- ರಸ್ತೆ ವಿಸ್ತರಣಾ ಸಮಿತಿ ಸದಸ್ಯೆ ಸುಜಾತ ಮೇಲೆ ಹಲ್ಲೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಅಧ್ಯಕ್ಷ ಒತ್ತಾಯ
- - -- ಪಪಂಗೆ ಸೇರಿದ ಬಯಲು ರಂಗಮಂದಿರದಲ್ಲಿ ಸಭೆ ಮಾಡಲಾಗುತ್ತಿತ್ತು
- ಹೋರಾಟ ತಡೆಯಲು ಏಕಾಏಕಿ ಹಲ್ಲೆ ಮಾಡುವುದು ಎಷ್ಟು ಸರಿ?- - -
ಕನ್ನಡಪ್ರಭ ವಾರ್ತೆ ಜಗಳೂರುಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಹಾಗೂ ಸಹೋದರ ಸುನೀಲ್ ರಸ್ತೆ ವಿಸ್ತರಣಾ ಸಮಿತಿ ಸದಸ್ಯೆ ಸುಜಾತ ಅವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ. ಕೂಡಲೇ ನವೀನ್ ಪಪಂ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದರೆ ರಾಜಿನಾಮೆ ನೀಡುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ರಸ್ತೆ ವಿಸ್ತರಣಾ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲ್ಲೆ ನಡೆ ಮೂಲಕ ಹೋರಾಟ ಸಮಿತಿಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಎಲ್ಲ ಸಂಘಟನೆಗಳು ಹೋರಾಟ ಮಾಡುತ್ತ ಬಂದಿವೆ. ನಾವು ಮಾಡುತ್ತಿದ್ದ ಸಭೆಗೆ ಬಂದು ಪಟ್ಟಣ ಪಂಚಾಯಿತಿಗೆ ಸೇರಿದ ಬಯಲು ರಂಗಮಂದಿರದಲ್ಲಿ ಸಭೆ ಮಾಡುವ ಹಾಗಿಲ್ಲ ಎನ್ನುತ್ತಾ ಏಕಾಏಕಿ ಹಲ್ಲೆ ಮಾಡುವುದು ಎಷ್ಟು ಸರಿ? ಅಧ್ಯಕ್ಷರ ತಮ್ಮ ಸುನೀಲ್ ಅವರು ಆ ಕೆಲಸ ಮಾಡಬೇಕು, ಈ ಕೆಲಸ ಮಾಡಬಾರದು ಅಂತ ಹೇಳಲಿಕ್ಕೆ ಅವರು ಯಾರು? ಇಂಥ ನಡೆಗಳು ನಿಜವಾದ ಹೋರಾಟಗಾರನ್ನು ತಡೆಯುವ ಉದ್ದೇಶವಾಗಿದೆ ಎಂದು ಟೀಕಿಸಿದರು.ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಮಾತನಾಡಿ, ೬೯ ಅಡಿ ರಸ್ತೆ ವಿಸ್ತರಣೆ ವಿಚಾರವಾಗಿ ಹೋರಾಟವನ್ನು ಮಾಡಲಾಗುತ್ತಿತ್ತು. ಈ ಹೋರಾಟಕ್ಕೆ ಮಾಜಿ ಶಾಸಕರು, ಹಾಲಿ ಶಾಸಕರು ಬೆಂಬಲ ನೀಡಿದ್ದಾರೆ. ಅಧಿಕಾರಿಗಳು ಯಾವುದೇ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಹೆದರುವ ಅವಶ್ಯಕತೆ ಇಲ್ಲ. ಹೋರಾಟಗಾರರಿಗೆ ಸಭೆಗಳನ್ನು ಮಾಡಲು ಶಾಸಕ ಬಿ ದೇವೇಂದ್ರಪ್ಪ ಅವಕಾಶ ನೀಡಿದ್ದರು. ಹಾಗಾಗಿ ನಾವು ಇಲ್ಲಿ ಸಭೆಗಳನ್ನು ಮಾಡಲಾಗುತ್ತಿತ್ತು ಎಂದ ಅವರು, ಹಲ್ಲೆ ಕ್ರಮವನ್ನು ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ವಕೀಲ ಓಬಳೇಶ್, , ಡಿಎಸ್ಎಸ್ ತಾಲೂಕು ಅಧ್ಯಕ್ಷ ಮಲೆಮಾಚಿಕೆರೆ ಸತೀಶ್, ಕರುನಾಡ ಸೇನೆ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ, ಧನ್ಯಕುಮಾರ್, ಹಸಿರು ಸೇನೆ ಮೇಟಿ ಬಣದ ತಾಲೂಕು ಅಧ್ಯಕ್ಷ ಭರಮಸಮುದ್ರ ಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಸಿದ್ದಪ್ಪ, ಗೌರಿಪುರ ಸತ್ಯಮೂರ್ತಿ, ಸುಜಾತಮ್ಮ ಮಾತನಾಡಿದರು.ಸಂಘಟನೆಗಳ ಮುಖಂಡರಾದ ರಾಜು, ಕುಬೇಂದ್ರಪ್ಪ, ರೈತ ಸಂಘದ ಬಸಣ್ಣ, ಸೇರಿದಂತೆ ಸಂಘಟನೆಗಳ ಹೋರಾಟ ಸಮಿತಿಯ ಸದಸ್ಯರು ಹಾಜರಿದ್ದರು.
- - --05ಜೆಎಲ್ಆರ್01.ಜೆಪಿಜಿ:
ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ರಸ್ತೆ ವಿಸ್ತರಣಾ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.