ರೈತಪರ ಹೋರಾಟಗಾರರ ಹತ್ತಿಕ್ಕುವ ಯತ್ನ: ನ.2ರಂದು ಪ್ರತಿಭಟನೆ

KannadaprabhaNewsNetwork |  
Published : Oct 31, 2026, 02:30 AM IST
30ಸಿಎಚ್‌ಎನ್‌51ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಅವರು ನೇರ ಸಂವಾದ ನಡೆಸಿದರು. | Kannada Prabha

ಸಾರಾಂಶ

ರೈತಪರ ಹೋರಾಟಗಾರರನ್ನು ಹತ್ತಿಕ್ಕಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಕೃತ್ಯವನ್ನು ಖಂಡಿಸಿ, ನ.2ರಂದು ಇಲ್ಲಿನ ಅರಣ್ಯ ಇಲಾಖೆ ಮುತ್ತಿಗೆ ಹಾಕಿ ಧರಣಿ ಪ್ರತಿಭಟನೆ ನಡೆಸುವುದಾಗಿ ರೈತಪರ ಸಂಘಟನೆಗಳ ಮುಖಂಡರು ಎಚ್ವರಿಸಿದ್ದಾರೆ.

ಸೋಮವಾರಪೇಟೆ ; ರೈತಪರ ಹೋರಾಟಗಾರರನ್ನು ಹತ್ತಿಕ್ಕಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಕೃತ್ಯವನ್ನು ಖಂಡಿಸಿ, ನ.2ರಂದು ಇಲ್ಲಿನ ಅರಣ್ಯ ಇಲಾಖೆ ಮುತ್ತಿಗೆ ಹಾಕಿ ಧರಣಿ ಪ್ರತಿಭಟನೆ ನಡೆಸುವುದಾಗಿ ರೈತಪರ ಸಂಘಟನೆಗಳ ಮುಖಂಡರು ಎಚ್ವರಿಸಿದ್ದಾರೆ.

ಸಿ ಆ್ಯಂಡ್ ಡಿ ಸಮಸ್ಯೆ, ಸೆಕ್ಷನ್-4, ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಹೋರಾಟ ನಡೆಸಿದ್ದ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ. ಸುರೇಶ್ ಅವರ ಮನೆಗೆ ಅರಣ್ಯ ಇಲಾಖೆಯ 8 ಜನ ಅಧಿಕಾರಿಗಳ ತಂಡ ದಾಳಿ ನಡೆಸಿ, ಮನೆಯಲ್ಲಿದ್ದ ಪತ್ನಿ ಹಾಗೂ ಮಗನಿಗೆ ಭಯ ಹುಟ್ಟಿಸಿ ತೆರಳಿದ್ದಾರೆ. ಯಾವುದೇ ನೋಟಿಸು ನೀಡದೆ ದಾಳಿ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರೈತ ಸಮುದಾಯವನ್ನು ಸಂಘಟಿಸಿ ನಿರಂತರ ಹೋರಾಟ ಮಾಡುತ್ತಿರುವ ಸುರೇಶ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಅಕ್ರಮವಾಗಿ ಮರ ಸಂಗ್ರಹಿಸಿರುವ ಸಂಶಯದಿಂದ 19ರಂದು ದಾಳಿ ನಡೆಸಿದ್ದಾರೆ. ಆದರೆ, ಯಾವುದೇ ಮರಗಳು ಮನೆಯಲ್ಲಿ ದೊರೆಯದ ಕಾರಣ ಬರೀಗೈಯಲ್ಲಿ ಅಧಿಕಾರಿಗಳು ತೆರಳಿದ್ದಾರೆ. ನೋಟಿಸು ನೀಡದೆ ಅಕ್ರಮ ಪ್ರವೇಶದ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಇದುವರೆಗೆ ಪೊಲೀಸರು ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಮೀಸಲು ಅರಣ್ಯದಲ್ಲಿ ಮರ ಹನನವಾಗುವುದನ್ನು ತಡೆಯುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು. ರೈತರು ಮನೆ ಕಟ್ಟಿಕೊಳ್ಳಲು ಸ್ವಂತ ಜಾಗದಲ್ಲಿ ಮರ ಕಡಿದರೆ ರೈತರ ವಿರುದ್ಧ ಮೊಕದ್ದಮೆ ದಾಖಲಿಸಿ ಪೌರುಷ ತೋರಿಸಬಾರದು ಎಂದು ಹೇಳಿದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಮಾತನಾಡಿ, ಮಹಿಳೆ, ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮವಾಗುವ ತನಕ ಹೋರಾಟ ನಡೆಸಲಾಗುವುದು. ಅರಣ್ಯ ಭವನಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.,ಸಾಮಾಜಿಕ ಹೋರಾಟಗಾರ ಬಗ್ಗನ ಅನಿಲ್ ಕುಮಾರ್, ರೈತ ಹೋರಾಟ ಸಮಿತಿ ಕಾನೂನು ಸಲಹೆಗಾರ ಹಿರಿಯ ವಕೀಲ ಬಿ.ಜೆ. ದೀಪಕ್, ಕಾರ್ಯದರ್ಶಿ ಕೂತಿ ದಿವಾಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ