ಕಸ ವಿಂಗಡಣೆ ಘಟಕದ ಮೇಲೆ ದಾಳಿ : 9 ಮಕ್ಕಳ ರಕ್ಷಣೆ

KannadaprabhaNewsNetwork |  
Published : Jun 22, 2024, 12:56 AM ISTUpdated : Jun 22, 2024, 09:44 AM IST
ಬೆಂ.ಗ್ರಾ ಜಿಲ್ಲೆಯ ಕಸ ವಿಂಗಡಣೆ ಘಟಕಗಳ ಮೇಲೆ ದಾಳಿ ಸಂಘಟಿಸಿದ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ರಕ್ಷಿಸಿದರು. | Kannada Prabha

ಸಾರಾಂಶ

 ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ಮಕ್ಕಳ ಸಹಾಯವಾಣಿಗೆ ಬ೦ದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಬುಧವಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು. 

ತಪಾಸಣೆ ವೇಳೆಯಲ್ಲಿ ಯಾವುದೇ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಪತ್ತೆಯಾಗಿಲ್ಲ. ಆದರೆ 09 ಮಕ್ಕಳು ಶಾಲೆಯಿಂದ ಹೊರ ಉಳಿದು ಪೋಷಕರ ಜೊತೆಯಲ್ಲಿ ವಾಸವಾಗಿದ್ದರು. ಇವರು ಮೂಲತಃ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದವರು. 

ತಪಾಸಣೆ ವೇಳೆ ಸಿಕ್ಕಂತಹ ಮಕ್ಕಳನ್ನು ದೇವನಹಳ್ಳಿ ತಾಲೂಕಿನ ವಿಜಯಪುರದ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಪುನರ್ ವಸತಿಗೊಳಿಸಿ, ದೇವನಹಳ್ಳಿಯ ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಲಾಯಿತು. ಮುಂದಿನ ಶುಕ್ರವಾರದಂದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗುವುದು. 

ಈ ತಪಾಸಣೆ ವೇಳೆ ಕಸ ವಿಂಗಡಣೆ ಘಟಕದಲ್ಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಅಧಿಕಾರಿಗಳ ಗಮನಕ್ಕೆ ಬಂದಿದೆ, ಮಕ್ಕಳು ಹಾಗೂ ಪೋಷಕರನ್ನು ಕಸ ವಿಂಗಡಣೆ ಘಟಕದಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುವುದಕ್ಕೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶೆಡ್ ಗಳನ್ನು ನಿರ್ಮಿಸಿಕೊಡಬೇಕೆಂದು ಕಸ ವಿಂಗಡಣೆ ಘಟಕದ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿದರು.

 ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಹೆಚ್.ಆರ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಬ್ಬಾರಾವ್ ಎಸ್, ಕಾರ್ಮಿಕ ನಿರೀಕ್ಷಕ ಅಂಬಿಕಾ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜು, ಬಿಇಒ ಕಚೇರಿಯ ನಾಗಪ್ಪ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೌಮ್ಯ ಹಾಜರಿದ್ದರು.20ಕೆಡಿಬಿಪಿ1- ಬೆಂ.ಗ್ರಾ. ಜಿಲ್ಲೆಯ ಕಸ ವಿಂಗಡಣೆ ಘಟಕಗಳ ಮೇಲೆ ದಾಳಿ ಸಂಘಟಿಸಿದ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ರಕ್ಷಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ