ರಾಮನಗರ: ಮೂವರು ರೌಡಿಗಳ ಗುಂಪೊಂದು ಲಾಂಗ್ ಗಳನ್ನು ಹಿಡಿದು ಯುವಕನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ರಾಯರದೊಡ್ಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ:
ನಗರದ ರಾಯರದೊಡ್ಡಿಯಲ್ಲಿರುವ ತಮ್ಮ ಮನೆ ಬಳಿಯ ಬ್ಯೂಟಿ ಪಾರ್ಲರ್ ಬಳಿ ಮಹಾಲಿಂಗ ತನ್ನ ಪತ್ನಿಯೊಂದಿಗೆ ನಿಂತಿದ್ದನು. ಈ ವೇಳೆ ವಾಹನದಲ್ಲಿ ಬಂದ ಮೂವರು ರೌಡಿಗಳು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಮಹಾಲಿಂಗನತ್ತ ನುಗ್ಗಿದ್ದಾರೆ. ಮೂವರು ರೌಡಿಗಳ ತಂಡ ಏಕಾಏಕಿ ನುಗ್ಗಿದ್ದರಿಂದ ಮಹಾಲಿಂಗ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಆದರೂ ಬಿಡದ ರೌಡಿಗಳು ಗಲ್ಲಿಗಲ್ಲಿಗಳಲ್ಲಿ ಆತನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆತನ ಪತ್ನಿ ‘ನನ್ನ ಗಂಡನ ಬಿಡ್ರೊ’ ಎಂದು ಜೋರಾಗಿ ಕೂಗಿಕೊಂಡು ರೌಡಿಗಳ ಹಿಂದೆ ಓಡಿದ್ದಾರೆ. ಗಲ್ಲಿಗಳಲ್ಲಿ ಓಡಿದ ಮಹಾಲಿಂಗ ರೌಡಿಗಳಿಂದ ತಪ್ಪಿಸಿಕೊಂಡಿದ್ದಾನೆ.ರೌಡಿಗಳು ಮಹಾಲಿಂಗನನ್ನು ಅಟ್ಟಾಡಿಸಿಕೊಂಡು ಹೋದ ದೃಶ್ಯಗಳು ಮನೆಯೊಂದರ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.6ಕೆಆರ್ ಎಂಎನ್ 6.ಜೆಪಿಜಿ.