ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ರಾನ್ಸ್, ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಅಶಾಂತಿಯ ಮೂಲಕ ಅರಾಜಕತೆಯನ್ನು ಸೃಷ್ಟಿಸುವ ಯತ್ನಗಳು ಪದೇ, ಪದೆ ನಡೆಯುತ್ತಿವೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಕೆಲ ಎಡಪಂಥೀಯ ಪಕ್ಷ, ಸಂಘಟನೆಗಳ ಜತೆಗೆ ಸೇರಿ ಹುನ್ನಾರ ನಡೆಸುತ್ತಿದೆ. ರೆಜಿಮ್ ಚೇಂಜ್‌ನಂಥ ಮಾತುಗಳನ್ನು ಹೋರಾಟದ ನೇತೃತ್ವ ವಹಿಸಿದವರು ಆಡುತ್ತಿದ್ದಾರೆ. ಝಾಕೀರ್ ನಾಯಕನಂಥ ದೇಶದಿಂದ ಹೊರಗಿದ್ದವರು ಇಂಥ ಹೋರಾಟಗಳಿಗೆ ನೆರವಾಗುತ್ತಿದ್ದಾರೆ. ಇದೆಲ್ಲವನ್ನು ಬಯಲು ಮಾಡುವುದಕ್ಕಾಗಿಯೇ ಬಿಜೆಪಿ ಅ.23 ರಿಂದ ನ.5ರವರೆಗೆ ಒಂದು ಹಂತದಲ್ಲಿ ಹಾಗೂ ನ.11 ರಿಂದ ಎರಡನೇ ಹಂತದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ನೀಟ್ ಪರೀಕ್ಷೆ ವಿಷಯದಲ್ಲಿ ಹೋರಾಟ ಕೈಗೊಂಡಾಗ ಅವರ ಅಭಿಪ್ರಾಯವನ್ನು ಆಲಿಸಿ ಸರ್ಕಾರ ಸ್ಪಂದಿಸಿತು. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ಅಂದಿನಿಂದಲೂ ನಡೆದಿದ್ದು, ಸರ್ಕಾರ ಎಲ್ಲವನ್ನು ಅತ್ಯಂತ ಸೂಕ್ಷ್ಮತೆಯಿಂದ ನಿರ್ವಹಿಸುತ್ತಿದೆ. ಹೋರಾಟದ ನೆಪದಲ್ಲಿ ಅದನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾದರೆ ಕಾನೂನು ರೀತಿ ತಕ್ಕಪಾಠ ಕಲಿಸುವುದು ಸಹ ಸರ್ಕಾರಕ್ಕೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.ಇಷ್ಟಾಗಿಯೂ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ಇವರು ನಿಲ್ಲಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಅರ್ಜಿ ಸಲ್ಲಿಸುವುದಾಗಿ ಮೆರವಣಿಗೆ ಹೊರಟಿರುವುದು ಸಹ ಇತಿಹಾಸದಲ್ಲೇ ಇದೇ ಮೊದಲು. ಇವರಿಗೆ ದೇಶದ ಹಿತ ಮುಖ್ಯವಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಆರೋಪಿಸಿದರು.
----
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಮೊದಲು ಇವಿಎಂ ಬಗ್ಗೆ ದೂರಿದರು, ನಂತರ ಎಸ್ಐಆರ್ ಬಗ್ಗೆ ಆರೋಪಗಳನ್ನು ಮಾಡಿದರು. ಈಗ ಚುನಾವಣಾ ಆಯುಕ್ತರ ವಜಾ ಮಾಡಿ ಎನ್ನುತ್ತಿದ್ದಾರೆ. ದೇಶದಲ್ಲಿ ನಡೆದ 28 ವಿಧಾನ ಪರಿಷತ್ ಸ್ಥಾನಗಳಲ್ಲಿ ಪ್ರಬುದ್ಧ ಮತದಾರ ಇವರಿಗೆ ಒಂದು ಸ್ಥಾನವನ್ನೂ ನೀಡಿಲ್ಲ. ಕರ್ನಾಟಕದಲ್ಲೂ ನಾಲ್ಕು ಪರಿಷತ್ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ ನಡೆದಿದೆ. ಆದರೂ ಮತದಾರ ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.