ಅಹವಾಲು ಆಲಿಸಿದ ಮೇಯರ್, ಆಯುಕ್ತೆ

KannadaprabhaNewsNetwork |  
Published : Dec 18, 2023, 02:00 AM IST
ಪಾಲಿಕೆ ಮೇಯರ್, ಆಯುಕ್ತೆ ಭೇಟಿ | Kannada Prabha

ಸಾರಾಂಶ

ನಗರದ 35ನೇ ವಾರ್ಡ್ ವ್ಯಾಪ್ತಿಗೆ ಬರುವ ಸಿದ್ದರಾಮೇಶ್ವರ ಬಡಾವಣೆಯ ಪೂರ್ವ ಭಾಗದ ಪ್ರದೇಶ ಮೂಲಸೌಕರ್ಯ ವಂಚಿತವಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಆಯುಕ್ತೆ ಬಿ.ವಿ.ಅಶ್ವಿಜ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಗರ ಯೋಜನಾ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರು ಶಾಂತಿನಿಕೇತನ ವಿದ್ಯಾಪೀಠ ಶಾಲೆ ಸುತ್ತುಮುತ್ತಲ ಪ್ರದೇಶಗಳಿಗೆ ಭೇಟಿಕೊಟ್ಟು ನಾಗರಿಕರ ಅಹವಾಲು ಆಲಿಸಿದರು.

ಸಮಸ್ಯೆ ಪರಿಹರಿಸುವಂತೆ ಸಿದ್ದರಾಮೇಶ್ವರ ಬಡಾವಣೆ ನಾಗರಿಕರ ಮನವಿ

ಕನ್ನಡಪ್ರಭ ವಾರ್ತೆ ತುಮಕೂರು

ನಗರದ 35ನೇ ವಾರ್ಡ್ ವ್ಯಾಪ್ತಿಗೆ ಬರುವ ಸಿದ್ದರಾಮೇಶ್ವರ ಬಡಾವಣೆಯ ಪೂರ್ವ ಭಾಗದ ಪ್ರದೇಶ ಮೂಲಸೌಕರ್ಯ ವಂಚಿತವಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಆಯುಕ್ತೆ ಬಿ.ವಿ.ಅಶ್ವಿಜ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಗರ ಯೋಜನಾ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರು ಶಾಂತಿನಿಕೇತನ ವಿದ್ಯಾಪೀಠ ಶಾಲೆ ಸುತ್ತುಮುತ್ತಲ ಪ್ರದೇಶಗಳಿಗೆ ಭೇಟಿಕೊಟ್ಟು ನಾಗರಿಕರ ಅಹವಾಲು ಆಲಿಸಿದರು.

ಈ ವೇಳೆ ಸಿದ್ದರಾಮೇಶ್ವರ ಬಡಾವಣೆ ನಾಗರಿಕರು ಮೇಯರ್, ಪುರಪಿತೃಗಳು ಆಯುಕ್ತರಲ್ಲಿ ಮನವಿ ಮಾಡಿ ಸಿದ್ದರಾಮೇಶ್ವರ ಬಡಾವಣೆ ಪೂರ್ವಭಾಗದ ಪ್ರದೇಶದ ಮೂರ್ನಾಲ್ಕು ರಸ್ತೆಗಳು ಸಮರ್ಪಕ ರಸ್ತೆ, ಚರಂಡಿ, ಯುಜಿಡಿ, ವಿದ್ಯುತ್ ಕಂಬದ ಸಂಪರ್ಕವಿಲ್ಲದೆ ಇಲ್ಲಿನ ನಿವಾಸಿಗಳು, ನಿವೇಶನದಾರರು ಪರದಾಡುವಂತಾಗಿದೆ. ಶಾಂತಿನಿಕೇತನದ ಶಾಲೆ ಮುಂಭಾಗವೇ ಚರಂಡಿ ಬಾಯ್ತೆರೆದರಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಗಳು ಮಿನುಗದೆ ತೊಂದರೆಯಾಗಿದೆ. ನಗರದ ಮಧ್ಯಬಾಗದಲ್ಲಿ ಬರುವ ಈ ಪ್ರದೇಶವನ್ನು ಸೌಕರ್ಯ ಕಲ್ಪಿಸದೆ ಬಿಟ್ಟಿರುವುದು ಸಮಸ್ಯೆಯಾಗಿದೆ. ಪಾಲಿಕೆಗೆ ಸೇರಿದ ಉದ್ಯಾನವನದ ಜಾಗಕ್ಕೆ ತಂತಿಬೇಲಿ ಅಳವಡಿಸಿ ರಕ್ಷಿಸಬೇಕು ಎಂದು ಮನವಿ ಮಾಡಿದರು.

32 ನೇ ವಾರ್ಡಿನ ಪಾಲಿಕೆ ಸದಸ್ಯ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ ಅವರು ಸಮಸ್ಯಾತ್ಮಕ ಪ್ರದೇಶದ ವಾಸ್ತವ ಸ್ಥಿತಿಯನ್ನು ವಿವರಿಸಿ ಕಳೆದ ಎರಡು ದಶಕಗಳಿಂದ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದು, ಆಯುಕ್ತರು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸುವಂತೆ ನಾಗರಿಕರ ಪರವಾಗಿ ಮನವಿ ಮಾಡಿದರು. ಮುಖಂಡರಾದ ಮಹೇಶ್‌ಬಾಬು, ಧನಿಯಾಕುಮಾರ್, ಸಿದ್ದರಾಮೇಶ್ವರ ಬಡಾವಣೆ ನಾಗರಿಕ ಸಮಿತಿಯ ಅಧ್ಯಕ್ಷ ಸೋಮಶೇಖರ್, ಜಯಪ್ರಕಾಶ್, ಶಿವಲಿಂಗಯ್ಯ, ಕಿರಣ್, ಶಾಲೆ ಮುಖ್ಯಸ್ಥ ಕಾಂತರಾಜ್, ವೆಂಕಟರವಣಪ್ಪ, ರಾಜಶೇಖರ್, ರಂಗನಾಥ್, ವಿನಯ್‌ಕುಮಾರ್, ಸಿದ್ದರಾಜ್, ವಿನಯ್, ರೆಡ್ಡಿ, ಸುರೇಶ್‌ವತ್ಸ, ತುಕಾರಾಂ, ವರುಣ್, ರವಿ ಸೇರಿದಂತೆ ಬಡಾವಣೆಯ ಹಲವು ಪ್ರಮುಖರು ಹಾಜರಿದ್ದರು.

ಫೋಟೊ................

ನಗರದ ಸಿದ್ದರಾಮೇಶ್ವರ ಬಡಾವಣೆಯ ಪೂರ್ವಭಾಗಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಪಾಲಿಕೆ ಮೇಯರ್, ಆಯುಕ್ತರು, ಸದಸ್ಯರುಗಳಿಗೆ ಬಡಾವಣೆ ನಿವಾಸಿಗಳು ಅಹವಾಲು ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ