ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಬಿಎಲ್‌ಡಿಇ ಕಾನೂನು ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಅಣಕು ಪ್ರದರ್ಶನ ಸೋಮವಾರ ಏರ್ಪಡಿಸಲಾಗಿತ್ತು.ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ಕಲಾಪಗಳು ಹೆಗೆಲ್ಲಾ ನಡೆಯುತ್ತದೆ ಎಂಬುವುದನ್ನು ತಿಳಿಸಿಕೊಡಲಾಯಿತು. ಬಾಗಲಕೊಟೆಯ ಹಿರಿಯ ನ್ಯಾಯವಾದಿ ಎಸ್.ಸಿ.ಹಿರೇಮಠ ನ್ಯಾಯಾಧೀಶರಾಗಿ ಮಾರ್ಗದರ್ಶನ ನೀಡಿದರು.
ಹಿರಿಯ ನ್ಯಾಯವಾದಿ ಎನ್.ಎಲ್ ಹೊಸಕೋಟೆ ಹಾಗೂ ಎ.ಎಂ.ಮುಂಜಿ ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿ ಆರ್.ಕೆ.ಹೊಸಟ್ಟಿ ಮತ್ತು ಎಸ್.ಪಿ.ಪಾರ್‌ಶೆಟ್ಟಿ ವಕೀಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಸರ್ಕಾರಿ ಅಭಿಯೋಜಕರಾಗಿ ಸೃಷ್ಟಿ ಮುನವಳ್ಳಿ ಮತ್ತು ಆರೋಪಿತರ ಪರ ವಕೀಲರಾಗಿ ಪ್ರೇಮ ಗೌಡಪ್ಪನವರು ವಿದ್ಯಾರ್ಥಿಗಳು ವಾದ ಮಂಡನೆ ಮಂಡಿಸಿದರು. ವಿದ್ಯಾರ್ಥಿಗಳು ಪೊಲೀಸ್, ಪಿಎಸ್ಐ, ಸಿಪಿಐ, ಡಾಕ್ಟರ್, ಪಂಚರು ಮತ್ತು ಸಾಕ್ಷಿದಾರರಾಗಿ ಪ್ರಕರಣದ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಕೊಲೆ ಪ್ರಕರಣದ ಸಂಪೂರ್ಣ ಅಪರಾಧಿಕ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ನಿಖಿಲ ಮಂಟೂರ ಕೃತಕ ನ್ಯಾಯಾಲಯ ಏರ್ಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ವಾತಾವರಣ ಹಾಗೂ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ನೀಡಿದರು.