಾಲೇಜಿನ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಆಗಿದ್ದು, ರಾಷ್ಟ್ರದ ಮಟ್ಟದಲ್ಲಿ ಸಾಧನೆ ಮಾಡುವ ಆಸೆ ವ್ಯಕ್ತಪಡಿಸಿದರು.
ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಸದ್ಯ ಜೆ.ಎಸ್.ಎಸ್. ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗ ಪ್ರಥಮ ಸ್ಥಾನದಲ್ಲಿದ್ದು, ಪದಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕರ್ನಾಟಕ ಕಲಾ ಕಾಲೇಜು ಹೊಂದಿದೆ. ಮೂರನೇ ಸ್ಥಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕಾಲೇಜು ಹಾಗೂ ಶಿರಸಿಯ ಎಂ.ಇ.ಎಸ್. ಕಾಲೇಜು ಪದಕಗಳನ್ನು ಹೊಂದಿದೆ.ಹಾಗೆಯೇ ಭಾನುವಾರ ಕರ್ನಾಟಕ ಕಲಾ ಕಾಲೇಜಿನ ಕ್ರೀಡಾಪಟುಗಳು ಏಳು ಕ್ರೀಡೆಗಳಲ್ಲಿ ಪದಕಗಳನ್ನು ಜಯಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಸೋಮವಾರ ಕ್ರೀಡಾಕೂಟ ಸಮಾರೋಪಗೊಳ್ಳಲಿದೆ.