ಕನ್ನಡಪ್ರಭ ವಾರ್ತೆ ಇಳಕಲ್ಲನಗರದ ಯುವತಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾದ ಹಿನ್ನಲೆಯಲ್ಲಿ ಸೋಮವಾರ ನಗರದ ದಿವಂಗತ ಎಸ್.ಆರ್.ಕಂಠಿ ವತ್ತದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಯುವತಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾದ ಹಿನ್ನಲೆಯಲ್ಲಿ ಸೋಮವಾರ ನಗರದ ದಿವಂಗತ ಎಸ್.ಆರ್.ಕಂಠಿ ವತ್ತದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಯುವ ನಾಯಕ ಪರುಶರಾಮ ಬಿಸಲದಿನ್ನಿ ಮಾತನಾಡಿ, ಮುಸ್ಲಿಂ ಯುವಕ ನಾನಾಸಾಬ ಬುಡ್ಡಾ ಎಂಬಾತ ನಗರದ ನೇಕಾರ ಕುಟುಂಬದ ಅಕ್ಷತಾ ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಅವಳ ಅಶ್ಲಿಲ ಚಿತ್ರ ತೆಗೆದು ಚಿತ್ರಹಿಂಸೆ ನೀಡಿ ಇಸ್ಲಾಂಗೆ ಮತಾಂತರ ಮಾಡಲು ವಿಫಲ ಯತ್ನ ನಡೆಸಿ, ಬಳಿಕ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಬುಡ್ಡಾ ಎಂಬಾತನ ವಯಸ್ಸು ಇನ್ನು 25. ಅಕ್ಷತಾಳ ವಯಸ್ಸು 30 ಆಗಿದ್ದರೂ ಬುಡ್ಡಾ ಅಕ್ಕ ಎಂದು ಪರಿಚಯಿಸಿಕೊಂಡು ಅವರ ಮನೆಗೆ ಹೋಗಿ ಬಂದು ಮಾಡಿ ಅಕ್ಷತಾಳ ಜತೆ ಪ್ರೀತಿ ಪ್ರೇಮದ ನಾಟಕವಾಡಿ, ಅವಳ ಜತೆಗಿದ್ದ ಇಬ್ಬರ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ 2 ವರ್ಷ ಇಟ್ಟುಕೊಂಡು ಅವಳ ಅಶ್ಲಿಲ ಫೋಟೊ ತೆಗೆದು ಮುಸ್ಲಿಮ ಧರ್ಮಕ್ಕೆ ಮತಾಂತರ ಆಗುವಂತೆ ಚಿತ್ರಹಿಂಸೆ ನೀಡಿ ಕೊನೆಗೆ ಅಕ್ಷಿತಾಳನ್ನು ಮನೆಯಲ್ಲಿದ್ದ ತಂತಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಓಡಿ ಹೋಗಿದ್ದಾನೆ.ಮನೆ ಮಾಲೀಕರಿಗೆ ಶವದ ವಾಸನೆ ಬಂದ ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ. ಇವತ್ತು ಮುಸ್ಲಿಂ ಸಮಾಜದ ಕೆಲ ದುಷ್ಟ ಯುವಕರು ಹಿಂದು ಯುವತಿಯರಿಗೆ
ಪ್ರೇಮ, ಪ್ರೀತಿಯ ಬಲೆ ಬೀಸಿ ಕೊಲೆ ಮಾಡುತ್ತಿರುವುದು ಅತ್ಯಂತ ಘೋರ ಕೃತ್ಯವಾಗಿದೆ. ಇಷ್ಟೇಲ್ಲಾ ನಡೆದರು ಗೃಹ ಸಚಿವರು ಕ್ರಮ ಕೈಗೊಳ್ಳುತ್ತಿಲ್ಲ. ಲವ್ ಜಿಹಾದ್ ಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದ್ದರೆ ಸಮಾಜದಲ್ಲಿ ಇಂತಹ ಘನಘೋರ ಕೊಲೆಗಳು ನಡೆಯುತ್ತಿರಲಿಲ್ಲ. ಆದ್ದರಿಂದ ಇನ್ನಾದರೂ ಗೃಹ ಸಚಿವರು ಹಾಗೂ ಪೊಲೀಸರು ಎಚ್ಛತ್ತು ಲವ್ ಜಿಹಾದಿಗಳನ್ನು ಮಟ್ಟಾ ಹಾಕಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ಉದ್ದೇಶಿಸಿ ತೃಪ್ತಿ ಸಾಲಿಮಾಠ, ಅಕ್ಷತಾಳ ತಾಯಿ ಹಾಗು ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರು ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡಿ ಕಂಠಿ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಸ