ಪುರಾಣ ಶ್ರವಣದಿಂದ ಸಂಸ್ಕಾರ: ರಘುರಾಂ ಎಚ್‌. ಎಸ್‌.

KannadaprabhaNewsNetwork |  
Published : Jul 30, 2026, 03:00 AM IST
ಕಿನ್ನಿಗೋಳಿ ಯಕ್ಷಲಹರಿ, ಯುಗಪುರುಷ  ತಾಳಮದ್ದಳೆ ಸಪ್ತಾಹ ಬಲಂ ಭೀಮಾಭಿರಕ್ಷಿತಂ ಉದ್ಘಾಟನೆ | Kannada Prabha

ಸಾರಾಂಶ

ಯಕ್ಷಗಾನ, ತಾಳಮದ್ದಳೆ ಮೂಲಕ ಪುರಾಣ ಕಥನಗಳನ್ನು ತಿಳಿಸುವುದರಿಂದ ಜನರನ್ನು ಸಂಸ್ಕಾರಯುತರನ್ನಾಗಿ ಮಾಡಲು ಸಾಧ್ಯವೆಂದು ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯ ಜನರಲ್‌ ಮ್ಯಾನೇಜರ್‌ ರಘುರಾಮ್‌ ಎಚ್‌.ಎಸ್‌. ಅಭಿಪ್ರಾಯಪಟ್ಟಿದ್ದಾರೆ.

ಮೂಲ್ಕಿ: ಯಕ್ಷಗಾನ, ತಾಳಮದ್ದಳೆ ಮೂಲಕ ಪುರಾಣ ಕಥನಗಳನ್ನು ತಿಳಿಸುವುದರಿಂದ ಜನರನ್ನು ಸಂಸ್ಕಾರಯುತರನ್ನಾಗಿ ಮಾಡಲು ಸಾಧ್ಯವೆಂದು ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯ ಜನರಲ್‌ ಮ್ಯಾನೇಜರ್‌ ರಘುರಾಮ್‌ ಎಚ್‌.ಎಸ್‌. ಅಭಿಪ್ರಾಯಪಟ್ಟಿದ್ದಾರೆ.

ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗ ಪುರುಷದ ಆಶ್ರಯದಲ್ಲಿ ಸಹಯೋಗದೊಂದಿಗೆ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಯಕ್ಷಲಹರಿಯ 36 ವರ್ಷದ ಸಂಭ್ರಮ -2026 ಪ್ರಯುಕ್ತ ಕರ್ಣಾಟಕ ಬ್ಯಾಂಕ್‌ ಹಾಗೂ ಸಹಕಾರದಲ್ಲಿ ನಡೆಯಲಿರುವ ಯಕ್ಷಗಾನ ತಾಳ ಮದ್ದಲೆ ‘ಸಪ್ತಾಹ ಬಲಂ ಭೀಮಾಭಿರಕ್ಷಿತಂ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ ಶ್ರೀಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಕಾರ್ಕಳದ ನಿವೃತ್ತ ಉಪನ್ಯಾಸಕ ರಾಮ ಭಟ್‌ ಅವರು ಶ್ರೀನಿವಾಸ ಭಟ್‌ ಅವರ ಸಂಸ್ಮರಣೆ ಮಾಡಿದರು. ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಶನೆಗೈದರು. ಕಲಾವಿದರ ನೆಲೆಯಲ್ಲಿ ಹಿರಿಯ ಕಲಾವಿದ ಎಚ್‌ ರಮೇಶ್‌ ಭಟ್‌ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು. ಉಳೆಪಾಡಿ ಕ್ಷೇತ್ರದ ಧರ್ಮದರ್ಶಿ ಮೋಹನ್‌ದಾಸ ಸುರತ್ಕಲ್‌, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮಾಜ ಸೇವಕ ಗಣಪತಿ ನಾಯಕ್‌ ಕರ್ಪೆ, ಸುರತ್ಕಲ್‌ ಉದ್ಯಮಿ ಚರಣ್‌ ಜೆ. ಶೆಟ್ಟಿಕೊಜಪಾಡಿ ಬಾಳಿಕೆ, ಕರ್ಣಾಟಕ ಬ್ಯಾಂಕ್‌ ನಿವೃತ್ತ ಉಪಮಹಾ ಪ್ರಬಂಧಕ ವ್ಯಾಸಪ್ರಸಾದ್‌ಭಟ್‌ ಎಳತ್ತೂರು, ಉದ್ಯಮಿ ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ಧಾರ್ಮಿಕ ಪರಿಷತ್‌ ಸದಸ್ಯ ಸುಬ್ರಹ್ಮಣ್ಯ ಭಟ್‌ ಕೋರ್ಯಾರ್‌ ಶಿಬರೂರು, ದೀಪ್ತಿ ಬಾಲಕೃಷ್ಣ ಭಟ್‌, ಶ್ರೀವತ್ಸ ಭಟ್‌, ಆಶ್ವಥ್‌ ರಾವ್‌, ವಿನಯಾಚಾರ್‌, ಭವಿಷ್‌ ಶೆಟ್ಟಿ, ಸುಧಾಕರ ಕುಲಾಲ್‌, ರಂಜಿತ್‌ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್‌ ಕೆಂಚನಕೆರೆ ಸ್ವಾಗತಿಸಿದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ದಿನಕರ ಮೇಂಡ ಸಮ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ ವಂದಿಸಿದರು. ಕಾರ್ಯದರ್ಶಿ ವಸಂತ ದೇವಾಡಿಗ ನಿರೂಪಿಸಿದರು. ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ ಪಾಂಡವ ಜನನ ತಾಳಮದ್ದಳೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚತುರ್ಮಾಸ: ಜೈನಮುನಿಗಳ ಅದ್ಧೂರಿ ಪುರಪ್ರವೇಶ
ಅಕ್ಕಮಹಾದೇವಿ ವಿವಿ ಮಹಿಳಾ ಶಿಕ್ಷಣದಲ್ಲಿ ರಾಜ್ಯಕ್ಕೆ ಮಾದರಿ