ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2025-26 ನೇ ಸಾಲಿನ 15ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದ ಸಭಾಂಗಣದಲ್ಲಿ ನಡೆಯಿತು.ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸಭೆಯಲ್ಲಿ ಮಂಡಿಸಿದರು.
ಶೇ.15 ಡಿವಿಡೆಂಡ್ ಘೋಷಣೆ: ಸಂಘ ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು 179.28 ಲಕ್ಷ ರು. ಷೇರು ಬಂಡವಾಳ, 30,531.54 ಲಕ್ಷ ರು. ಠೇವಣಿ ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ 27,884.33 ಲಕ್ಷ ರು. ಸಾಲ ನೀಡಿದ್ದು, ಸಂಘದ ದುಡಿಯುವ ಬಂಡವಾಳ 32,317.19 ಲಕ್ಷ ರು. ಹೊಂದಿದೆ. ಸಂಘ 308.58 ಲಕ್ಷ ರು. ನಿವ್ವಳ ಲಾಭ, ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಸಂಘ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ‘ಉತ್ತಮ ಆಡಳಿತಾತ್ಮಕ ಸಹಕಾರಿ ಸಂಘ’ ಪ್ರಶಸ್ತಿ ಹಾಗೂ ಸದಸ್ಯರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವುದರ ಜೊತೆಗೆ ಸಂಘದ ಕಾರ್ಯವೈಖರಿಯನ್ನು ಗುರುತಿಸಿ ಸತತ 10 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ, ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಸತತವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುಕ್ಕೆ ಹಾಗೂ ಸಿಬ್ಬಂದಿಗಳ ನಗುಮೊಗದ ಗುಣಮಟ್ಟದ ಸೇವೆಗಳಿಗೆ ಸಭೆಯಲ್ಲಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.ಪ್ರತಿಭಾ ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಗೌರವಾನ್ವಿತ ಸ್ಥಾನ ಅಲಂಕರಿಸಿದ ಸಂಘದ ಸದಸ್ಯರಾದ ಜಯಶೀಲ ಅಡ್ಯಂತಾಯ, ಆನಂದ ಕೆ.ಅಸೈಗೋಳಿ, ಸೇಸಪ್ಪ ಪೂಜಾರಿ, ಅಶೋಕ್, ರಕ್ಷಿತ್ ಕುಮಾರ್, ಸುಚಿತ್ರ, ಸುಂದರ ಹೆಗ್ಡೆ, ಟೀಪೇಶ್ ಎಸ್.ಅಮೀನ್, ಸುದೀರ್, ಸದಾನಂದ ಆಚಾರ್ಯ, ರೇವತಿ, ವೆಂಕಟೇಶ್ ಎಸ್.ಪೂಜಾರಿ, ಮನೋಜ್ ಎಸ್. ಸಾಲ್ಯಾನ್ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.
ಸಂಘದ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ್ ಎಸ್.ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಬಿ.ಪಿ.ದಿವಾಕರ್, ಗೋಪಾಲ್ ಎಮ್., ಚಂದ್ರಾವತಿ, ಉಮಾವತಿ ಇದ್ದರು.
----