ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅವರು ವೆಂಕಟೇಶ್ವರ ಮಹಲ್ ನಲ್ಲಿ ಜಾತ್ಯಾತೀತ ಜನತಾದಳ ಆಯೋಜಿಸಿದ್ದ ಪದಗ್ರಹಣ, ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ಜೆಡಿಎಸ್ ಹೆಮ್ಮರವಾಗಿ ಬೆಳೆಯುವಂತಾಗಬೇಕು, ಇಂದಿನ ಕಾರ್ಯಕ್ರಮದಲ್ಲಿ ಇಲ್ಲಿ ಕಡಿಮೆ ಸಂಖ್ಯೆಯ ಜನರಿದ್ದರೂ ಸಹ ನಿಮ್ಮೆಲ್ಲರ ಶಕ್ತಿ ಅಗಾಧವಾದದ್ದು, ಬೂತ್ ಮಟ್ಟದಲ್ಲಿ ಜನರ ಬಳಿಗೆ ತೆರಳಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.
ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ಧ್ವನಿ ಎತ್ತಲು ಮುಂದಾಗಬೇಕು, ನೊಂದವರಿಗೆ ಶಕ್ತಿ ತುಂಬಿ ನ್ಯಾಯ ಕೊಡಿಸಲು ಎಲ್ಲರೂ ಕೆಲಸ ಮಾಡಬೇಕು. ಆಗಲೇ ಪಕ್ಷ ತನ್ನಿಂತಾನೇ ಬಲವರ್ಧನೆಯಾಗುತ್ತಾ ಹೋಗುತ್ತದೆ, ಈ ನಿಟ್ಟಿನಲ್ಲಿ ಎಲ್ಲರಿಗೂ ಶಕ್ತಿ ತುಂಬುವಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುವೆ ಎಂದರು.ನಗರಸಭೆ ಸದಸ್ಯೆ ಜಯಮರಿರವರು ಜೆಡಿಎಸ್ ಸೇರ್ಪಡೆಯಾದ ಹಿನ್ನೆಲೆ ಅವರನ್ನು ಮಹಿಳಾ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಯಿತು.
ಕೊಳ್ಳೇಗಾಲ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪುಟ್ಟಸ್ವಾಮಿ ಮಾತನಾಡಿ, ಇಂದಿನಿಂದಲೇ ಮುಂಬರುವ ಗ್ರಾಪಂ, ಜಿಪಂ, ತಾಪಂ ಚುನಾವಣೆಗೆ ಪಕ್ಷ ಸಜ್ಜಾಗಿದೆ. 241 ಬೂತ್ ಗಳಲ್ಲಿ ಈಗಾಗಲೇ 200 ಬೂತ್ ಗಳಿಗೆ ಕಾರ್ಯಕರ್ತರನ್ನು ನೇಮಿಸಲಾಗಿದೆ. ಇಂದಿನ ಕಾರ್ಯಕ್ರಮ ಮುಂದಿನ ಚುನಾವಣೆಯ ದಿಕ್ಸೂಚಿ, ಪಕ್ಷ ಹೆಮ್ಮರವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸ್ಪಂದಿಸುತ್ತೇವೆ, ಜೆಡಿಎಸ್ ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ, ಇಲ್ಲಿಂದ ನಾಯಕರಾದವರು ಕಾಂಗ್ರೆಸ್ ಪಕ್ಷದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದರು.