ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್ ಅಟ್ಟಹಾಸ

KannadaprabhaNewsNetwork |  
Published : Jan 18, 2025, 12:48 AM IST

ಸಾರಾಂಶ

ಕಳೆದೊಂದು ತಿಂಗಳಿನಿಂದ ಎಲ್ಲೆಂದರಲ್ಲಿ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಅನ್ಯರಾಜ್ಯದ ಐವರು ಮುಸುಕುಧಾರಿಗಳ ಗ್ಯಾಂಗ್ ಮೇಲೆ ನಗರದ ಹೊರವಲಯದಲ್ಲಿ ಗುರುವಾರ ತಡರಾತ್ರಿ ಖಾಕಿಗಳು ಅಟ್ಯಾಕ್ ಮಾಡಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಖದೀಮನ ಕಾಲಿಗೆ ಗುಂಡು ತಗುಲಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದೊಂದು ತಿಂಗಳಿನಿಂದ ಎಲ್ಲೆಂದರಲ್ಲಿ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಅನ್ಯರಾಜ್ಯದ ಐವರು ಮುಸುಕುಧಾರಿಗಳ ಗ್ಯಾಂಗ್ ಮೇಲೆ ನಗರದ ಹೊರವಲಯದಲ್ಲಿ ಗುರುವಾರ ತಡರಾತ್ರಿ ಖಾಕಿಗಳು ಅಟ್ಯಾಕ್ ಮಾಡಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಖದೀಮನ ಕಾಲಿಗೆ ಗುಂಡು ತಗುಲಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ.

ಗುರುವಾರ ಮಧ್ಯರಾತ್ರಿ ಬಡಾವಣೆಯೊಂದರಲ್ಲಿ ಕಳ್ಳತನಕ್ಕೆ ಬಂದಿದ್ದ ವೇಳೆ ಬಂಧಿಸಲು ಯತ್ನಿಸಿದಾಗ ಕಳ್ಳರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಬದಿಯಲ್ಲಿನ ತೊಗರಿ ಜಮೀನಿನಲ್ಲಿ ಓಡಿಹೋಗಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಗೋಳಗುಮ್ಮಟ ಠಾಣೆ ಸಿಪಿಐ ಮಲ್ಲಯ್ಯ ಮಠಪತಿ ಅವರು 5 ಸುತ್ತು ಗುಂಡು ಗುಂಡು ಹಾರಿಸಿದ್ದು, ಓರ್ವ ದರೋಡೆಕೋರನ ಕಾಲಿಗೆ ಗುಂಡು ತಗುಲಿದ್ದು, ಆತ ಸಿಕ್ಕಿಬಿದ್ದಿದ್ದಾನೆ. ಕಾಲಿಗೆ ಗುಂಡು ತಗುಲಿ ಪೊಲೀಸ್‌ರ ಕೈಗೆ ಸಿಕ್ಕಿಬಿದ್ದ ಆರೋಪಿ ಮಧ್ಯಪ್ರದೇಶದ ಮಹೇಶ ಎಂಬಾತನನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಗರದ ಕನಕದಾಸ ಬಡಾವಣೆಗೆ ಬಂದಿದ್ದ ನಾಲ್ವರು ಮುಸುಕುಧಾರಿಗಳು, ಕಳ್ಳತನಕ್ಕೆ ಯತ್ನಿಸುತ್ತಿದ್ದ ಮೊದಲ ಮನೆಯ ಮುಂದೆಯೇ ಬಂಧನಕ್ಕೆ ಸ್ಕೆಚ್ ಹಾಕಿದ್ದರು.

ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರಿಂದ ಮತ್ತೊಂದು ಮನೆಯ ಮುಂದೆ ಕಳ್ಳತನಕ್ಕೆ ಬಂದಾಗ ಪೊಲೀಸರು ಅಟ್ಯಾಕ್ ಮಾಡಿದ್ದಾರೆ.

ಬುಧವಾರ ರಾತ್ರಿ ಜೈನಾಪೂರ ಆರ್‌ಸಿ ಬಡಾವಣೆಯಲ್ಲಿ ಕಳ್ಳತನಕ್ಕೆ ಬಂದಿದ್ದ ಹೊರರಾಜ್ಯದ ಕಳ್ಳರ ಕೃತ್ಯವನ್ನು ವಿರೋಧಿಸಿದ ಮನೆ ಮಾಲೀಕ ಸಂತೋಷ ಕನ್ನಾಳ ಎಂಬಾತನನ್ನು ಮನೆಯ ಮೊದಲ ಮಹಡಿಯಿಂದಲೇ ಎತ್ತಿ ಬಿಸಾಕಿ ಅವರ ಮನೆ ದರೋಡೆ ನಡೆಸಿದ್ದರು. ಮಿತಿಮೀರಿದ್ದ ಮುಸುಕುಧಾರಿಗಳ ಅಟ್ಟಹಾಸದಿಂದಾಗಿ ಹೇಗಾದರೂ ಮಾಡಿ ಅವರನ್ನು ಹೆಡೆಮುರಿ ಕಟ್ಟಬೇಕು ಎಂದು ಮುಸುಕುಧಾರಿಗಳ ಬಂಧನಕ್ಕೆ ಗಾಂಧಿಚೌಕ್‌, ಗೋಳಗುಮ್ಮಟ, ಗ್ರಾಮೀಣ ಸಿಪಿಐಗಳನ್ನೊಳಗೊಂಡ ತಂಡವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ರಚಿಸಿದ್ದರು. ವಿಶೇಷ ತಂಡ ತಡರಾತ್ರಿ ಕಾರ್ಯಾಚರಣೆ ನಡೆಸಿ, ಕೊನೆಗೂ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದವರ ಬಲೆಗೆ ಜಾಲ:

ಮುಸುಕುಧಾರಿಗಳಾದ್ದ ದರೋಡೆಕೋರರನ್ನು ಬಂಧಿಸಲು ಮುಂದಾದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದರಿಂದ ಮಧ್ಯಪ್ರದೇಶದ ಆರೋಪಿ ಮಹೇಶನ ಕಾಲಿಗೆ ಗುಂಡು ತಗುಲಿ ಆತ ಸಿಕ್ಕಿಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಳಗುಮ್ಮಟ ಸಿಪಿಐ ಮಲ್ಯಯ್ಯ ಮಠಪತಿ ದರೋಡೆಕೋರರ ಮೇಲೆ 5 ಸುತ್ತು ಗುಂಡು ಹಾರಿಸಿದ್ದರಿಂದ ಮಹೇಶ ಎಂಬಾತನ ಕಾಲಿಗೆ 3 ಗುಂಡು ತಗುಲಿವೆ. ಮುಸುಕುಧಾರಿ ಗ್ಯಾಂಗ್ ಸಂಬಂಧ ಈ ವರೆಗೆ ಮೂರು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ದರೋಡೆಕೋರ ಬಂಧನಕ್ಕೆ ತಂಡಗಳ ರಚನೆ ಮಾಡಿದ್ದರಿಂದ ಓರ್ವ ಸೆರೆಸಿಕ್ಕಿದ್ದು, ಇನ್ನುಳಿದವರ ಬಲೆಗೆ ಜಾಲ ಬೀಸಲಾಗಿದೆ.ನಗರದ ಜನರ ನಿದ್ದೆಗೆಡಿಸಿದ್ದ ಮುಸುಕುಧಾರಿಯ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಗೊಂಡ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.

ಕಳೆದೆರಡು ತಿಂಗಳಿನಿಂದ ರಾತ್ರಿಯ ವೇಳೆ ದರೋಡೆಕೋರರು ಮನೆಗಳ ಬಾಗಿಲು ಮುರಿದು ಮನೆಯಲ್ಲಿದ್ದವರಿಗೆ ಚಾಕು ಚುಚ್ಚುವುದು, ಕೊಲೆಗೆ ಯತ್ನಿಸಿ ದರೋಡೆ ಮಾಡುವುದು ನೋಡಿ ನಮಗೆಲ್ಲ ಭಯವಾಗಿತ್ತು. ಗುಂಡು ಹಾರಿಸಿ ಓರ್ವವನ್ನು ಬಂಧಿಸಿರುವ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಂತೆ ಉಳಿದವರನ್ನು ಸಹ ಆದಷ್ಟು ಬೇಗ ಬಂಧಿಸುವ ಮೂಲಕ ನಗರ ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದರೆ ಸಾಕು.

-ವೀಣಾ ಸಿಂಧೂರ, ಜೈನಾಪುರ ಬಡಾವಣೆ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ