ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಚಿಕ್ಕ ಕಣಗಾಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಪುಟಾಣಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಕಾಯಿಪಲ್ಲೆ, ಸೊಪ್ಪು, ಹಣ್ಣು ಹಂಪಲನ್ನು ಶಾಲೆಯ ಮಕ್ಕಳ ಸಂತೆಗೆ ತಂದು ಮಾರಾಟ ಮಾಡಿದರು. ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯು ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಂತೆ ಕಳೆಗಟ್ಟಿತ್ತು.
ಶನಿವಾರಸಂತೆ: ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಚಿಕ್ಕ ಕಣಗಾಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಪುಟಾಣಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಕಾಯಿಪಲ್ಲೆ, ಸೊಪ್ಪು, ಹಣ್ಣು ಹಂಪಲನ್ನು ಶಾಲೆಯ ಮಕ್ಕಳ ಸಂತೆಗೆ ತಂದು ಮಾರಾಟ ಮಾಡಿದರು. ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯು ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಂತೆ ಕಳೆಗಟ್ಟಿತ್ತು.
ಸಂತೆಯಲ್ಲಿ ಮಕ್ಕಳು ತಂದ ತರಕಾರಿ, ಸೊಪ್ಪು, ಗೆಡ್ಡೆ ಗೆಣಸು ಹಣ್ಣು ಹಂಪಲು- ಬೀನ್ಸ್, ಅವರೆಕಾಯಿ, ಅಲಸಂಡೆ, ಬದನೆಕಾಯಿ, ಟೊಮೆಟೋ, ಬಸಳೆ, ನುಗ್ಗೆ ಸೊಪ್ಪು, ಒಂದೆಲಗ ಸೊಪ್ಪು, ಸೌತೆಕಾಯಿ, ಕೆಸದ ಗೆಡ್ಡೆ, ಸಿಹಿ ಕುಂಬಳ, ತೆಂಗಿನ ಕಾಯಿ, ಸಪೋಟ, ಸೀಬೆಕಾಯಿ, ಕಿತ್ತಳೆ ಹಣ್ಣು, ಬಾಳೆ ಹಣ್ಣು ಮುಂತಾದ ಹಣ್ಣು ಹಂಪಲು ಸೇರಿದಂತೆ ಕೋಳಿ ಮೊಟ್ಟೆಯನ್ನು ತಂದು ಸಂತೆಗೆ ವ್ಯಾಪಾರ ಮಾಡಿದರು. ಮಕ್ಕಳು ಗ್ರಾಹಕರನ್ನು ವಸ್ತುಗಳನ್ನು ನನ್ನ ಬಳಿಯಲ್ಲಿ ಖರಿದಿಸುವಂತೆ ಕರೆದು ಪೈಪೋಟಿ ನೀಡಿ ವ್ಯಾಪಾರ ಮಾಡಿದರು ಮಕ್ಕಳ ಪೋಷಕರು, ಗ್ರಾಮಸ್ಥರು ಮಕ್ಕಳ ಸಂತೆಗೆ ಬಂದು ತರಕಾರಿ, ಸೊಪ್ಪು, ಗೆಡ್ಡೆ ಗೆಣಸನ್ನು ಖರೀದಿಸಿದರು.
ಮುಖ್ಯ ಶಿಕ್ಷಕಿ ಕೆ.ಎಚ್.ಪ್ರಭಾ, ಸಹ ಶಿಕ್ಷಕಿ ಬಿ.ಎ.ಅರ್ಪಿತ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ್, ಉಪಾಧ್ಯಕ್ಷೆ ಕಲಾವತಿ ಲಕ್ಷ್ಮೀಕಾಂತ್, ಕುಸುಮಾ ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.