ಆತ್ಮಶಕ್ತಿ ಸಹಕಾರಿ ಸಂಘ ಉಳ್ಳಾಲ ಶಾಖೆ ವಾರ್ಷಿಕೋತ್ಸವ

KannadaprabhaNewsNetwork |  
Published : Jun 30, 2026, 03:00 AM IST
ಮಂಜಪ್ಪ ಕರ್ನಾವರ್‌ ಯಾನೆ ಬಾಲಕೃಷ್ಣ ಉಳ್ಳಾಲ್‌ ಉದ್ಘಾಟಿಸಿದರು | Kannada Prabha

ಸಾರಾಂಶ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ 111ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರ ಉಳ್ಳಾಲ ನಗರಸಭೆ ಆವರಣದ ಸಮುದಾಯ ಭವನದಲ್ಲಿ ನಡೆಯಿತು.

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ 111ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರ ಉಳ್ಳಾಲ ನಗರಸಭೆ ಆವರಣದ ಸಮುದಾಯ ಭವನದಲ್ಲಿ ನಡೆಯಿತು.

ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಹಾಗೂ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇಲ್ಲಿನ ನುರಿತ ತಜ್ಞ ವೈದ್ಯರ ತಂಡ ಶಿಬಿರ ನಡೆಸಿಕೊಟ್ಟಿತು.

ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕರ್ನಾವರ್ ಯಾನೆ ಬಾಲಕೃಷ್ಣ ಉಳ್ಳಾಲ್ ಶಿಬಿರ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಾಡುತ್ತಿರುವ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.ಉಳ್ಳಾಲ ವಿದ್ಯಾರಣ್ಯ ಕಲಾವೃಂದದ ಮಾಜಿ ಅಧ್ಯಕ್ಷ ರವೀಂದ್ರರಾಜ್‌, ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ ವಿಭಾಗದ ವೈದ್ಯ ಡಾ.ಫಿರ್ದೋಸ್ ಖಾನ್, ನಾಟೆಕಲ್‌ ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೇತ್ರಾ ವಿಭಾಗದ ಎಚ್.ಓ.ಡಿ. ಡಾ. ಬದ್ರಿನಾಥ್ ತಲ್ವಾರ್ ಮಾತನಾಡಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರ ಏರ್ಪಡಿಸುತ್ತಾ ಬಂದಿದೆ ಎಂದರು.ಸಾಮಾಜಿಕ ಸೇವೆಗಳಾದ ಉಚಿತ ಬಸ್ ತಂಗುದಾಣ ನಿರ್ಮಾಣ, ಕಡುಬಡವರಿಗೆ ಗೃಹ ನಿರ್ಮಾಣ, ಹಿರಿಯ ನಾಗರಿಕರ ಮನೆಗೆ ಅಗತ್ಯ ಸಂದರ್ಭದಲ್ಲಿ ತೆರಳಿ ಸೇವೆ ಒದಗಿಸುವ ಚಟುವಟಿಕೆಗಳಲ್ಲಿ ತೊಡಗಿದೆ. ಜಾಗತಿಕ ವಿಮಾ ದಿನದ ವಿಶೇಷತೆಯಾಗಿ ವಾಹನ ವಿಮೆ, ಆರೋಗ್ಯ ವಿಮೆಯನ್ನು ವಿವಿಧ ವಿಮಾ ಕಂಪೆನಿಗಳ ಸೌಲಭ್ಯ ಸಹಯೋಗದೊಂದಿಗೆ ಆಕರ್ಷಕ ಪ್ರೀಮಿಯಂನಲ್ಲಿ ನೀಡುತ್ತಿದೆ ಎಂದು ವಿವರಿಸಿದರು.ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪಡೀಲ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ, ಬಂಡಿಕೊಟ್ಯ, ಉಳ್ಳಾಲ ಮತ್ತು ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಹಾಗೂ ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಉಳ್ಳಾಲ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಆನಂದ ಎಸ್.ಕೊಂಡಾಣ, ಗೋಪಾಲ್ ಎಮ್., ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಗೌರವಾಧ್ಯಕ್ಷ ವಾಮನ್ ಕೆ., ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್‌ನ ಕಿವಿ, ಮೂಗು, ಗಂಟಲು ವಿಭಾಗದ ವೈದ್ಯ ಡಾ.ಅನಿಷಾ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಬಂಡಿಕೊಟ್ಯ ಗೌರವ ಅಧ್ಯಕ್ಷ ಅಶೋಕ್ ಧರ್ಮನಗರ, ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಗೌರವಾಧ್ಯಕ್ಷ ವಿಜಯ ಕುಮಾರ್, ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್ ಮತ್ತಿತ್ತರರು ಇದ್ದರು.

150ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು. ಸಂಘದ ಸಿಬ್ಬಂದಿ ರತಿಕ ಸ್ವಾಗತಿಸಿದರು. ಪವಿತ್ರ ಯು.ಜೆ. ವಂದಿಸಿದರು. ಹಿರಿಯ ಶಾಖಾಧಿಕಾರಿ ಸಚಿನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನು ವಿದ್ಯಾರ್ಥಿಗಳಿಗೆ ಅಣಕು ನ್ಯಾಯಾಲಯ ಪ್ರಾತ್ಯಕ್ಷಿಕೆ
ಕಾರಹುಣ್ಣಿವೆ ಪ್ರಯುಕ್ತ ಆಲದ ಮರಕ್ಕೆ ವಿಶೇಷ ಪೂಜೆ