ಜಮಖಂಡಿ ನಗರದ ಅರಳಿಕಟ್ಟೆ ಪ್ರದೇಶದಲ್ಲಿ ವಟವೃಕ್ಷದ ಪೂಜೆಯಲ್ಲಿ ನಿರತ ಮಹಿಳೆಯರು. | Kannada Prabha
Image Credit: KP
ಕಾರಹುಣ್ಣಿವೆ ಪ್ರಯುಕ್ತ ಆಲದ ಮರಕ್ಕೆ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಜಮಖಂಡಿ
ಜೇಷ್ಠ ಮಾಸದ ಶುಕ್ಷಪಕ್ಷದ ಹುಣ್ಣಿವೆಯ ದಿವಸ ಆಲದ ಮರಕ್ಕೆ ವಿಶೆಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ವಟಸಾವಿತ್ರಿ ಪೂಜೆ ಎಂದೇ ಕರೆಯಲ್ಪಡುವ ಈ ವೃತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಸೋಮುವಾರ ನಗರದ ಅರಳಿಕಟ್ಟಿ ಪ್ರದೇಶದ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತನ್ನ ಪತಿಯ ಪ್ರಾಣವನ್ನು ಯಮನೊಂದಿಗೆ ಹೋರಾಡಿ ಮರಳಿ ಪಡೆದ ಸತಿ ಸಾವಿತ್ರಿಯ ನೆನಪಿಗಾಗಿ ಈ ವೃತವನ್ನು ಆಚರಿಸಲಾಗುತ್ತದೆ. ವೃತದ ಆಚರಣೆಯಿಂದ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಹಲವು ಮಹಿಳೆಯರು ವಟ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮರಕ್ಕೆ ದಾರ ಸುತ್ತಿ ಹರಕೆ ತೀರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.